ಗುಜರಾತ: ಹಣ ನೀಡಿ ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸುತ್ತಿದ್ದ ಇಬ್ಬರ ಬಂಧನ!

ಸುರೇಂದ್ರನಗರ (ಗುಜರಾತ) – ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಸ್ಥಳೀಯ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ನಗದು ಮತ್ತು ಇತರ ಆಮಿಷಗಳನ್ನೊಡ್ಡಿದ ಆರೋಪದ ಮೇಲೆ ಇಬ್ಬರು ಕ್ರಿಶ್ಚಿಯನ್ ವ್ಯಕ್ತಿಗಳನ್ನು ಬಂಧಿಸಲಾಗಿದೆ. ರತಿಲಾಲ ಪರಮಾರ ಮತ್ತು ಭಂವರಲಾಲ ಪಾರಧಿ ಆರೋಪಿಗಳಾಗಿದ್ದು ಇವರು ಕೆಲವು ಹಿಂದೂಗಳಿಗೆ ಮತಾಂತರಕ್ಕಾಗಿ 20,000 ರೂಪಾಯಿ ನಗದು ನೀಡಿದ್ದರು. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

1. ವಡಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಪಧೇರಿಯಾ ಅವರು ಮಾತನಾಡಿ, ರತಿಲಾಲ ಪರಮಾರ ಮತ್ತು ಭವರಲಾಲ ಪಾರಧಿ ಅವರು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಆಮಿಷವೊಡ್ಡಿದ್ದರು. ‘ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ ನಂತರ ಅವರ ಗುಣಪಡಿಸಲಾಗದ ಕಾಯಿಲೆಗಳು ವಾಸಿಯಾಗುತ್ತವೆ’ ಎಂದೂ ಸಹ ಅವರು ಭರವಸೆ ನೀಡಿದ್ದರು.

2. ದೂರು ನೀಡಿದಂತಹ ರಣಜಿತ ಭಾಂಗು ಅವರು ಮಾತನಾಡಿ, ಇಬ್ಬರೂ ಆರೋಪಿಗಳು ಹಿಂದೂ ದೇವತೆಗಳ ಬಗ್ಗೆ ಕೆಟ್ಟ ಪದಗಳನ್ನು ಬಳಸಿದ್ದರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ನಂತರ ರಣಜಿತ ಭಾಂಗು ಅವರು ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳದ ಸ್ಥಳೀಯ ಪದಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು.

3. ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳದ ಸ್ವಯಂಸೇವಕರು ವಡಾಲಿ ಪೊಲೀಸರನ್ನು ಸಂಪರ್ಕಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಇಬ್ಬರೂ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳಿಗೆ ಅವಮಾನ) ಮತ್ತು ಗುಜರಾತ್ ಧರ್ಮ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಮತಾಂತರ ನಿಷೇಧ ಕಾಯ್ದೆಯು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ಕೂಗುವ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರಿಗೆ ಬಡ ಹಿಂದೂಗಳಿಗೆ ಹಣದ ಆಮಿಷವೊಡ್ಡಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವುದು ಕಾಣುತ್ತಿಲ್ಲವೇ? ಇದು ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರ ಬೂಟಾಟಿಕೆಯನ್ನು ಬಯಲು ಮಾಡುತ್ತದೆ!