ವಕ್ಫ್ ಮಂಡಳಿಗೆ ೧೦ ಕೋಟಿ ರೂಪಾಯಿ ನೀಡಿ ವಿಧಾನಸಭೆ ಚುನಾವಣೆಯಲ್ಲಿ ಹಿಂದುಗಳ ಮತವನ್ನೂ ಕೂಡ ಕಳೆದುಕೊಳ್ಳುವರೇ ?

ಬಿಜೆಪಿಗೆ ಜ್ವಲಂತ ಪ್ರಶ್ನೆ ಕೇಳಿದ ನಟಿ ಕೇತಕಿ ಚಿತಳೆ !

ಮುಂಬಯಿ – ಲೋಕಸಭಾ ಚುನಾವಣೆಯಲ್ಲಿ ಯಾರು ನಿಮಗೆ ಮತ ನೀಡಿಲ್ಲವೋ, ಅವರ ಸಶಕ್ತಿಕರಣಕ್ಕೆ ನೀವು ೧೦ ಕೋಟಿ ರೂಪಾಯಿ ನೀಡುತ್ತಿದ್ದೀರಾ? ವಕ್ಫ್ ಮಂಡಳಿಯ ಸಶಕ್ತಿಕರಣಕ್ಕಾಗಿ ೧೦ ಕೋಟಿ ರೂಪಾಯಿ ನೀಡಿ ವಿಧಾನ ಸಭೆಯ ಚುನಾವಣೆಯಲ್ಲಿ ನೀವು ಹಿಂದುಗಳ ಮತಗಳನ್ನು ಕಳೆದುಕೊಳ್ಳಬೇಕಿದೆಯೆ ? ಎಂದು ನಟಿ ಕೇತಕಿ ಚಿತಳೆ ಅವರು ಜ್ವಲಂತ ಪ್ರಶ್ನೆಯನ್ನು ಕೇಳಿರುವ ವಿಡಿಯೋ ಎಕ್ಸ್ ಖಾತೆಯಿಂದ ಪ್ರಸಾರ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಕೇತಕಿ ಚಿತಳೆ ಅವರು, ವಕ್ಫ್ ಮಂಡಳಿಯನ್ನು ಸಶಕ್ತಿಕರಣಗೊಳಿಸಿ ನೀವು ಸನಾತನ ಹಿಂದುಗಳನ್ನು ಕೂಡ ನಿಮ್ಮಿಂದ ದೂರ ಮಾಡಿಕೊಳ್ಳುವರೆ ? ಕೆಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲಾಗುವುದನ್ನು ನಿಶ್ಚಯಿಸಿದಂತೆ ನಿಮಗೆ ಹಿಂದುಗಳ ಮತಗಳು ಬೇಡವೆಂದು ನೀವು ನಿಶ್ಚಯಿಸಿದ್ದೀರಾ? ವಕ್ಫ್ ಮಂಡಳಿಗೆ ೧೦ ಕೋಟಿ ರೂಪಾಯಿ ನೀಡಿ ನೀವು ಹಿಂದುಗಳ ಮತಗಳನ್ನು ಎಷ್ಟು ಸಂಖ್ಯೆಯಲ್ಲಿ ಕಳೆದುಕೊಳ್ಳುವಿರಿ ಇದರ ಯೋಚನೆ ಮಾಡಿದ್ದೀರಾ ? ನಿಮ್ಮ ವಿಚಾರವೇನು ಎಂಬುದನ್ನು ಒಮ್ಮೆ ಹೇಳಿಬಿಡಿ ಎಂದು ನೇರವಾಗಿ ಹೇಳಿದರು.

ಹಿಂದುಗಳ ಭೂಮಿ ಕಬಳಿಸುವವರ ಸಶಕ್ತಿಕರಣ ಏತಕ್ಕಾಗಿ ?

ಕೇತಕಿ ಚಿತಳೆ ಮಾತು ಮುಂದುವರೆಸಿ, ವಕ್ಫ್ ಮಂಡಳಿಯು ಯಾವುದಾದರೂ ಭೂಮಿ ಕಬಳಿಸಿದರೆ, ಅದರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಸಾಧ್ಯವಿಲ್ಲ. ಅದಕ್ಕಾಗಿ ವಕ್ಫ್ ಮಂಡಳಿಯ ಕಡೆಗೇ ಹೋಗಬೇಕಾಗುತ್ತದೆ. ಯಾವ ವಕ್ಫ್ ಮಂಡಳಿಯು ಹಿಂದುಗಳ ಜಾಗಗಳನ್ನು ಬೃಹತ್ ಪ್ರಮಾಣದಲ್ಲಿ ಕಬಳಿಸಿದೆಯೋ, ಆ ಮಂಡಳಿಯನ್ನು ರದ್ದು ಪಡಿಸುವ ಬದಲು ನೀವು ಅವರನ್ನು ಸಶಕ್ತ ಗೊಳಿಸುತ್ತಿದ್ದೀರಾ? ಹೀಗೆ ಮಾಡುವವರಿದ್ದರೆ ಮಹಾರಾಷ್ಟ್ರದಲ್ಲಿ ಬಂಗಾಲದಂತೆ ಸ್ಥಿತಿ ಬರಲು ಸಮಯ ಬೇಕಾಗುವುದಿಲ್ಲ. ಮಾನಖುರ್ದ್ ದಲ್ಲಿ ಬಾಂಗ್ಲಾದೇಶದ ಮುಸಲ್ಮಾನರು ತುಂಬಿದ್ದಾರೆ. ರೋಹಿಂಗ್ಯಾಗಳು ಕೂಡ ತಲೆಯ ಮೇಲೆ ಕುಳಿತಿದ್ದಾರೆ. ಈಗ ವಕ್ಫ್ ಮಂಡಳಿಯನ್ನು ಸಶಕ್ತಿಕರಣ ಗೊಳಿಸಿ ಭಾರತಕ್ಕೆ ಮುಸಲ್ಮಾನ ರಾಷ್ಟ್ರವೆಂದು ಘೋಷಿಸಿ. ನಂತರ ಶಿವರಾಯನ(ಶಿವಾಜಿ ಮಹಾರಾಜ) ಮಹಾರಾಷ್ಟ್ರವೆಂದು ಬೊಬ್ಬೆ ಹಾಕುತ್ತಾ ತಿರುಗಬೇಡಿ. ಮಹಾರಾಷ್ಟ್ರ ಔರಂಗಜೇಬನದಾಗಿತ್ತು ಎಂದು ಘೋಷಿಸಿ. ವಕ್ಫ್ ಮಂಡಳಿಯನ್ನು ಸಶಕ್ತಿಕರಣಗೊಳಿಸಿ ನೀವು ಫುಲೆ, ಅಂಬೇಡ್ಕರ್ ಮತ್ತು ಛತ್ರಪತಿ ಅವರ ಹೆಸರುಗಳನ್ನು ಹೇಳಿ ಸುಮ್ಮನೆ ಅವರನ್ನು ಅವಮಾನಿಸಬೇಡಿ. ಯಾಕೆಂದರೆ ಅವರು ಇಂತಹ ಕೃತ್ಯವನ್ನು ಎಂದೂ ಮಾಡಿಲ್ಲ.

…..ಆಗ ವಿಧಾನಸಭೆಯಲ್ಲಿ ನೋಟಾಗೆ ಮತ ನೀಡುವೆವು !

ಲೋಕಸಭೆಯ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎಂಬುದು ನಿಶ್ಚಯವಾಗಿತ್ತು. ನಮಗೆ ಯಾರು ಪ್ರಧಾನ ಮಂತ್ರಿ ಆಗಬೇಕು, ಎಂಬುದನ್ನು ನೋಡಿ ನಾನು ಮತ ನೀಡಿದ್ದೆ ; ಆದರೆ ವಿಧಾನಸಭೆಯಲ್ಲಿ ಯಾವ ಬಾವುಟ ಕೈಗೆ ಎತ್ತಿಕೊಳ್ಳಲಿ ? ಎಂಬ ಪ್ರಶ್ನೆ ಉದ್ಭವಿಸಲಿದೆ. ಇದನ್ನು ಮೊದಲಿನಿಂದಲೂ ಹೇಳುತ್ತಿದ್ದೇನೆ; ಈಗ ವಕ್ಫ್ ಮಂಡಳಿಯ ಸಶಕ್ತಿಕರಣಕ್ಕೆ ನಿಧಿ ನೀಡಿ ನೀವು ನನ್ನ ಅಭಿಪ್ರಾಯವನ್ನು ಇನ್ನಷ್ಟು ದೃಢಗೊಳಿಸಿದ್ದೀರಾ. ಇದು ಹೀಗೇ ಇದ್ದರೆ ವಿಧಾನಸಭೆಯಲ್ಲಿ ಖಂಡಿತವಾಗಿ ನೋಟಾಗೆ (ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಗೆ ಮತ ನೀಡದೆ ಇರುಲು ಮತದಾನ ಯಂತ್ರದಲ್ಲಿ ಇರುವ ಸೌಲಭ್ಯ ) ಮತ ನೀಡುವೆವು ಎಂದು ಕೇತಕಿ ಚಿತಳೆ ಅವರು ಖಾರವಾಗಿ ಹೇಳಿದರು.