Nagpur Riots : ನಾಗಪುರದ ಗಲಭೆಯ ಸೂತ್ರಧಾರನಾದ ಫಹೀಮ ಖಾನನೊಂದಿಗೆ 6 ಜನರ ಮೇಲೆ ದೇಶದ್ರೋಹದ ಪ್ರಕರಣ ದಾಖಲು !

ನಾಗಪುರ – ಇಲ್ಲಿ ನಡೆದ ಗಲಭೆಯ ಸೂತ್ರಧಾರನಾದ ಫಹೀಮ ಖಾನನೊಂದಿಗೆ 6 ಜನರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಫಹೀಮ ಖಾನನು ಗುಂಪನ್ನು ಸೇರಿಸಿ ಹಿಂಸಾಚಾರಕ್ಕೆ ಪ್ರಚೋದಿಸಿರುವುದಾಗಿ ಆರೋಪಿಸಲಾಗಿದೆ. ಆತನ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳು ಕಂಡುಬಂದಿವೆ. ಈ ಖಾತೆಗಳನ್ನು ಮುಚ್ಚಲಾಗುತ್ತಿದೆ. ಈ ಗಲಭೆಯ ಪ್ರಕರಣದಲ್ಲಿ ಇಲ್ಲಿಯವರೆಗೆ 46 ಆರೋಪಿಗಳನ್ನು ಬಂಧಿಸಲಾಗಿದ್ದು ಅವರನ್ನು ಮಾರ್ಚ್ 21 ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.

ಗಲಭೆಯ ಆರೋಪಿಗಳು ನಾಗಪುರದ ವಾಸಿಗಳಲ್ಲ !

ಮತಾಂಧ ಮುಸಲ್ಮಾನರು ಹೊರಗಿನಿಂದ ನಾಗಪುರಕ್ಕೆ ಬಂದು ಗಲಭೆ ಮಾಡಿ ಪರಾರಿಯಾಗುವುದು ನಾಗಪುರ ಪೊಲೀಸರಿಗೆ ನಾಚಿಕೆಗೇಡು ! ಪೊಲೀಸರ ಗುಪ್ತಚರ ವಿಭಾಗವು ನಿದ್ರಿಸುತ್ತಿತ್ತೇ ? ನಾಳೆ ನಾಗಪುರದಲ್ಲಿ ಹೊರಗಿನ ಭಯೋತ್ಪಾದಕರು ಬಂದು ಸಾವುನೋವು ಮಾಡಿದರೆ, ಅದಕ್ಕೆ ಯಾರು ಹೊಣೆ ? ಈ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಅನೇಕ ಆರೋಪಿಗಳು ನಾಗಪುರದ ವಾಸಿಗಳಲ್ಲ ಎಂಬ ಮಾಹಿತಿ ದೊರೆತಿದೆ. ಅವರ ಸ್ಥಳದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ‘ಅಲ್ಲಾಹು ಅಕ್ಬರ’ (ಅಲ್ಲಾ ಮಹಾನನಿದ್ದಾನೆ) ಮತ್ತು ‘ಸರ ತನ ಸೆ ಜುದಾ’ (ತಲೆಯನ್ನು ದೇಹದಿಂದ ಬೇರ್ಪಡಿಸುವುದು) ಎಂಬಂತಹ ಪೋಸ್ಟ್ ಗಳನ್ನು ಪ್ರಸಾರ ಮಾಡಲಾಗಿತ್ತು. ಇಂತಹ ಪೋಸ್ಟ್ ಗಳನ್ನು ಪ್ರಸಾರ ಮಾಡುವವರ ಮೇಲೂ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು, ಆಗಲೇ ಯಾರಿಗೂ ಇಂತಹ ಗಲಭೆ ಮಾಡುವ ಧೈರ್ಯ ಬರುವುದಿಲ್ಲ !