Pak Spy Arrested : ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ನೀಡುತ್ತಿದ್ದ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ ಉದ್ಯೋಗಿಯ ಬಂಧನ !

ಬಿಇಎಲ್ ಉದ್ಯೋಗಿ ದೀಪ್ ರಾಜ್ ಚಂದ್ರ

ಬೆಂಗಳೂರು – ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (ಬಿಇಎಲ್) ಉದ್ಯೋಗಿ ದೀಪ್ ರಾಜ್ ಚಂದ್ರ ಎಂಬ ಉದ್ಯೋಗಿಯನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಚಂದ್ರ `ಬೆಲ್ ‘ (ಬಿಇಎಲ್?) ನಲ್ಲಿರುವ ಉತ್ಪನ್ನ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದನು. ಚಂದ್ರ ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದನವನು. ಕೆಲವು ದಿನಗಳ ಹಿಂದೆ, ತನಿಖಾ ದಳವು ಕಾನಪುರದ ಶಸ್ತ್ರಾಸ್ತ್ರ ಕಾರ್ಖಾನೆಯ ರವೀಂದ್ರ ಕುಮಾರ್ ಎಂಬ ಜೂನಿಯರ್ ಕಾರ್ಯ ವ್ಯವಸ್ಥಾಪಕನನ್ನು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಬಂಧಿಸಿತ್ತು. ಅವನ ನಡೆಯುತ್ತಿರುವ ವಿಚಾರಣೆಯ ಕುರಿತು ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಅದರ ಆಧಾರದ ಮೇಲೆ ಬೆಂಗಳೂರಿನಲ್ಲಿ ಕ್ರಮ ಕೈಗೊಳ್ಳಲಾಯಿತು.

`ಬೆಲ್‘ನ ಯಾವ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ. ಸಧ್ಯಕ್ಕೆ `ಬೆಲ್’ನಲ್ಲಿ ಭಾರತೀಯ ವಾಯುಪಡೆಗೆ ವಿವಿಧ ರೀತಿಯ ಮಾರಕ ಆಯುಧಗಳನ್ನು ತಯಾರಿಸುವ ಕೆಲಸ ನಡೆಯುತ್ತಿದೆ. ಹಾಗೆಯೇ ಡ್ರೋನ್‌ಗಳು ಮತ್ತು ಫೈಟರ್ ಜೆಟ್‌ಗಳನ್ನು ಸಹ ನಿರ್ಮಿಸಲಾಗುತ್ತಿದೆ.

ಇದಕ್ಕೂ ಮೊದಲು, ಫೆಬ್ರವರಿ 18 ರಂದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕಾರವಾರ ನೌಕಾ ನೆಲೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಒದಗಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳ ವಿರುದ್ಧ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು !