ರಾಯಪುರ (ಛತ್ತೀಸಗಡ) – ಛತ್ತೀಸಗಡದ ದಂತೇವಾಡ ಮತ್ತು ಬಿಜಾಪುರ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ 2 ಸ್ಥಳಗಳಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು 22 ಜನ ನಕ್ಸಲರು ಹತರಾದರು. ಹಾಗೂ ಜಿಲ್ಲಾ ಮೀಸಲು ರಕ್ಷಣಾ ಪಡೆಯ ಒಬ್ಬ ಸೈನಿಕ ಹುತಾತ್ಮನಾದನು. ನಕ್ಸಲರ ಎಲ್ಲಾ ಮೃತದೇಹಗಳು ಪತ್ತೆಯಾಗಿವೆ. ಮತ್ತೊಂದೆಡೆ ನಾರಾಯಣಪುರ-ದಂತೇವಾಡ ಗಡಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 2 ಸೈನಿಕರು ಗಾಯಗೊಂಡಿದ್ದಾರೆ. ಈ ವರ್ಷ ಛತ್ತೀಸ್‌ಗಡದಲ್ಲಿ ಇಲ್ಲಿಯವರೆಗೆ 71 ನಕ್ಸಲರು ಹತರಾಗಿದ್ದಾರೆ. ಕಳೆದ ವರ್ಷ ಸುಮಾರು 300 ನಕ್ಸಲರು ಹತರಾಗಿದ್ದರು. ಅವರಿಂದ 290 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಜಾಪುರದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ ಅವರು ಮಾತನಾಡಿ, ಚಕಮಕಿ ಇನ್ನೂ ಮುಂದುವರೆದಿದೆ. ಚಕಮಕಿ ಮುಗಿದ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ, ಎಂದು ಹೇಳಿದ್ದಾರೆ. ದಂತೇವಾಡದ ಪೊಲೀಸ್ ವರಿಷ್ಠಾಧಿಕಾರಿ ಗೌರವ ರಾಯ ಅವರು, ಹಿರೋಲಿಯಲ್ಲಿ ಚಕಮಕಿ ನಡೆಯುತ್ತಿದೆ ಎಂದು ಹೇಳಿದ್ದಾರೆ.