ಕೇವಲ 2 ಜನರ ಮೇಲೆ ಮಾತ್ರ ಆರೋಪ ಸಾಬೀತು
ನವದೆಹಲಿ – ಕಳೆದ 10 ವರ್ಷಗಳಲ್ಲಿ, ಅಂದರೆ ಏಪ್ರಿಲ್ 1, 2015 ರಿಂದ ಫೆಬ್ರವರಿ 28, 2025 ರವರೆಗೆ, ಜಾರಿ ನಿರ್ದೇಶನಾಲಯ (ಇಡಿ) ಒಟ್ಟು 193 ರಾಜಕೀಯ ನಾಯಕರ ವಿರುದ್ಧ ಆರ್ಥಿಕ ಅವ್ಯವಹಾರಗಳ ಪ್ರಕರಣಗಳನ್ನು ದಾಖಲಿಸಿದೆ; ಆದರೆ, ಅವರಲ್ಲಿ ಇಲ್ಲಿಯವರೆಗೆ ಕೇವಲ ಇಬ್ಬರ ವಿರುದ್ಧದ ಆರೋಪಗಳು ಸಾಬೀತಾಗಿದೆ. ಕೇಂದ್ರ ರಾಜ್ಯ ಸಚಿವ ಪಂಕಜ ಚೌಧರಿ ಇವರು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ಎ.ಎ. ರಹೀಮ ಈ ವಿಷಯದಲ್ಲಿ ಒಂದು ಪ್ರಶ್ನೆ ಕೇಳಿದ್ದರು.
ರಹೀಮ ಇವರು ರಾಜ್ಯ ಮತ್ತು ಪಕ್ಷವಾರು ಅಪರಾಧಗಳ ಕುರಿತು ವಿವರವಾದ ಮಾಹಿತಿಯನ್ನು ಕೋರಿದ್ದರು. ಇದಕ್ಕೆ ಸರಕಾರ ರಾಜ್ಯ ಮತ್ತು ಪಕ್ಷವಾರು ಯಾವುದೇ ದಾಖಲೆಗಳನ್ನು ಇಡಲಾಗುತ್ತಿಲ್ಲವೆಂದು ಮಾಹಿತಿಯನ್ನು ನೀಡಿದೆ