ಸಾಮಾಜಿಕ ಜಾಲತಾಣದಲ್ಲಿ ಶ್ರೀಗಣೇಶನ ಹೆಸರಿನ ಪಾಸ ಪೋರ್ಟ್ ಪ್ರಸಾರ ಮಾಡಿ ಶ್ರೀಗಣೇಶನ ವಿಡಂಬನೆ !

  • ಹಿಂದೂಗಳಲ್ಲಿ ಧರ್ಮಾಭಿಮಾನದ ಕೊರತೆಯಿಂದ ಅವರು ತಮ್ಮದೇ ಸ್ವಂತದ ಶ್ರದ್ಧಾ ಸ್ಥಾನಗಳನ್ನು ಅಪಮಾನಿಸುತ್ತಾರೆ ಮತ್ತು ಎಲ್ಲಾ ಹಿಂದೂಗಳು ಅದನ್ನು ವಿರೋಧಿಸುವ ಬದಲು ಅದಕ್ಕೆ ನಗುತ್ತಾ ಪ್ರೋತ್ಸಾಹಿಸುತ್ತಾರೆ. ಇಂತಹವರ ಮೇಲೆ ಶ್ರೀಗಣೇಶನ ಕೃಪೆ ಎಂದಾದರೂ ಆಗಬಹುದೇ ? ಈ ಬಗ್ಗೆ ಹಿಂದೂಗಳು ವಿಚಾರ ಮಾಡಬೇಕು ಮತ್ತು ಈ ರೀತಿಯಲ್ಲಿ ಯಾರಿಂದಾದರೂ ದೇವತೆಗಳ ವಿಡಂಬನೆ ಆಗುತ್ತಿದ್ದರೆ ಅವರಿಗೆ ಅದನ್ನು ತಿಳಿಸಿಹೇಳಬೇಕು ! – ಸಂಪಾದಕರು
  • ಅನ್ಯ ಪಂಥದವರು ತಮ್ಮ ಶ್ರದ್ಧಾ ಸ್ಥಾನಗಳನ್ನು ಯಾವತ್ತೂ ಈ ರೀತಿಯಲ್ಲಿ ಅಪಮಾನಿಸುವುದಿಲ್ಲ, ಇದನ್ನು ಗಮನದಲ್ಲಿಟ್ಟು ಕೊಳ್ಳಬೇಕು! – ಸಂಪಾದಕರು

ಈ ಚಿತ್ರವನ್ನು ಹಾಕುವ ಉದ್ದೇಶ ಯಾರ ಭಾವನೆಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜವಾದ ಸ್ಥಿತಿ ತಿಳಿಸುವ ಉದ್ದೇಶವಾಗಿದೆ.

ಮುಂಬಯಿ, ೬ ಸೆಪ್ಟೆಂಬರ(ವಾರ್ತೆ.) – ‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಶ್ರೀಗಣೇಶನ ಆಗಮನ ಆಗಲಿದೆ’, ಎಂಬ ಸಂಕಲ್ಪನೆಯನ್ನು ಇಟ್ಟುಕೊಂಡು ಶ್ರೀಗಣೇಶನ ಚಿತ್ರ ಇರುವ ಪಾಸ್ ಪೋರ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀಗಣೇಶ ದೇವರನ್ನು ಅಪಮಾನಿಸುತ್ತಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಪಾಸ್ ಪೋರ್ಟ್‌ನ ಮೇಲೆ ಭಾಗ್ಯನಗರ (ಹೈದರಾಬಾದ) ಪಾಸ್‌ಪೋರ್ಟ್ ಕಚೇರಿಯ ಮೊಹರು ಇದೆ ಮತ್ತು ಪಾಸ್ ಪೋರ್ಟ್ ಅನ್ನು ಕೊಟ್ಟಿರುವ ಅಧಿಕಾರಿ ಎಂದು ಪಿ ಕೃಷ್ಣ ಚಾರ್ಯ ಎಂನವರ ಹೆಸರು ಮತ್ತು ಸಹಿ ಇದೆ. ಈ ಪಾಸ್‌ಪೋರ್ಟ್ ಅನ್ನು ತಮಾಷೆಗೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ.

ಈ ಪಾಸ್ ಪೋರ್ಟ್‌ನ ಮೇಲೆ ಶ್ರೀ ಗಣೇಶನ ಚಿತ್ರ ಮುದ್ರಿಸಿ ಅದರ ಮೇಲೆ ರಾಷ್ಟ್ರೀಯತೆ ‘ಭಾರತೀಯ’, ಜನ್ಮಸ್ಥಳ ‘ಹಿಮಾಲಯ’, ವಾಸಸ್ಥಳ ‘ಸ್ವರ್ಗ’, ಪ್ರವಾಸ ಮಾಡುವ ಸ್ಥಳ ‘ಮುಂಬಯಿ’, ತಂದೆ ‘ಶಿವ’, ತಾಯಿ ‘ಪಾರ್ವತಿ’, ಮತ್ತು ಪಾಸ್‌ಪೋರ್ಟ್‌ನ ಕಾಲಾವಧಿ ‘ಶಾಶ್ವತ’, ಎಂದು ವಿವರಗಳನ್ನು ಬರೆಯಲಾಗಿದೆ.

ಈ ಪಾಸ್‌ಪೋರ್ಟ್ ಕೊಟ್ಟಿರುವ ಅಧಿಕಾರಿ ಪಿ ಕೃಷ್ಣ ಚಾರ್ಯಾ ಇವರ ಹೆಸರನ್ನು ದೃಢೀಕರಿಸಲು, ಹಾಗೂ ಪಾಸ್‌ಪೋರ್ಟ್ ಮೇಲಿನ ಸಹಿ ಮತ್ತು ಠಸ್ಸೆ(ಮೊಹರು)ಯ ವಿಷಯವಾಗಿ ಸತ್ಯಾಸತ್ಯತೆ ಪರೀಕ್ಷಿಸಲು ದೈನಿಕ ‘ಸನಾತನ ಪ್ರಭಾತ’ನ ಪ್ರತಿನಿಧಿಗಳು ಭಾಗ್ಯನಗರದ ಪಾಸ್‌ಪೋರ್ಟ್ ಕಾರ್ಯಾಲಯಕ್ಕೆ ೦೪೦-೨೭೭೧೫೩೩೩ ಈ ಸಂಪರ್ಕ ಸಂಖ್ಯೆಗೆ ಕರೆ ಮಾಡಲು ಪ್ರಯತ್ನ ಮಾಡಿದರು; ಆದರೆ ಸಂಪರ್ಕ ಮಾಡಲು ಪದೇಪದೇ ಬರುವ ಅಡಚಣೆಯಿಂದ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಈ ವಿಷಯವಾಗಿ ದೈನಿಕ ‘ಸನಾತನ ಪ್ರಭಾತ’ನ ಪ್ರತಿನಿಧಿಯು ಹೈದ್ರಾಬಾದ್ ಪಾಸ್‌ಪೋರ್ಟ್ ಕಾರ್ಯಾಲಯದ ‘[email protected]’ ಈ ಅಧಿಕೃತ ಇ-ಮೇಲ್ ವಿಳಾಸಕ್ಕೆ ಪತ್ರ ಕಳಿಸಿ ಶ್ರೀಗಣೇಶನ ಮಾಡಲಾಗಿರುವ ವಿಡಂಬನೆಯ ವಿಷಯವಾಗಿ ಸ್ಪಷ್ಟೀಕರಣ ನೀಡುವಂತೆ ಕರೆ ಕೊಟ್ಟಿದ್ದಾರೆ