ಚಂಡೀಗಡ – ಪಂಜಾಬನ ಲುಧಿಯಾನದಲ್ಲಿ ‘ಶಿವಸೇನಾ ಪಂಜಾಬ’ನ ಮುಖಂಡ ಸಂದೀಪ ಥಾಪರ ಗೋರಾ ಇವರ ಮೇಲೆ ಜುಲೈ 5 ರಂದು ಮಾರಣಾಂತಿಕ ದಾಳಿ ನಡೆದಿತ್ತು. ಈ ಪ್ರಕರಣ ಶಾಂತವಾಗುವುದರಲ್ಲಿಯೇ ಪಂಜಾಬನಲ್ಲಿ ಮತ್ತೋರ್ವ ಹಿಂದೂ ಮುಖಂಡರ ಮೇಲೆ ದಾಳಿ ನಡೆದಿದೆ. ಪಂಜಾಬನ ಅಮೃತಸರದಲ್ಲಿ ಜುಲೈ 10ರ ರಾತ್ರಿ ದ್ವಿಚಕ್ರವಾಹನದಿಂದ ಬಂದಿದ್ದ 4 ಅಜ್ಞಾತರು ರಾಷ್ಟ್ರೀಯ ಭಗವಾ ಸೇನೆಯ ಉಪಾಧ್ಯಕ್ಷರಾದ ಪ್ರವೀಣ ಕುಮಾರ ಇವರ ಮೇಲೆ ಗುಂಡು ಹಾರಿಸಿದರು. ದಾಳಿಕೋರರು ಗುಂಡಿ ಹಾರಿಸಿ ಪ್ರವೀಣ ಕುಮಾರರನ್ನು ಕೊಲ್ಲಲು ಪ್ರಯತ್ನಿಸಿದರು. ದಾಳಿಕೋರರು 3 ಗುಂಡುಗಳನ್ನು ಹಾರಿಸಿದರು, ಅದರಲ್ಲಿ ಒಂದು ಗುಂಡು ಪ್ರವೀಣ ಕುಮಾರ ಇವರ ಹೆಗಲಿಗೆ ತಗುಲಿತು. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಘಟನಾಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಚಿತ್ರೀಕರಣವಾಗಿದೆ. ಪ್ರವೀಣ ಕುಮಾರರನ್ನು ತಕ್ಷಣವೇ ಗುರುನಾನಕ ದೇವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Life-threatening attack on Rashtriya Bhagwa Sena’s Vice President Praveen Kumar in Punjab
Incidences of attacks on Hindu leaders in Punjab are increasing day by day.
Given this situation, will the Central Government intervene to ensure their safety?
While Hindus were under… pic.twitter.com/xJztO2YRIP
— Sanatan Prabhat (@SanatanPrabhat) July 12, 2024
1. ಪ್ರವೀಣ ಕುಮಾರ ಇವರ ಮಾಲೀಕತ್ವದ ಇ-ರಿಕ್ಷಾ ಶೋರೂಮ್ ಇದೆ. ದಾಳಿ ನಡೆಸಿದ ಯುವಕರು ಅವರ ಶೋರೂಮ್ ಗೆ ನುಗ್ಗಿದರು. ಇಬ್ಬರು ಯುವಕರು ಶೋರೂಮ್ ಗೆ ನುಗ್ಗಿದರು. ಇನ್ನಿಬ್ಬರು ಯುವಕರು ಹೊರಗೆ ನಿಂತರು. ಒಳಗೆ ಹೋದ ಯುವಕರ ಮುಖಗಳು ಬಟ್ಟೆಯಿಂದ ಮುಚ್ಚಲಾಗಿತ್ತು. ಆ ಯುವಕರು ಬಂದೂಕು ಹಿಡಿದು ಪ್ರವೀಣ ಕುಮಾರ ಇವರ ಮೇಲೆ ಗುಂಡು ಹಾರಿಸಿದರು.
2. ಗುಂಡುಗಳನ್ನು ಹಾರಿಸಿದ ಬಳಿಕ ಆರೋಪಿಯು ತಕ್ಷಣವೇ ಘಟನಾ ಸ್ಥಳದಿಂದ ಪರಾರಿಯಾದರು. ಈ ಘಟನೆಯು ಮಾಹಿತಿ ಸಿಗುತ್ತಲೇ ಮಜಿಠಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
3. ಪಂಜಾಬನ ಲುಧಿಯಾನದಲ್ಲಿ `ಶಿವಸೇನಾ ಪಂಜಾಬ’ನ ನಾಯಕ ಸಂದೀಪ ಥಾಪರ ಗೋರಾ ಇವರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ನಿರಂತರವಾಗಿ ಖಲಿಸ್ತಾನ ವಿರುದ್ಧ ನಿಲುವನ್ನು ಹೊಂದಿರುವುದರಿಂದ ಅವರ ಮೇಲೆ ದಾಳಿ ನಡೆದಿದೆಯೆಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವು
|