ಪಾಕಿಸ್ತಾನದಲ್ಲಿ ಬಲವಂತವಾಗಿ ೬೦ ಹಿಂದೂಗಳ ಮತಾಂತರ !

ಮತಾಂಧ ನಗರಾಧ್ಯಕ್ಷರ ಮೇಲ್ವಿಚಾರಣೆಯಲ್ಲಿ ಮತಾಂತರ !

* ಕಳೆದ ೭೪ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಈ ರೀತಿಯಲ್ಲಿ ಸಾವಿರಾರು ಹಿಂದೂಗಳು ಮತಾಂತರಗೊಂಡಿದ್ದಾರೆ. ಆದ್ದರಿಂದಲೇ ಅಲ್ಲಿಯ ಹಿಂದೂಗಳ ಜನಸಂಖ್ಯೆ ಈಗ ಶೇ. ೨ ರಷ್ಟು ಉಳಿದಿದೆ ಹಾಗೂ ಭಾರತದಲ್ಲಿ ಕಳೆದ ೭೪ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೩ ರಷ್ಟರಿಂದ ೧೪ ರಷ್ಟು ಆಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಈಗ ಭಾರತ ಸರಕಾರವು ನೇತೃತ್ವವನ್ನು ವಹಿಸುವುದು ಅಗತ್ಯವಿದೆ. ಹೀಗೆ ಮಾಡದೇ ಇದ್ದರೆ ಖಂಡಿತವಾಗಿಯೂ ಪಾಕಿಸ್ತಾನದಲ್ಲಿ ಯಾವ ಕೆಲಸವನ್ನು ಮಾಡಲೂ ಹಿಂದೂಗಳು ಉಳಿದಿರುವುದಿಲ್ಲ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್​​ ಪ್ರಾಂತ್ಯದ ಮಾಲ್ಟಿ ಪ್ರದೇಶದಲ್ಲಿ ೬೦ ಹಿಂದೂಗಳನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಮಾಡಲಾಯಿತು. ಇಲ್ಲಿಯ ಮತಾಂಧ ನಗರಾಧ್ಯಕ್ಷ ಅಬ್ದುಲ ರಉಫ ನಿಜಮಾನಿಯ ಸಮ್ಮುಖದಲ್ಲಿ ಅವರನ್ನು ಮತಾಂತರಿಸಲಾಯಿತು. ಈ ಘಟನೆಯ ವಿಡಿಯೋ ರಉಫ ಇವರು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದರು. ರಉಫ ಇವರು ಫೇಸ್‍ಬುಕ್‍ನಲ್ಲಿ ಪೋಸ್ಟ ಮಾಡಿ, ‘ಇಂದು ನನ್ನ ಮೇಲ್ವಿಚಾರಣೆಯಲ್ಲಿ ೬೦ ಜನರು ಮುಸಲ್ಮಾನರಾದರು ಅವರಿಗಾಗಿ ಪ್ರಾರ್ಥನೆ ಮಾಡಿ.’ ಎಂದು ಬರೆದಿದ್ದರು.