ನೇಪಾಳದ ವಿದೇಶಾಂಗ ಸಚಿವರಿಗೆ ಸ್ಪಷ್ಟ ಪಡಿಸಿದ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ !
ಕಾಠಮಾಂಡು (ನೇಪಾಳ) – ನೇಪಾಳದ ವಿದೇಶಾಂಗ ಸಚಿವ ಅರಜೂ ರಾಣ ದೇವುಬಾ ಭಾರತದ ಪ್ರವಾಸದಲ್ಲಿದ್ದಾರೆ. ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ್ ಇವರ ಜೊತೆಗೆ ಅನೇಕ ಅಂಶಗಳ ಕುರಿತು ಚರ್ಚಿಸಿದರು. ಇದರಲ್ಲಿ ನೇಪಾಳದಲ್ಲಿನ ರಾಜಪ್ರಭುತ್ವದ ಬೆಂಬಲಕ್ಕೆ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಕೂಡ ಚರ್ಚೆ ನಡೆಯಿತು. ಜೈ ಶಂಕರ್ ಇವರು ಆರಜೂ ರಾಣಾ ಇವರಿಗೆ, ‘ನೇಪಾಳದಲ್ಲಿನ ರಾಜಪ್ರಭುತ್ವದ ಬೆಂಬಲಕ್ಕೆ ನಡೆಯುತ್ತಿರುವ ಚಳುವಳಿಯಲ್ಲಿ ಭಾರತದ ಯಾವುದೇ ಪಾತ್ರ ಇಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ. ‘ನೇಪಾಳಿ ರಫ್ತಿನಲ್ಲಿ ಅಡಚಣೆ ನಿಧಾನವಾಗಿ ಕಡಿಮೆ ಮಾಡುವ ಕುರಿತು ಭಾರತ ಆಶ್ವಾಸನೆ ನೀಡಿದೆ. ಇಬ್ಬರು ಸಚಿವರು ದ್ವಿಪಕ್ಷಿಯ ಸಂಬಂಧ ಸುಧಾರಣೆಯ ಕುರಿತು ಕೂಡ ಚರ್ಚೆ ನಡೆಸಿದರು.
ಇತ್ತೀಚಿಗೆ ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಶಹಾ ಇವರ ಸ್ವಾಗತಕ್ಕಾಗಿ ನೇಪಾಳದ ರಾಜಧಾನಿ ಕಾಠಮಾಂಡೂನಲ್ಲಿ ಸಾವಿರಾರು ಜನರು ಸೇರಿದ್ದರು. ಈ ಸಮಯದಲ್ಲಿ ಜ್ಞಾನೇಂದ್ರ ಶಹಾ ಇವರ ಬೆಂಬಲಕ್ಕೆ ನೇಪಾಳದಲ್ಲಿ ರಾಜಪ್ರಭುತ್ವ ಪುನರಾರಂಭ ಮಾಡುವ ಮತ್ತು ಹಿಂದೂ ಧರ್ಮಕ್ಕೆ ಮತ್ತೊಮ್ಮೆ ರಾಜ್ಯ ಧರ್ಮ ಮಾಡುವ ಬೇಡಿಕೆ ಸಲ್ಲಿಸಲಾಯಿತು. ಗುಂಪಿನಿಂದ ‘ರಾಜನಿಗಾಗಿ ಅರಮನೆ ಖಾಲಿ ಮಾಡಿ’ ಮತ್ತು ‘ರಾಜ ಮರಳಿ ಬಾ, ದೇಶ ಉಳಿಸು’ ಹೇಗೆ ಘೋಷಣೆ ನೀಡಿದ್ದರು.
ಭಾರತ ನೇಪಾಳದಲ್ಲಿ ಹಸ್ತಕ್ಷೇಪ ಮಾಡುತ್ತಿದೆಯೇ ?
‘ಕಾಠಮಾಂಡೂ ಪೋಸ್ಟ್’ ದ ವಾರ್ತೆಯ ಪ್ರಕಾರ ಕೆಲವು ಭಾರತೀಯ ತಜ್ಞರು ನೇಪಾಳದಲ್ಲಿನ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಬೆಂಬಲಕ್ಕೆ ನಡೆಯುತ್ತಿರುವ ಚಳುವಳಿಯ ಪರವಾಗಿ ಮಾತನಾಡುತ್ತಿದ್ದರು. ನವದೆಹಲಿಯಲ್ಲಿ ನಡೆದಿರುವ ೧೦ ನೇ ‘ರಾಯಸೀನ ಸಂವಾದ’ದ ಸಮಯದಲ್ಲಿ ನೇಪಾಳದ ವಿದೇಶಾಂಗ ಸಚಿವ ಆರಜೂ ರಾಣಾ ದೇವುಬಾ ಇವರು ಎಸ್. ಜೈ ಶಂಕರ್ ಇವರನ್ನು ಭೇಟಿ ಮಾಡಿ, ಕಾಠಮಾಂಡೂ ಮತ್ತು ಭಾರತದಲ್ಲಿನ ಕೆಲವು ಜನರು ನೇಪಾಳದಲ್ಲಿನ ರಾಜಪ್ರಭುತ್ವ ಮತ್ತು ಹಿಂದುತ್ವವಾದಿ ಚಳುವಳಿಗೆ ಭಾರತದ ಬೆಂಬಲ ಇದೆ, ಎಂದು ಮಾತನಾಡುತ್ತಿದ್ದಾರೆ, ಎಂದು ಹೇಳಿದರು.
ಆರಾಜೂ ರಾಣಾ ಇವರು ಜೈ ಶಂಕರ್ ಇವರಿಗೆ, ಈ ದಾವೆಗಳು ನಿಜವಾಗಿದೆಯೇ ? ಎಂದು ವಿಚಾರಿಸಿದಾಗ ಈ ಬಗ್ಗೆ ಜೈ ಶಂಕರ್ ಇವರು, ‘ಭಾರತ ಇಂತಹ ಕಾರ್ಯ ಚಟುವಟಿಕೆಯಲ್ಲಿ ಸಹಭಾಗಿ ಇಲ್ಲ. ಇದರಲ್ಲಿ ನಮ್ಮದು ಎಳ್ಳಷ್ಟು ಪಾತ್ರವಿಲ್ಲ. ಭಾರತವು ನೇಪಾಳದಲ್ಲಿನ ರಾಜಪ್ರಭುತ್ವದ ಬೆಂಬಲದ ಚಟುವಟಿಕೆಯಿಂದ ತನ್ನನ್ನು ಸ್ಪಷ್ಟವಾಗಿಯೇ ದೂರ ಇರಿಸಿದೆ’, ಎಂದು ಹೇಳಿದರು. ಭಾರತೀಯ ರಾಯಭಾರಿ ನವೀನ ಶ್ರೀವಾಸ್ತವ ಇವರು ಕೂಡ ಹೀಗೆಯೇ ಸ್ಪಷ್ಟೀಕರಣ ನೀಡಿದ್ದಾರೆ.
‘ಪ್ರಧಾನಮಂತ್ರಿ ಒಲಿ ೮ ತಿಂಗಳಿಂದ ಹುದ್ದೆಯಲ್ಲಿದ್ದು ಕೂಡ ಅವರು ಭಾರತಕ್ಕೆ ಭೇಟಿ ನೀಡದೆ ಇರುವುದರಿಂದ ನೇಪಾಳ ಮತ್ತು ಭಾರತದಲ್ಲಿನ ಸಂಬಂಧ ಹದಗೆಟ್ಟಿದೆಯೇ ? ಹೀಗೆ ಆರಜೂ ದೇವುಬಾ ಇವರಿಗೆ ಪ್ರಶ್ನಿಸಲಾಯಿತು. ಅದರ ಬಗ್ಗೆ ಅವರು ಹೀಗೆ ಏನು ಇಲ್ಲ ಎಂದು ಹೇಳಿದರು. ಭಾರತದ ಜೊತೆಗಿನ ಸಂಬಂಧ ಯೋಗ್ಯ ಮಾರ್ಗದಲ್ಲಿಯೇ ಇದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ ತಿಂಗಳಲ್ಲಿ ಸಾಗರಮಾಥಾ ಸಂವಾದಕ್ಕಾಗಿ ನೇಪಾಳಿಗೆ ಭೇಟಿ ನೀಡಬಹುದು. ಭಾರತದ ಪ್ರಧಾನ ಮಂತ್ರಿಗಳ ಸ್ವಾಗತಕ್ಕಾಗಿ ನೇಪಾಳದಿಂದ ಪ್ರಯತ್ನ ನಡೆಯುತ್ತಿದೆ, ಎಂದು ಹೇಳಿದರು.