ಮುಜಾಫರ್‌ನಗರ (ಉತ್ತರ ಪ್ರದೇಶ) ದ ಶಿವಸೇನೆಯ ಜಿಲ್ಲಾಧ್ಯಕ್ಷರ ಘೋಷಣೆ
ಮುಜಾಫ್ಫರ್‌ನಗರ (ಉತ್ತರ ಪ್ರದೇಶ) – ಔರಂಗಜೇಬನ ಗೋರಿಯನ್ನು ಕೆಡವಿದರೆ 100 ಗುಂಟೆ ಭೂಮಿ ಮತ್ತು 11 ಲಕ್ಷ ನಗದು ನೀಡುವುದಾಗಿ ಇಲ್ಲಿನ ಶಿವಸೇನೆಯ ಜಿಲ್ಲಾಧ್ಯಕ್ಷ ಬಿಟ್ಟು ಸಿಖೇಡಾ ಘೋಷಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಸಿಖೇಡಾ, ಔರಂಗಜೇಬನನ್ನು ಬೆಂಬಲಿಸುವವರನ್ನು ಚಪ್ಪಲಿಯಿಂದ ಹೊಡೆಯಬೇಕು. ದೇಶದ ಮೊಘಲರ ಎಲ್ಲಾ ಗೋರಿಗಳು ಮತ್ತು ಅವರ ಹೆಸರಿನ ನಾಮಫಲಕಗಳನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.