VIBE Survey Report : ಭಾರತದ ಶೇ. 81ರಷ್ಟು ಯುವಕರಿಗೆ ರಾಜಕೀಯ ಪಕ್ಷಗಳ ಮೇಲೆ ನಂಬಿಕೆಯಿಲ್ಲ! – ಸಮೀಕ್ಷೆಯ ಅವಲೋಕನ

VIBE ವರದಿ ಬಿಡುಗಡೆ ಸಮಾರಂಭದಲ್ಲಿ ಯೂತ್ ಕಿ ಆವಾಜ್ ಸಂಸ್ಥಾಪಕ ಅನ್ಶುಲ್ ತಿವಾರಿ ಮತ್ತು YLAC ಸಹ ಸಂಸ್ಥಾಪಕ ರೋಹಿತ್ ಕುಮಾರ್

ನವದೆಹಲಿ: ‘ವಾಯ್ಸ್ ಫಾರ್ ಇನ್ಕ್ಲೂಷನ್’ (ಒಳಗೊಳ್ಳುವಿಕೆಗಾಗಿ ಧ್ವನಿ), ‘ಬಿಲಾಂಗಿಂಗ್ ಆಂಡ್ ಎಂಪವರ್ಮೆಂಟ್’ (ಸೇರುವಿಕೆ ಮತ್ತು ಸಬಲೀಕರಣ) ಮತ್ತು ‘ಪ್ರಾಜೆಕ್ಟ್ ಪೊಟೆನ್ಶಿಯಲ್’ (ಸಾಮರ್ಥ್ಯಕ್ಕೆ ಸಂಬಂಧಿಸಿದ ಯೋಜನೆ)ಇವುಗಳ ವರದಿಗಳ ಪ್ರಕಾರ, ಶೇ. 81ರಷ್ಟು ಭಾರತೀಯ ಯುವಕರಲ್ಲಿ ತೀವ್ರ ದೇಶಭಕ್ತಿಯ ಭಾವನೆ ಇದೆ. ಆದರೆ, ರಾಜಕೀಯ ಪಕ್ಷಗಳ ಮೇಲೆ ಅವರಿಗೆ ನಂಬಿಕೆ ಇಲ್ಲ. ಈ ವರದಿಯು 4ಸಾವಿರ 972 ಯುವಕರ ಸಮೀಕ್ಷೆಯನ್ನು ಆಧರಿಸಿದೆ. ಈ ಸಮೀಕ್ಷೆಯನ್ನು 2024ರ ಜೂನ್ ನಿಂದ ಆಗಸ್ಟ್ ವರೆಗೆ ನಡೆಸಲಾಗಿದೆ.

ವರದಿಯಲ್ಲಿನ ಪ್ರಮುಖ ಅವಲೋಕನಗಳು!

1 . 2024ರ ಲೋಕಸಭಾ ಚುನಾವಣೆಯಲ್ಲಿ ಅನೇಕ ಯುವಕರು ಮತದಾನ ಚಲಾಯಿಸಲಿಲ್ಲ. ಇದು ಭಾರತೀಯ ಯುವಕರು ನಿಧಾನವಾಗಿ ರಾಜಕೀಯದಿಂದ ದೂರ ಸರಿಯುತ್ತಿದ್ದಾರೆ ಎಂದು ಸೂಚಿಸುತ್ತದೆ.

2 . ದೇಶದ ಶೇ. 29ರಷ್ಟು ಯುವಕರು ರಾಜಕೀಯದಿಂದ ಸಂಪೂರ್ಣವಾಗಿ ದೂರವಿದ್ದಾರೆ. ಶೇ. 26ರಷ್ಟು ಯುವಕರು ಯಾವುದೇ ಪಕ್ಷಕ್ಕೆ ಸೇರದಿದ್ದರೂ ರಾಜಕೀಯ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಕೇವಲ ಶೇ. 11ರಷ್ಟು ಯುವಕರು ಯಾವುದಾದರೂ ಪಕ್ಷದ ಸದಸ್ಯರಾಗಿದ್ದಾರೆ.

3 .ಶೇ. 49ರಷ್ಟು ಯುವಕರು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಪ್ರಾರಂಭಿಸಲು ಬಯಸುತ್ತಾರೆ. ಆದರೆ, ಅವರಲ್ಲಿ ಶೇ. 58ರಷ್ಟು ಯುವಕರಿಗೆ ನಿಧಿಯ ಕೊರತೆ ಮತ್ತು ಶೇ. 39ರಷ್ಟು ಯುವಕರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ.

4 .ಯುವಕರು ಸಾಂಪ್ರದಾಯಿಕ ರಾಜಕೀಯಕ್ಕಿಂತ ವಿಷಯಾಧಾರಿತ(ಸಮಸ್ಯೆ ಆಧಾರಿತ?) ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಿದ್ದಾರೆ. ಅವರು ಪರಿಸರ, ಲಿಂಗ ಸಮಾನತೆ, ಶಿಕ್ಷಣ ಮತ್ತು ನಿರುದ್ಯೋಗದಂತಹ ವಿಷಯಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. (ಇದರಿಂದ ಅವರು  ವೋಕಿಝಮ್ ‘ ಎಂಬ ಮೋಸದ ಸಾಮಾಜಿಕ ನ್ಯಾಯದ ಮುಖವಾಡವನ್ನು ಧರಿಸಿದ  ಸಾಮ್ಯವಾದಿಗಳ(ಕಮ್ಯುನಿಸಂ?) ಹತ್ತಿರ ಹೋಗಬಾರದು, ಎಂಬುದರ ಕಡೆಗೆ ಗಮನ ನೀಡಬೇಕು- ಸಂಪಾದಕರು ) ಭಾರತದಲ್ಲಿನ ಯುವಕರು ಈಗ  ಕೇವಲ ಮತದಾರರಾಗಿ ಉಳಿದಿಲ್ಲ, ಅವರು  ನೀತಿ ರಚನೆಯಲ್ಲಿ ಭಾಗವಹಿಸಲು ಬಯಸುತ್ತಾರೆ.

ಸಂಪಾದಕೀಯ ನಿಲುವು

ಕಳೆದ 78 ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಯುವಕರಿಗೆ ಮಾತ್ರವಲ್ಲ, ಎಲ್ಲಾ ವಯಸ್ಸಿನವರಿಗೂ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಉಳಿದಿಲ್ಲ. ಭವಿಷ್ಯದಲ್ಲಿ ಜನರು ಪರ್ಯಾಯ ವ್ಯವಸ್ಥೆಯನ್ನು ರಚಿಸುವಂತೆ ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ!