Aurangzeb Tomb Removal : ‘ಔರಂಗಜೇಬನ ಗೋರಿ ಎಂದರೆ ಎರಡನೆಯ ಅಯೋಧ್ಯ ಆಗುವ ಸಾಧ್ಯತೆ ! (ಅಂತೆ)

ಮುಂಬಯಿ – ನಾಗಪುರ ಹಿಂಸಾಚಾರದ ನಂತರ ಎರಡು ಕಡೆಯ ಜನರ ಮೇಲೆ ಹಾಗೂ ಸುಳ್ಳು ವದಂತಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಚಪ್ಪಾಳೆ ಒಂದೇ ಕೈಯಿಂದ ತಟ್ಟಲು ಬರುವುದಿಲ್ಲ. ಅದಕ್ಕೆ ಎರಡು ಕೈಗಳು ಬೇಕಾಗುತ್ತದೆ. ವಿಷಯ ಅಪ್ರಿಯವಾಗಿದ್ದರೂ, ಮುಖ್ಯಮಂತ್ರಿಗಳು ಅದನ್ನು ಮಾಡಬೇಕು ಅಂದರೆ, ೧೯೯೨ ರಲ್ಲಿ ಉತ್ತರಪ್ರದೇಶದಲ್ಲಿ ಯಾವುದು ಘಟಿಸಿತು, ಹಾಗೆ ಮಹಾರಾಷ್ಟ್ರದಲ್ಲಿ ಘಟಿಸಬಾರದು. ಅಷ್ಟು ಜಾಗೃತೆ ಮುಖ್ಯಮಂತ್ರಿಗಳು ವಹಿಸಬೇಕು, ಇಲ್ಲವಾದರೆ ರಾಜ್ಯದ ಹೊರಗಿನ ಜನರು ಔರಂಗಜೇಬನ ಗೋರಿ ಇದು ರಾಷ್ಟ್ರೀಯ ವಿಷಯವಾಗಿ ಪರಿವರ್ತಿಸಲು ನೋಡುತ್ತಿದ್ದಾರೆ. ಈಗ ಅಯೋಧ್ಯೆಯ ರಾಜಕೀಯ ಲಾಭವಿಲ್ಲ; ಬದಲಾಗಿ ಔರಂಗಜೇಬನ ಗೋರಿ ಇದು ರಾಜಕೀಯ ಲಾಭವಾಗಿದೆ, ಅದಕ್ಕಾಗಿ ಇದು ಎರಡನೆಯ ಅಯೋಧ್ಯ ಆಗುವ ಸಾಧ್ಯತೆ ಇದೆ, ಎಂದು ವಂಚಿತ ಬಹುಜನ ಮೋರ್ಚಾದ ನಾಯಕ ಪ್ರಕಾಶ ಅಂಬೇಡ್ಕರ್ ಇವರು ಹೇಳಿದರು.

ಸಂಪಾದಕೀಯ ನಿಲುವು

ಔರಂಗಜೇಬನ ಗೋರಿಯನ್ನು ಅಯೋಧ್ಯೆಗೆ ಹೋಲಿಸುವುದು, ಇದು ಹಿಂದೂದ್ವೇಷ ಅಲ್ಲವೇ ?