ತಾಲಿಬಾನ್ ನ್ನು ಸಮರ್ಥಿಸುವ ‘ಪೋಸ್ಟ್’ ಅಥವಾ ಹೇಳಿಕೆಗಳನ್ನು ನೀಡುವವರ ಮೇಲೆ ಕಾರ್ಯಾಚರಣೆ ಮಾಡಲಾಗುವುದು ! – ಮಧ್ಯಪ್ರದೇಶ ಸರಕಾರ

*ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರದ ಈ ನಿರ್ಣಯವು ಅಭಿನಂದನೀಯವಾಗಿದೆ. ರಾಷ್ಟ್ರ ಪ್ರೇಮಿಗಳಿಗೆ ‘ವಾಸ್ತವದಲ್ಲಿ ಇಂತಹ ಆದೇಶವನ್ನು ಕೇಂದ್ರ ಸರಕಾರವು ನೀಡುವುದು ಅವಶ್ಯಕವಾಗಿದೆ ಮತ್ತು ಯಾರು ಇಲ್ಲಿಯವರೆಗೆ ಇಂತಹ ಸಮರ್ಥನೆಯನ್ನು ಮಾಡಿದ್ದಾರೆಯೋ ಅವರನ್ನು ತಕ್ಷಣ ಬಂಧಿಸಿ ಕಾರಾಗೃಹಕ್ಕೆ ತಳ್ಳಬೇಕು’ ಎಂದು ಧರ್ಮಪ್ರೇಮಿಗಳಿಗೆ ಅನಿಸುತ್ತಿದೆ !

ಭೋಪಾಲ (ಮಧ್ಯಪ್ರದೇಶ) – ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ. ಇವರು ಪ್ರಸಾರ ಮಾಧ್ಯಮಗಳಲ್ಲಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ.

ಆರೋಗ್ಯ ಮಂತ್ರಿ ಸಾರಂಗ ಇವರು ‘ತಾಲಿಬಾನಿನ ಸಮರ್ಥನೆ ಮಾಡುವ ಪೋಸ್ಟ್ ಮತ್ತು ಹೇಳಿಕೆಗಳನ್ನು ನೀಡುವುದು ದುರದೃಷ್ಟಕರವಾಗಿದೆ. ಸರಕಾರವು ಇದರ ಮೇಲೆ ಗಮನವಿಟ್ಟಿದೆ ಮತ್ತು ಅವುಗಳ ಮೇಲೆ ಕಾರ್ಯಾಚರಣೆ ಮಾಡಲಾಗುವುದು. ಓಲೈಕೆಯ ರಾಜಕಾರಣವೂ ಈ ದೇಶ ಮತ್ತು ರಾಜ್ಯದಲ್ಲಿ ನಡೆಯುವುದಿಲ್ಲ’ ಎಂದು ಹೇಳಿದ್ದಾರೆ.