ನವ ದೆಹಲಿ – ದೆಹಲಿ ಅಭಿವೃದ್ಧಿ ಪ್ರಾಧಿಕಾರದ ತಂಡವು ಮಾರ್ಚ್ 20 ರ ಮುಂಜಾನೆ 3 ಗಂಟೆಗೆ ಮಯೂರ್ ವಿಹಾರ್ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಕೆಡವಲು ಬಂದಿತ್ತು; ಆದರೆ ಸ್ಥಳೀಯ ಭಾಜಪ ಶಾಸಕ ರವೀಂದ್ರ ನೇಗಿ ಮತ್ತು ಹಿಂದೂ ಸಂಘಟನೆಗಳ ವಿರೋಧದ ನಂತರ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಆದೇಶದ ನಂತರ ಕ್ರಮವನ್ನು ನಿಲ್ಲಿಸಲಾಯಿತು. ಈ ದೇವಾಲಯಗಳು ಗ್ರೀನ್ ಬೆಲ್ಟನ ವ್ಯಾಪ್ತಿಗೆ ಬರುತ್ತಿರುವುದರಿಂದ ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಅವುಗಳನ್ನು ಕೆಡವಬೇಕಿತ್ತು. ಈ ದೇವಾಲಯಗಳು ಬಹಳ ಹಳೆಯದು ಎಂದು ಹಿಂದೂಗಳು ಹೇಳುತ್ತಾರೆ. ಈ ವಿಷಯದಲ್ಲಿ ದೇವಾಲಯಗಳ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ನ್ಯಾಯಾಲಯವು ಈ ವಿಷಯದಲ್ಲಿ ಮತ್ತೆ ಹೈಕೋರ್ಟ್‌ಗೆ ಹೋಗಲು ತಿಳಿಸಿದೆ. ವಕೀಲ ವಿಷ್ಣು ಶಂಕರ್ ಜೈನ್ ದೇವಾಲಯಗಳ ಪರವಾಗಿ ವಾದ ಮಂಡಿಸುತ್ತಿದ್ದಾರೆ.
ಶಾಸಕ ರವೀಂದ್ರ ನೇಗಿ ಮಾತನಾಡಿ, ದೇವಾಲಯವು ನಮ್ಮ ಶ್ರದ್ಧೆ, ಸಂಸ್ಕೃತಿ ಮತ್ತು ಸಮಾಜದ ಭಾವನೆಗಳಿಗೆ ಸಂಬಂಧಿಸಿದ ಸ್ಥಳವಾಗಿದೆ. ಜನರ ಧರ್ಮ, ಶ್ರದ್ಧೆ ಮತ್ತು ಭಾವನೆಗಳನ್ನು ರಕ್ಷಿಸಲು ನಾವು ಯಾವಾಗಲೂ ಸಿದ್ಧರಿದ್ದೇವೆ, ಎಂದು ಹೇಳಿದರು.
ಈ ದೇವಸ್ಥಾನವನ್ನು ಕಾಳಿ ಬಾಡಿ ಸಮಿತಿ, ಶ್ರೀ ಅಮರನಾಥ ಮಂದಿರ ಸಂಸ್ಥೆ ಮತ್ತು ಶ್ರೀ ಬದರಿನಾಥ ಮಂದಿರಗಳಿಂದ ನಿಯಂತ್ರಿಸಲಾಗುತ್ತದೆ.
ಸಂಪಾದಕೀಯ ನಿಲುವುರಾಜಕೀಯ ಇಚ್ಛಾಶಕ್ತಿ ಇದ್ದರೆ ನ್ಯಾಯಾಲಯ ಆದೇಶ ನೀಡಿದರೂ ರಾಜ್ಯ ವ್ಯವಸ್ಥೆ ಅದನ್ನು ತಡೆಯಬಹುದು, ಇದು ಸತ್ಯ! |