ದೇವಸ್ಥಾನದಲ್ಲಿ ಆನೆಗಳ ಬಳಕೆ ಮಾಡುವುದು, ನಮ್ಮ ಸಂಸ್ಕೃತಿಯ ಒಂದು ಭಾಗ ! – ಸರ್ವೋಚ್ಚ ನ್ಯಾಯಾಲಯ

ದೇವಸ್ಥಾನದಲ್ಲಿ ಆನೆಗಳ ಬಳಕೆಯ ಬಗ್ಗೆ ಕೇರಳ ಉಚ್ಚ ನ್ಯಾಯಾಲಯದಿಂದ ನಿಷೇಧ; ಸರ್ವೋಚ್ಚ ನ್ಯಾಯಾಲಯದಿಂದ ತಡೆ ಆಜ್ಞೆ

ನವದೆಹಲಿ – ಕೇರಳದಲ್ಲಿನ ದೇವಸ್ಥಾನದಲ್ಲಿ ಆನೆಗಳ ಮೆರವಣಿಗೆಯ ಮೇಲೆ ನಿಷೇಧ ಮತ್ತು ಧಾರ್ಮಿಕ ವಿಧಿಗಳಲ್ಲಿ ಆನೆಗಳ ಬಳಕೆಯ ಮೇಲೆ ನಿಷೇಧ ಹೇರಿರುವ ಕೇರಳ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ಆಜ್ಞೆ ನೀಡಿದೆ. ದೇವಸ್ಥಾನಗಳಲ್ಲಿ ಆನೆಗಳನ್ನು ಬಳಸುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ, ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈಗ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ನೋಟಿಸ್ ವಿಧಿಸಿದೆ.

ಮಾರ್ಚ್ ೧೭ ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮ ಅವರು ಈ ತಡೆಯಾಜ್ಞೆ ನೀಡಿದ್ದಾರೆ. ಗಜ ಸೇವಾ ಸಮಿತಿ ಹೆಸರಿನ ಒಂದು ಸ್ವಯಂ ಸೇವಾ ಸಂಸ್ಥೆಯು ಕೇರಳ ಉಚ್ಚ ನ್ಯಾಯಾಲದ ಆದೇಶದ ಕುರಿತು ಅರ್ಜಿ ನೀಡಿದಾಗ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡಿದೆ. ದೇವಸ್ಥಾನಗಳಲ್ಲಿ ಆನೆಯ ಬಳಕೆಯ ಬಗ್ಗೆ ಕೇರಳ ಉಚ್ಚ ನ್ಯಾಯಾಲಯವು ಜನವರಿ ೨೦೨೫ ರಂದು ನಿಷೇಧ ಹೇರಿತ್ತು.

ತಥಾ ಕಥಿತ ಪ್ರಾಣಿ ಅಧಿಕಾರ ಕಾರ್ಯಕರ್ತರು ವಿದೇಶಿ ನಿಧಿಗಳ ಮೂಲಕ ಹಿಂದೂ ಸಂಪ್ರದಾಯ ತಡೆಯುವ ಪ್ರಯತ್ನದಲ್ಲಿ ! – ಅರ್ಜಿದಾರ ಗಜ ಸೇವಾ ಸಮಿತಿಯ ಆರೋಪ

ಆನೆಗಳ ಮೇಲೆ ನಿಷೇಧ ಹೇರಲು ಆಗ್ರಹಿಸಿ ತಥಾ ಕಥಿತ ಕಾರ್ಯಕರ್ತರು ೨ ಸಾವಿರ ವರ್ಷಗಳಿಗಿಂತಲೂ ಪ್ರಾಚೀನ ಹಿಂದೂ ಸಾಂಪ್ರದಾಯ ತಡೆಯಲು ಬಯಸುತ್ತಿದ್ದಾರೆ. ಈ ಕಾರ್ಯಕರ್ತರು ವಿದೇಶಿ ನಿಧಿಯ ಸಹಾಯದಿಂದ ಕೆಲಸ ಮಾಡಿ ಹಿಂದೂಗಳ ಸಾಂಪ್ರದಾಯವನ್ನು ತಡೆಯುತ್ತಾರೆ. ಕೇರಳದಲ್ಲಿ ಆನೆಯನ್ನು ಪವಿತ್ರ ಹಾಗೂ ಶಕ್ತಿಯ ಪ್ರತಿಕ ಎಂದು ಅದರ ಪೂಜೆ ಮಾಡಲಾಗುತ್ತದೆ.

ಕೇರಳ ಉಚ್ಚ ನ್ಯಾಯಾಲಯವು ಹೇರಿರುವ ನಿರ್ಬಂಧ

೧. ಕೇರಳ ಉಚ್ಚ ನ್ಯಾಯಾಲಯವು ಮೊದಲು ನವೆಂಬರ್ ೨೦೨೪ ರಂದು ಪ್ರಾಣಿ ಅಧಿಕಾರ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸುವಾಗ ದೇವಸ್ಥಾನದಲ್ಲಿ ಆನೆಯ ಬಳಕೆಯ ಬಗ್ಗೆ ಅನೇಕ ನಿರ್ಬಂಧಗಳನ್ನು ಹೇರಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು; ಆದರೆ ಮತ್ತೆ ಜನವರಿ ೨೦೨೫ ರಂದು ಉಚ್ಚ ನ್ಯಾಯಾಲಯವು ಈ ಸಂದರ್ಭದಲ್ಲಿ ನೂತನ ಆದೇಶ ನೀಡಿತು.

ಅ. ಮೇ ೩೧.೨೦೨೨ ಮೊದಲು ನೋಂದಣಿ ಆಗದಿರುವ ದೇವಸ್ಥಾನಗಳು ಮತ್ತು ದೇವಸ್ಥಾನಗಳ ಆನೆಗಳ ಮೆರವಣಿಗೆ ತೆಗೆಯಲು ಸಾಧ್ಯವಿಲ್ಲ.

ಆ. ಆನೆಯ ಬಳಕೆ ಅನಿವಾರ್ಯವಿರುವಂತಹ ಯಾವುದೇ ಧಾರ್ಮಿಕ ಸಂಪ್ರದಾಯವಿಲ್ಲ. ದೇವಸ್ಥಾನದಲ್ಲಿ ಬಳಸುವ ಆನೆ ‘ನಾಝಿ ಛಾವಣಿ ‘ ಅಂತಹ (ನಾಝಿ ಛಾವಣಿಯಲ್ಲಿ ಜ್ಯೂ ಜನರಿಗೆ ಕಿರುಕುಳ ನೀಡಿ ಅವರನ್ನು ಕೊಲ್ಲಲಾಗಿತ್ತು.) ಜೀವನ ನಡೆಸುತ್ತವೆ.

ಇ. ಯಾವುದೇ ಉತ್ಸವದಲ್ಲಿ ಆನೆಗೆ ೩೦ ಕಿಲೋಮೀಟರ್ಗಿಂತಲೂ ಹೆಚ್ಚು ನಡೆಸುವುವಂತಿಲ್ಲ. ಅವುಗಳಿಗೆ ಒಂದು ದಿನದಲ್ಲಿ ೧೨೫ ಕಿಲೋಮೀಟರ್ಗಿಂತಲೂ ಹೆಚ್ಚು ದೂರ ಕೊಂಡೊಯ್ಯಲು ಸಾಧ್ಯವಿಲ್ಲ. ಅವುಗಳಿಗೆ ೬ ಗಂಟೆಗಿಂತಲೂ ಹೆಚ್ಚಿನ ಸಮಯ ಯಾವುದೇ ವಾಹನದಲ್ಲಿ ಇರಿಸಲು ಸಾಧ್ಯವಿಲ್ಲ.

ಈ. ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ಸಾರ್ವಜನಿಕ ರಸ್ತೆಗಳಲ್ಲಿ ಆನೆಗಳ ಮೆರವಣಿಗೆ ನಿಷೇಧವಿರುವುದು. ರಾತ್ರಿಯ ಸಮಯದಲ್ಲಿ ಆನೆಗಳ ಬಳಕೆಯ ಕುರಿತು ಕೂಡ ನಿಷೇಧ ಇರುವುದು. ಮೆರವಣಿಗೆಯಲ್ಲಿ ಕೂಡ ಆನೆಗಳ ನಡುವೆ ೩ ಮೀಟರ್ ಅಂತರ ಇಡಬೇಕು.

ದೇವಸ್ಥಾನದಿಂದ ರೋಬೋಟಿಕ್ ಆನೆಗಳ ಬೇಡಿಕೆ !

ಕೇರಳ ಉಚ್ಚ ನ್ಯಾಯಾಲಯದ ಆದೇಶದ ನಂತರ ಕೇರಳದಲ್ಲಿನ ದೊಡ್ಡ ದೇವಸ್ಥಾನದಲ್ಲಿ, ಈಗ ಆನೆಗಳ ಬಳಕೆ ಅಸಾಧ್ಯ ವಾಗುವುದು. ಉಚ್ಚ ನ್ಯಾಯಾಲಯದ ಆದೇಶದ ನಂತರ ಅನೇಕ ದೇವಸ್ಥಾನಗಳಿಂದ ರೋಬೋಟಿಕ್ ಆನೆಗಳನ್ನು ತರಿಸಲಾಗಿದ್ದವು. ಡಿಸೆಂಬರ್ ೨೦೨೪ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಆದರೂ ಕೂಡ ಜನವರಿ ೨೦೨೫ ರಲ್ಲಿ ಉಚ್ಚ ನ್ಯಾಯಾಲಯವು ಮತ್ತೊಂದು ನೂತನ ಆದೇಶ ನೀಡಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಪುನಃ ತಡೆ ಆಜ್ಞೆ ನೀಡಿದೆ.

ಸಂಪಾದಕೀಯ ನಿಲುವು

ಹಿಂದುಗಳ ಧಾರ್ಮಿಕ ಪರಂಪರೆಗಳ ಬಗ್ಗೆ ಈ ರೀತಿ ನಿಷೇಧ ಹೇರಬಾರದು, ಅದಕ್ಕಾಗಿ ಹಿಂದೂ ರಾಷ್ಟ್ರದ ಆವಶ್ಯಕತೆ ಇದೆ.