ಇತಿಹಾಸಪ್ರೇಮಿಗಳು ಮಾಡಿ ವಿರೋಧದ ಪರಿಣಾಮ !
ಮುಂಬಯಿ – ನಟ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಛಾವಾ’ ಚಲನಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಛತ್ರಪತಿ ಸಂಭಾಜಿ ಮಹಾರಾಜ ಮತ್ತು ರಾಣಿ ಯೇಸುಬಾಯಿ ನಡುವಿನ ಲೆಝಿಮ್ ನೃತ್ಯದ ದೃಶ್ಯವನ್ನು ಚಲನಚಿತ್ರಿಸಿದ್ದರಿಂದ ಕೆಲವರು ಇದನ್ನು ವಿರೋಧಿಸಿದರು. ಛತ್ರಪತಿ ಸಂಭಾಜಿ ಮಹಾರಾಜರ ಅವಮಾನ ಮಾಡಿದ್ದ ನಿರ್ದೇಶಕ ಲಕ್ಷ್ಮಣ್ ಉತೆಕರ್ ಮತ್ತು ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಇತ್ತು. ಈ ಚಲನಚಿತ್ರದ ಸ್ವಾತಂತ್ರ್ಯವನ್ನು ಬಳಸಿಕೊಂಡು ತಪ್ಪಾದ ಮಾಹಿತಿಯನ್ನು ಹರಡುವ ಪ್ರಯತ್ನ ಎಂದು ಟೀಕಿಸಲಾಯಿತು. ರಾಜ್ಯ ಸರಕಾರ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿರೋಧದ ನಂತರ ಚಲನಚಿತ್ರದಿಂದ ವಿವಾದಾತ್ಮಕ ಭಾಗವನ್ನು ತೆಗೆದುಹಾಕಲಾಗಿದೆ ಎಂದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಿಳಿಸಿದ್ದರು, ಎಂದು ರಾಜ್ಯ ಸರಕಾರದ ಸಚಿವ ಮತ್ತು ಶಿವಸೇನಾ ನಾಯಕ ಉದಯ ಸಮಂತ ಹೇಳಿದ್ದಾರೆ.
ಉದಯ ಸಾಮಂತ ಇವರು ಮಾತನಾಡಿ, “ಧರ್ಮರಕ್ಷಕ ಮತ್ತು ಸ್ವರಾಜ್ಯ ರಕ್ಷಕ ಛತ್ರಪತಿ ಸಂಭಾಜಿ ಮಹಾರಾಜ ಅವರ ಜೀವನವನ್ನು ಆಧರಿಸಿದ ಹಿಂದಿ ಚಲನಚಿತ್ರವನ್ನು ನಿರ್ಮಿಸುವುದು ಸಂತೋಷದ ವಿಷಯ”ವಾಗಿದೆ. ಛತ್ರಪತಿಗಳ ಇತಿಹಾಸವನ್ನು ಜಗತ್ತಿಗೆ ಅರ್ಥಮಾಡಿಕೊಳ್ಳಲು ಇಂತಹ ಪ್ರಯತ್ನಗಳು ಅವಶ್ಯಕವಾಗಿದೆ; ಆದರೆ ಚಲನಚಿತ್ರದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಚಲನಚಿತ್ರವನ್ನು ಮೊದಲು ತಜ್ಞರು ಮತ್ತು ತಿಳಿದವರಿಗೆ ತೋರಿಸಬೇಕು, ಮತ್ತು ಅವರಿಲ್ಲದೆ ಬಿಡುಗಡೆ ಮಾಡಬಾರದು ಎಂಬುದು ನಮ್ಮ ನಿಲುವು ಇದೆ”, ಎಂದು ಹೇಳಿದರು.