Maulana Statement Chhawa Movie: ‘ಛಾವಾ’ ಚಿತ್ರದಿಂದ ದೇಶದಲ್ಲಿ ಗಲಭೆಗಳು ಉಂಟಾಗುತ್ತಿದೆ; ಅದರ ಮೇಲೆ ನಿಷೇಧ ಹೇರಿ! – ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲ್ವಿ

‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲ್ವಿಯವರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಆಗ್ರಹ

(ಮೌಲಾನಾ ಎಂದರೆ ಇಸ್ಲಾಂನ ವಿದ್ವಾಂಸ)

ಬರೇಲಿ (ಉತ್ತರ ಪ್ರದೇಶ) – ‘ಛಾವಾ’ ಚಿತ್ರ ಬಿಡುಗಡೆಯಾದಾಗಿನಿಂದ ದೇಶದ ವಾತಾವರಣ ಹದಗೆಡುತ್ತಿದೆ. ‘ಛಾವಾ’ ಚಿತ್ರದಲ್ಲಿ ಮೊಘಲ್ ದೊರೆ ಔರಂಗಜೇಬನ ಚಿತ್ರಣವನ್ನು ಹಿಂದೂ ವಿರೋಧಿಯಾಗಿ ತೋರಿಸಿ ಹಿಂದೂ ಯುವಕರನ್ನು ಪ್ರಚೋದಿಸಲಾಗುತ್ತಿದೆ. ಆದ್ದರಿಂದಲೇ ಹಿಂದೂ ಸಂಘಟನೆಗಳ ನಾಯಕರು ವಿವಿಧ ಕಡೆಗಳಲ್ಲಿ ಔರಂಗಜೇಬನ ಬಗ್ಗೆ ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ. ಇದರಿಂದ ಗಲಭೆಗಳು ಉಂಟಾಗುತ್ತಿವೆ. ನಾಗ್ಪುರದಲ್ಲಿ ಗಲಭೆ ಉಂಟಾಗಲು ಈ ಚಿತ್ರವೇ ಕಾರಣ ಎಂದು ಆರೋಪಿಸಿರುವ ಇಲ್ಲಿನ ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲ್ವಿಯವರು ಈ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ‘ಛಾವಾ’ ಚಿತ್ರದ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮೌಲಾನಾ ರಝ್ವಿ ಅವರು ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ರಂಜಾನ್‌ನಲ್ಲಿ ರೋಜಾ (ಉಪವಾಸ) ಮಾಡದೇ ಇದ್ದಕ್ಕಾಗಿ ಮತ್ತು ಅವರ ಮಗಳು ಹೋಳಿ ಆಡಿದಕ್ಕಾಗಿ ಟೀಕಿಸಿದ್ದರು. ಅಲ್ಲದೆ, ಮಹಾಕುಂಭ ಮೇಳದ ಭೂಮಿ ವಕ್ಫ್ ಭೂಮಿ ಎಂದು ಇದೇ ಮೌಲಾನಾ ಹೇಳಿದ್ದರು.

ಔರಂಗಜೇಬನನ್ನು ಮುಸ್ಲಿಮರು ಆದರ್ಶವೆಂದು ಪರಿಗಣಿಸುವುದಿಲ್ಲ!

ಮೌಲಾನಾ ರಝ್ವಿ ಮಾತು ಮುಂದುವರೆಸಿ, ಭಾರತದ ಮುಸ್ಲಿಮರು ಔರಂಗಜೇಬನನ್ನು ತಮ್ಮ ಆದರ್ಶ ಅಥವಾ ನಾಯಕ ಎಂದು ಪರಿಗಣಿಸುವುದಿಲ್ಲ. ನಾವು ಅವನನ್ನು ಮೊಘಲ್ ದೊರೆ ಎಂದು ಮಾತ್ರ ಪರಿಗಣಿಸುತ್ತೇವೆ, ಅದಕ್ಕಿಂತ ಹೆಚ್ಚೇನೂ ಇಲ್ಲ. (ಹಾಗಾದರೆ ಅವನ ಕ್ರೌರ್ಯದ ಬಗ್ಗೆ ಏಕೆ ಮಾತನಾಡುವುದಿಲ್ಲ? ಅವನನ್ನು ಏಕೆ ಟೀಕಿಸುವುದಿಲ್ಲ? – ಸಂಪಾದಕರು)

ಸಂಪಾದಕೀಯ ನಿಲುವು

  • ಗಲಭೆಗಳು ಹಿಂದೂಗಳಿಂದಲ್ಲ, ಮುಸ್ಲಿಮರಿಂದ ಉಂಟಾಗುತ್ತಿವೆ. ಚಿತ್ರದಲ್ಲಿ ತೋರಿಸಿರುವ ಸತ್ಯವನ್ನು ಅವರಿಗೆ ಸ್ವೀಕರಿಸಲು ಸಾಧ್ಯವಾಗದೆ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲು ಮೌಲಾನಾ ಏಕೆ ಬೇಡಿಕೆ ಸಲ್ಲಿಸುತ್ತಿಲ್ಲ?
  • ಮೌಲಾನಾ ಬರೇಲ್ವಿಯವರು ನಿರಂತರವಾಗಿ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಸರಕಾರವು ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕಿತ್ತು. ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು!