ಗಾಂಧಿ ಕುಟುಂಬದವರು ದೇಶದ ಹಾನಿಯನ್ನು ಎಷ್ಟು ಮಾಡಿದರೋ ಅಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಸಹ ಮಾಡಿಲ್ಲ ! – ಚಲನಚಿತ್ರ ನಿರ್ಮಾಪಕ ಅಶೋಕ ಪಂಡಿತ್

ಅಶೋಕ ಪಂಡಿತ್

ಮುಂಬಯಿ – ಸ್ವಂತದ ಲಾಭಕ್ಕಾಗಿ ಗಾಂಧಿ ಕುಟುಂಬವು ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರಿಗೆ ಸೊಪ್ಪನ್ನು ಹಾಕಿದರು. ತುರ್ತು ಪರಿಸ್ಥಿತಿಯನ್ನು ಹೇರಿದರು. ಅದೇ ಕಾಲದಲ್ಲಿ ನಕ್ಸಲರು ಬೆಳೆದರು. ಗಾಂಧಿ ಕುಟುಂಬದವರು ದೇಶದ ಹಾನಿಯನ್ನು ಎಷ್ಟು ಮಾಡಿದರೋ ಅಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಸಹ ಮಾಡಿಲ್ಲ, ಎಂಬ ಕಠಿಣ ಪದಗಳಲ್ಲಿ ಚಲನಚಿತ್ರ ನಿರ್ಮಾಪಕ ಅಶೋಕ ಪಂಡಿತ್ ಅವರು ಟ್ವಿಟರ್ ಮೂಲಕ ಟೀಕಿಸಿದ್ದಾರೆ. ಕಾಂಗ್ರೆಸ್‍ನ ನಾಯಕ ರಾಹುಲ್ ಗಾಂಧಿಯವರು ಟ್ವೀಟ್ ಮೂಲಕ ನಗರ ನಕ್ಸಲ ಸ್ಟೆನ್ ಸ್ವಾಮಿಯವರ ಮೃತ್ಯುವಿನ ನಂತರ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಈ ಬಗ್ಗೆ ಅಶೋಕ ಪಂಡಿತ್ ಈ ಮೇಲಿನ ಟೀಕೆಯನ್ನು ಮಾಡಿದ್ದಾರೆ.

ಅಶೋಕ ಪಂಡಿತ್ ಇವರು ಟ್ವೀಟ್‍ನಲ್ಲಿ ಈ ಮುಂದಿನಂತೆ ತಿಳಿಸಿದ್ದಾರೆ,

. ರಾಹುಲ್ ಗಾಂಧಿ ಇವರ ಈ ಟ್ವೀಟ್ ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ನಕ್ಸಲರಿಗೆ ನೀಡಿದ ಬೆಂಬಲ ಮತ್ತು ಪೋಷಿಸುತ್ತಿದೆ ಎಂಬುದನ್ನೇ ತೋರಿಸುತ್ತದೆ. ನಕ್ಸಲರಿಂದ ಸಾವಿರಾರು ಸೈನಿಕರು ಹುತಾತ್ಮರಾದರು, ನಕ್ಸಲ್ ಪೀಡಿತ ಗ್ರಾಮಗಳು ಹಿಂದುಳಿದವು ಮತ್ತು ದೇಶದ ಭದ್ರತೆಗೂ ಅಪಾಯ ಉಂಟಾಯಿತು. ಇದೆಲ್ಲವೂ ಚೀನಾದ ಪಿತೂರಿಯಾಗಿತ್ತು.

. ಸ್ಟೆನ ಸ್ವಾಮಿ ಗಲಭೆಯನ್ನು ನಡೆಸಿದ ಪ್ರಕರಣದಲ್ಲಿ ಸೆರೆಮನೆಯಲ್ಲಿದ್ದರು; ಆದರೆ ಪ್ರಸಿದ್ಧ ಸುದ್ದಿ ವಾಹಿನಿಗಳು ಮತ್ತು ಪತ್ರಕರ್ತರು ಈ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಹಿಂದೆ ಭಯೋತ್ಪಾದಕನಾಗಿದ್ದ ಯಾಸಿನ್ ಮಲಿಕ್(ಈಗಿನ ಕಾಶ್ಮೀರದಲ್ಲಿ ‘ಜೆ.ಕೆ.ಎಲ್.ಎಫ್.’ ಹೆಸರಿನ ರಾಜಕಿಯ ಸಂಘಟನೆ ನಡೆಸುತ್ತಿದ್ದ) ಆತನ ಮೃತ್ಯುವಿನ ನಂತರವೂ ಶ್ರದ್ಧಾಂಜಲಿ ಅರ್ಪಿಸುವ ದಿನ ದೂರವಿಲ್ಲ.

. ರಾಹುಲ್ ಗಾಂಧಿ, ನಿಮ್ಮ ಪಕ್ಷವು ವಿಭಜನವಾದಿ ಗಿಲಾನಿಯ ಚಿಕಿತ್ಸೆಗಾಗಿ ದೆಹಲಿಯ ಪಂಚತಾರಾ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ. ಗಿಲಾನಿಯು ಸಾವಿರಾರು ಕಾಶ್ಮೀರಿ ಹಿಂದೂಗಳ ಸಾವಿಗೆ ಕಾರಣಕರ್ತರಾಗಿದ್ದರು. ಶತ್ರುವನ್ನು ಬೆಂಬಲಿಸುವುದು ಇದು ನಿಮ್ಮ ರಕ್ತದಲ್ಲಿಯೇ ಇದೆ.