ಮೊಗಾ (ಪಂಜಾಬ) – ಇಲ್ಲಿ ಶಿವಸೇನೆಯ (ಶಿಂದೆ ಬಣ) ನಾಯಕ ಮಂಗತ ರಾಮ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು. ಮಾರ್ಚ್ 14 ರ ಹತ್ಯೆ ಮಾಡಿದ ರಾತ್ರಿ ಪೊಲೀಸರು ಮೂವರು ಕೊಲೆಗಾರರೊಂದಿಗೆ ಘರ್ಷಣೆ ನಡೆಯಿತು. ನಂತರ ಪೊಲೀಸರು ಅರುಣ್ ಗುರಪ್ರೀತ ಸಿಂಹ, ಅರುಣ ಬಬ್ಬು ಸಿಂಗ ಮತ್ತು ರಾಜವೀರ ಅಶೋಕ ಕುಮಾರ ಎಂಬ ಮೂವರನ್ನು ಬಂಧಿಸಿದರು. ಎನ್ಕೌಂಟರ್‍ನಲ್ಲಿ ಆರೋಪಿಗಳು ಗಾಯಗೊಂಡಿದ್ದರಿಂದ ಅವರನ್ನು ಚಿಕಿತ್ಸೆಗಾಗಿ ಮಲೌಟ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹತ್ಯೆ ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು! ಇಂತಹ ಶಿಕ್ಷೆಯಿಂದಲೇ ಇತರ ಅಪರಾಧಿಗಳನ್ನು ತಡೆಯಲು ಸಾಧ್ಯ! |