Yogi Adityanath Statement : ವಿದೇಶಿ ದಾಳಿಕೋರರ ವೈಭವಿಕರಣ ಅಂದರೆ ದೇಶದ್ರೋಹ ! – ಯೋಗಿ ಆದಿತ್ಯನಾಥ್

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ

ಬಹ್ರೈಚ್ (ಉತ್ತರಪ್ರದೇಶ) – ಇಡೀ ಜಗತ್ತು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಶ್ಲಾಘಿಸುತ್ತಿರುವಾಗ, ಯಾವುದೇ ವಿದೇಶಿ ದಾಳಿಕೋರರನ್ನು ವೈಭವೀಕರಿಸಬಾರದು. ದಾಳಿಕೋರರನ್ನು ವೈಭವೀಕರಿಸುವುದು ದೇಶದ್ರೋಹಕ್ಕೆ ಬುನಾದಿ ಹಾಕುವುದಾಗಿದೆ. ಸ್ವತಂತ್ರ ಭಾರತದ ಮಹಾಪುರುಷರನ್ನು ಅವಮಾನಿಸುವ ಯಾವುದೇ ದೇಶದ್ರೋಹಿ ವ್ಯಕ್ತಿಯನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ, ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಔರಂಗಜೇಬ್ ಮತ್ತು ಮಹಮ್ಮದ್ ಘಜ್ನಿಯ ಸೋದರಳಿಯ ಸೈಯದ್ ಸಲಾರ್ ಮಸೂದ್ ಘಾಜಿ ಅವರ ಹೆಸರನ್ನು ಉಲ್ಲೇಖಿಸದೆ ಅವರ ಬೆಂಬಲಿಗರನ್ನು ಟೀಕಿಸಿದರು.

ಉತ್ತರಪ್ರದೇಶದ ಸಂಭಲ್‌ನಲ್ಲಿ ಘಾಜಿ ಹೆಸರಿನಲ್ಲಿ ಶತಮಾನಗಳಿಂದ ಮೇಳವನ್ನು ಆಯೋಜಿಸಲಾಗುತ್ತಿತ್ತು, ಈ ವರ್ಷದಿಂದ ಅದನ್ನು ನಿರಾಕರಿಸಲಾಗಿದೆ. ಇದೇ ಘಾಜಿ ಮೇಳವನ್ನು ಬಹ್ರೈಚ್ ಮತ್ತು ಬಾರಾಬಂಕಿಯಲ್ಲೂ ಆಯೋಜಿಸಲಾಗುತ್ತದೆ. ಬಾರಾಬಂಕಿಯಲ್ಲಿ ಅವನ ಗೋರಿ ಇದೆ. ಅಲ್ಲಿಯೂ ಅನುಮತಿ ನಿರಾಕರಿಸಲಾಗುವುದು ಎಂದು ಮುಖ್ಯಮಂತ್ರಿಗಳ ಮೇಲಿನ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಇದೇ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಹ್ರೈಚ್‌ನಲ್ಲಿ ಘಾಜಿ ಮೇಳ ಆಯೋಜಿಸಲು ಅನುಮತಿ ನೀಡದಂತೆ ಆಡಳಿತಕ್ಕೆ ಮನವಿ ಸಲ್ಲಿಸಿದೆ.