ಭಾರತದಲ್ಲಿ ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆಯೋ, ಅಲ್ಲಿಯವರೆಗೆ ಸಂವಿಧಾನ, ಜಾತ್ಯಾತೀತ, ಕಾನೂನು ಉಳಿಯಲಿದೆ ! – ಗುಜರಾತ ಉಪಮುಖ್ಯಮಂತ್ರಿ ನಿತೀನ ಪಟೇಲ

ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ ದೇಶದಲ್ಲಿ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರವಿರೋಧಿ ಕಾನೂನು ಇತ್ಯಾದಿ ಕಾನೂನುಗಳನ್ನು ಮಾಡುವುದು ಅನಿವಾರ್ಯ !

ಮದರಸಾಗಳಲ್ಲಿನ ಶಿಕ್ಷಕರಿಗೆ ಪಿಂಚಣಿ ಏಕೆ ನೀಡಲಾಗುತ್ತಿದೆ? – ಕೇರಳ ಉಚ್ಚನ್ಯಾಯಾಲಯದಿಂದ ಪಿಣರಾಯಿ ವಿಜಯನ ಸರಕಾರಕ್ಕೆ ಪ್ರಶ್ನೆ

ಅನೇಕ ಮದರಸಾಗಳಿಂದ ಭಯೋತ್ಪಾದಕರು ತಯಾರಾಗುತ್ತಿರುವ ಹಾಗೂ ಅವರು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಬಹಿರಂಗವಾಗಿದ್ದರೂ, ಸರಕಾರವು ಅವುಗಳನ್ನು ನಿಷೇಧಿಸುವುದರ ಬಗ್ಗೆ ಚಕಾರ ಎತ್ತುತ್ತಿಲ್ಲ. ತದ್ವಿರುದ್ಧವಾಗಿ, ಅನೇಕ ರಾಜ್ಯ ಸರಕಾರಗಳು ಅವರಿಗೆ ಅನುದಾನ, ಅದೇರೀತಿ ಶಿಕ್ಷಕರಿಗೆ ಪಿಂಚಣಿಗಳನ್ನು ನೀಡುತ್ತವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

‘ಜಾತ್ಯತೀತ ಶಿಕ್ಷಣವೋ ಹಿಂದೂ ವಿರೋಧಿ ಪ್ರಚಾರತಂತ್ರವೋ’ ಈ ಕುರಿತು ವಿಶೇಷ ಆನ್‍ಲೈನ್ ಚರ್ಚಾಕೂಟ !

ಸ್ವಾತಂತ್ರ್ಯದ ನಂತರ ಸೋವಿಯತ್ ಕಮ್ಯುನಿಸ್ಟರ ಪ್ರಭಾವದಿಂದಾಗಿ, ದೇಶದ ಶಿಕ್ಷಣದಲ್ಲಿ ಹಿಂದೂ ಧರ್ಮವನ್ನು ಕೀಳಾಗಿ ಪರಿಗಣಿಸಲಾಯಿತು. ಗಾಂಧಿ-ನೆಹರೂರವರ ಕಾಲದಿಂದಲೂ ತಪ್ಪಾದ ಇತಿಹಾಸವನ್ನು ಬರೆಯಲಾಗಿದೆ. ಇದರ ಪರಿಣಾಮವಾಗಿ ಎಡಪಂಥೀಯ ಸಿದ್ಧಾಂತ, ಅಂದರೆ ಹಿಂದೂ ವಿರೋಧಿ ಸಿದ್ಧಾಂತವು ಜನರ ಮೇಲೆ ಹೇರಲಾಯಿತು. ಹಿಂದೂ ವಿರೋಧಿ ಇತಿಹಾಸವನ್ನು ಅನೇಕ ದಶಕಗಳಿಂದ ಕಲಿಸಲಾಗುತ್ತಿದೆ.