|
(ನೀಲಿ ಉಡುಪು ಧರಿಸಿರುವ ಮತ್ತು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಸಿಖ್ ಯೋಧರಿಗೆ ನೀಹಂಗ ಸಿಖ್ ಎನ್ನುತ್ತಾರೆ.)
ಲುಧಿಯಾನಾ (ಪಂಜಾಬ್) – ಇಲ್ಲಿ ‘ಶಿವಸೇನಾ ಪಂಜಾಬ’ನ ನಾಯಕ ಸಂದೀಪ ಥಾಪರ ಗೋರಾ ಇವರ ಮೇಲೆ ಮರಣಾಂತಿಕ ಹಲ್ಲೆ ನಡೆದಿದ್ದು ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೀಹಂಗ ಸಿಖ್ಕರ ವೇಷದಲ್ಲಿ ಬಂದಿದ್ದ ೪ ಜನರು ಸಂದೀಪ ಥಾಪರ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ಸಂದೀಪ ಥಾಪರ ಇವರು ಕ್ರಾಂತಿಕಾರಿ ಸುಖದೇವ್ ಇವರ ಸಂಬಂಧಿಕರಾಗಿದ್ದಾರೆ.
ಅಂಗರಕ್ಷಕ ಪೊಲೀಸ್ ನಿಷ್ಕ್ರಿಯವಾಗಿ ನಿಂತಿದ್ದ !
ಸಂದೀಪ ಥಾಪರ ಗೋರಾ ಇವರು ತಮ್ಮ ಶಸ್ತ್ರಸಜ್ಜಿತ ಪೊಲೀಸ ಅಂಗರಕ್ಷಕನ ಸಹಿತ ಸಿವಿಲ್ ಹಾಸ್ಪಿಟಲ್ ನಲ್ಲಿ ಒಂದು ಪುಣ್ಯತಿಥಿಯ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಅಲ್ಲಿಂದ ಅವರು ಅವರ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅವರ ಎದುರು ೪ ನಿಹಂಗ ಸಿಖ್ಖರು ಬಂದರು. ಅವರನ್ನು ನೋಡಿ ಸಂದೀಪ ಥಾಪರ್ ಕೈ ಮುಗಿದು ನಮಸ್ಕರಿಸಿದರು; ಆದರೆ ಆ ಸಿಖರು ಅವರ ತಲೆಯ ಮೇಲೆ ಕತ್ತಿಯಿಂದ ಬಲವಾಗಿ ಹಲ್ಲೆ ನಡೆಸಿದರು. (ಈಗ ಇಂತಹ ಸಿಖರಿಗೆ ನಮಸ್ಕಾರ ಮಾಡುವುದು ಅಥವಾ ಜಾಗರೂಕವಾಗಿ ಇರುವುದು? ಇದು ನಾಯಕರು ಮತ್ತು ಜನತೆ ನಿರ್ಧರಿಸಬೇಕು ! – ಸಂಪಾದಕರು) ಇದರಿಂದ ಸಂದೀಪ ಥಾಪರ ಕೆಳಗೆ ಬಿದ್ದ ನಂತರ ಕೂಡ ಅವರ ಮೇಲೆ ಹಲ್ಲೆ ಮುಂದುವರೆಸಿದ್ದರು. ಆ ಸಮಯದಲ್ಲಿ ಅವರ ಶಸ್ತ್ರಸಜ್ಜಿತ ಅಂಗರಕ್ಷಕನಿಗೆ ಇತರ ನಿಂಹಗರು ಸುತ್ತುವರೆದಿದ್ದರು. ಆ ಸಮಯದಲ್ಲಿ ಅವನು ಥಾಪರ ಇವರನ್ನು ರಕ್ಷಿಸಲು ಯಾವುದೇ ಪ್ರಯತ್ನವು ಮಾಡಲಿಲ್ಲ. ಆತ ನಿಷ್ಕ್ರಿಯವಾಗಿ ನಿಂತಿದ್ದನು.(ಈ ರೀತಿ ಹಲ್ಲೆ ನಡೆದರೆ, ಆಗ ಓರ್ವ ಪೊಲೀಸನು ಏನನ್ನು ಮಾಡಲು ಸಾಧ್ಯವಿಲ್ಲ, ಇದು ರಕ್ಷಣೆ ಪೂರೈಸುವ ಸರಕಾರಕ್ಕೆ ಮತ್ತು ಹಿರಿಯ ಪೊಲೀಸ ಅಧಿಕಾರಿಗಳ ಗಮನಕ್ಕೆ ಏಕೆ ಬರುವುದಿಲ್ಲ? ಈ ಘಟನೆಯ ನಂತರವಾದರೂ ಇತರ ನಾಯಕರಿಗೆ ನೀಡಿರುವ ರಕ್ಷಣೆಯಲ್ಲಿ ಹೆಚ್ಚಳ ಮಾಡಬಹುದೇ? – ಸಂಪಾದಕರು) ಹಲ್ಲೇಯ ನಂತರ ೨ ಆರೋಪಿ ಥಾಪರ್ ಇವರ ದ್ವಿಚಕ್ರ ವಾಹನದಲ್ಲಿಯೇ ಪಲಾಯನ ಮಾಡಿದರು. ಆ ಸಮಯದಲ್ಲಿ ರಸ್ತೆಯಲ್ಲಿದ್ದ ಜನರು ಕೂಡ ಮೌನವಾಗಿಯೇ ಈ ಘಟನೆ ವೀಕ್ಷಿಸುತ್ತಿದ್ದರು. (ಭಾರತೀಯ ಜನತೆ ಇಂತಹ ಘಟನೆಯಲ್ಲಿ ಯಾವಾಗಲೂ ಹೀಗೆಯೇ ಏಕೆ ವರ್ತಿಸುತ್ತದೆ ?, ಸರಕಾರ ಇದರ ಅಭ್ಯಾಸ ಯಾವಾಗ ಮಾಡುವುದು? ಮತ್ತು ಅದರ ಕುರಿತು ಉಪಾಯ ಯೋಜನೆ ಎಂದು ಮಾಡುವುದು? – ಸಂಪಾದಕರು) ಹಲ್ಲೆಯಲ್ಲಿ ಗಾಯಗೊಂಡಿರುವ ಥಾಪರ ಇವರಿಗೆ ಸಿವಿಲ್ ಹಾಸ್ಪಿಟಲ್ ಗೆ ಸೇರಿಸಲಾಯಿತು; ಆದರೆ ಅವರ ಆರೋಗ್ಯ ಗಂಭೀರವಾಗಿದ್ದು ಅಲ್ಲಿಂದ ಅವರಿಗೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Life-threatening attack on ‘Shivsena Punjab’ leader Sandeep Thapar in Ludhiana : Condition critical
The escort Police officer stood by as a mute spectator
4 individuals dressed as Nihang Sikhs attacked Thapar with swords in broad daylight
Possibility of attack due to Thapar’s… pic.twitter.com/0wblsbtRzV
— Sanatan Prabhat (@SanatanPrabhat) July 5, 2024
ಖಲಿಸ್ತಾನ ವಿರೋಧಿ ಹೇಳಿಕೆಯ ನಂತರ ಹಲ್ಲೆ !
ಥಾಪರ ಮೇಲಿನ ಹಲ್ಲೆಗೆ ಅವರ ಖಲಿಸ್ತಾನ ವಿರೋಧಿ ಹೇಳಿಕೆಯೇ ಕಾರಣ ಎಂದು ತಿಳಿಯಲಾಗಿದೆ. ಅವರು ಮೇಲಿಂದ ಮೇಲೆ ಖಲಿಸ್ತಾನದ ವಿರೋಧದಲ್ಲಿ ಹೇಳಿಕೆಗಳು ನೀಡುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ನಡೆದ ರೈತರ ಪ್ರತಿಭಟನೆಯ ವಿರೋಧದಲ್ಲಿ ಕೂಡ ಅವರು ಹೇಳಿಕೆ ನೀಡಿದ್ದರು. ಅನೇಕ ದಿನಗಳಿಂದ ಥಾಪರ ಇವರಿಗೆ ಬೆದರಿಕೆಗಳು ನೀಡಲಾಗುತ್ತಿತ್ತು. ಅದರ ನಂತರ ಅವರಿಗೆ ಪೊಲೀಸ ರಕ್ಷಣೆ ಪೂರೈಸಲಾಗಿತ್ತು.
ಸಂಪಾದಕೀಯ ನಿಲುವುಪಂಜಾಬದಲ್ಲಿ ಖಲಿಸ್ತಾನ್ ಬೆಂಬಲಿಗರು ಬಹಿರಂಗವಾಗಿ ಹಿಂದೂ ನಾಯಕರ ಹತ್ಯೆ ಮಾಡುತ್ತಿದ್ದಾರೆ; ಆದರೆ ಪಂಜಾಬ ಸರಕಾರ ಖಲಿಸ್ತಾನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಏನಾದರೂ ಮಾಡುತ್ತಿದ್ದೇವೆ, ಇದನ್ನು ತೋರಿಸಲು ಅವರು ಹಿಂದೂ ನಾಯಕರಿಗೆ ರಕ್ಷಣೆ ನೀಡುತ್ತಾರೆ; ಆದರೆ ಅದು ಎಷ್ಟು ದುರ್ಬಲವಾಗಿರುತ್ತದೆ ? ಇದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಈ ಹಲ್ಲೆ ನೀಹಂಗ ಸಿಖ್ಖರು ಮಾಡಿದ್ದರೆ, ಇಂತಹ ಖಲಿಸ್ತಾನಿಗಳ ಮೇಲೆ ಈಗ ನಿಷೇಧ ಹೇರಲು ಹಿಂದೂಗಳು ಆಗ್ರಹಿಸಬೇಕು ! |