VHP On Waqf Board : ವಕ್ಫ್ ಮಂಡಳಿಯ ನಿಧಿಯನ್ನು ರದ್ದುಗೊಳಿಸಿ, ಇಲ್ಲದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಹಿಂದೂಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ

ಬಿಜೆಪಿ ಮತ್ತು ಶಿವಸೇನೆಗೆ ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ !

ಮುಂಬಯಿ – ವಕ್ಫ್ ಮಂಡಳಿಯನ್ನು ಬಲಪಡಿಸುವ ನಿರ್ಧಾರವನ್ನು ಒಕ್ಕೂಟ ಮರುಪರಿಶೀಲನೆ ಮಾಡಬೇಕು. ವಕ್ಫ್ ಬೋರ್ಡ್ ಬಲಪಡಿಸಲು ಸರಕಾರ ಘೋಷಿಸಿರುವ 10 ಕೋಟಿ ರೂಪಾಯಿ ನಿಧಿಯನ್ನು ರದ್ದುಗೊಳಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದೂಗಳ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಶಿವಸೇನೆ ಮತ್ತು ಬಿಜೆಪಿಗೆ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷತ್‌ನ ಕೊಂಕಣ ಸಚಿವ ಮೋಹನ್ ಸಾಲೇಕರ ಅವರು ಮಾತನಾಡಿ, ವಕ್ಫ್ ಮಂಡಳಿ ಬಲವರ್ಧನೆಗೆ ಹಣ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ ಸರಕಾರ ಏನು ಮಾಡುವುದನ್ನು ತಪ್ಪಿಸಿಕೊಂಡಿದೆಯೋ, ಅದನ್ನು ಈ ಒಕ್ಕೂಟ ಮಾಡುತ್ತಿದೆ. ಇದು ಧರ್ಮದ ಆಧಾರದ ಮೇಲೆ ತುಷ್ಟೀಕರಣವಾಗಿದೆ. ‘ಒಂದೆಡೆ ಧರ್ಮದ ಆಧಾರದಲ್ಲಿ ರಾಜಕೀಯ ಮಾಡಬಾರದು’ ಎಂದು ಒಕ್ಕೂಟದ ನಾಯಕರು ಹೇಳುತ್ತಿರುತ್ತಾರೆ; ಮತ್ತೊಂದೆಡೆ, ಧರ್ಮದ ಆಧಾರದಲ್ಲಿ ಅನುದಾನವನ್ನು ನೀಡಲಾಗುತ್ತದೆ. ಈ ರೀತಿಯಲ್ಲಿ ತೀವ್ರಗಾಮಿತ್ವವನ್ನು ಬಲಪಡಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ನುಡಿದರು.

ಈ ಪ್ರಕರಣವೇನು ?

2007ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ವಿಲಾಸರಾವ ದೇಶಮುಖ ಅವರ ಆಡಳಿತ ಅವಧಿಯಲ್ಲಿ ವಕ್ಫ್ ಮಂಡಳಿಗೆ ಅನುದಾನ ನೀಡುವ ಭರವಸೆಯನ್ನು ಕೇಂದ್ರ ಸರಕಾರ ನೀಡಿತ್ತು. ಈ ಭರವಸೆಯನ್ನು ಈಡೇರಿಸಲು 2024-25ನೇ ಸಾಲಿಗೆ ವಕ್ಫ್ ಮಂಡಳಿಯನ್ನು ಬಲಪಡಿಸಲು 10 ಕೋಟಿ ರೂಪಾಯಿ ಅನುದಾನವನ್ನು ಕಲ್ಪಿಸಿತ್ತು. ಈ ಪೈಕಿ ರಾಜ್ಯ ಸರಕಾರವು 2 ಕೋಟಿ ರೂಪಾಯಿಗಳನ್ನು ಜೂನ 10 ರಂದು ನೀಡಿದೆ.