೨೨ ಕೋಟಿ ಮುಸಲ್ಮಾನರು ಈಗ ಅಲ್ಪಸಂಖ್ಯಾತರಲ್ಲ !

ಕಾಂಗ್ರೆಸ್‌ನ ಹಿರಿಯ ಮುಖಂಡ ರಹಮಾನ ಖಾನ ಇವರ ನುಡಿಮುತ್ತು !

  • ಮುಸಲ್ಮಾನರು ಸಮಾಜದಿಂದ ಈಗ ಬೇಡುವುದಲ್ಲ ನೀಡಲು ಪ್ರಾರಂಭಿಸಬೇಕು !

  • ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಬೇಕು!

‘ರಹಮಾನ ಖಾನರ ಸಲಹೆಯಂತೆ ಮುಸಲ್ಮಾನರು ಕೇಳುವರು ಹಾಗೂ ಅದರಂತೆ ನಡೆದುಕೊಳ್ಳುವರು, ಎಂದು ನಂಬಲು ಸಹ ಕೆಚ್ಚೆದೆ ಬೇಕು’ ಎಂಬ ವಿಚಾರ ಭಾರತೀಯರ ಮನಸ್ಸಿಗೆ ಬರುವುದು !

ಬೆಂಗಳೂರು – ದೇಶದ ಮುಸಲ್ಮಾನರು ಈಗ ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಅವರ ಜನಸಂಖ್ಯೆ ಈಗ ೨೨ ಕೋಟಿಯಾಗಿದೆ. ಈಗ ಅವರು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕು, ಎಂಬ ನುಡಿ ಮುತ್ತನ್ನು ಉದುರಿಸಿ ಕಾಂಗ್ರೆಸ್ ಮುಖಂಡರಾದ ರಹಮಾನ ಖಾನರವರು ಮುಸಲ್ಮಾನರಿಗೆ ಕರೆ ನೀಡಿದ್ದಾರೆ. ಅವರು ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ರಹಮಾನ ಖಾನರವರು ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದರು.

೧. ಮುಸಲ್ಮಾನರು ವಿಕಾಸದಲ್ಲಿ ಯೋಗದಾನ ನೀಡಿ ಒಳ್ಳೆಯ ನಾಗರಿಕರಾಗಬೇಕು. ಸರಕಾರದ ಬಳಿ ನಿರಂತರವಾಗಿ ಬೇಡಿಕೆಯಿಡುವುದಕ್ಕಿಂತ ಈಗ ಸಮಾಜಕ್ಕಾಗಿ ಏನಾದರೂ ನೀಡಲು ಪ್ರಯತ್ನಿಸಬೇಕು.

೨. ಸಂವಿಧಾನದ ಕಲಂ ೧೪, ೧೫ ಹಾಗೂ ೧೬ ಕ್ಕನುಸಾರ ಯಾವುದಾದರೂ ಒಂದು ಸಮಾಜವು ಹಿಂದುಳಿದಿದ್ದರೆ ಹಾಗೂ ಅದಕ್ಕೆ ಸಹಾಯದ ಅಗತ್ಯವಿದ್ದರೆ, ಆಗ ಸರಕಾರವು ಸಕಾರಾತ್ಮಕವಾಗಿದ್ದುಕೊಂಡು ಸಹಾಯ ಮಾಡಬಹುದು.

೩. ಕಾಂಗ್ರೆಸ್ ಪಕ್ಷವು ಜಾತ್ಯತೀತವಾಗಿದ್ದು ಅದು ಕಳೆದ ೭೦ ವರ್ಷಗಳಿಂದ ಜಾತ್ಯತೀತವಾದವನ್ನು ರಕ್ಷಿಸುತ್ತಿದೆ. ಒಂದು ವೇಳೆ ಕಾಂಗ್ರೆಸ್ ಜಾತ್ಯತೀತವಾಗಿರದಿದ್ದರೆ, ಇಂದು ಅದರ ಬಳಿ ದೇಶಕ್ಕೋಸ್ಕರ ನೀಡಲು ಏನೂ ಕೂಡ ಇರುತ್ತಿರಲಿಲ್ಲ. (ಕಾಂಗ್ರೆಸ ಜಾತ್ಯತೀತವಾಗಿದ್ದರೆ, ದೇಶದಲ್ಲಿ ಹಿಂದೂಗಳ ಸ್ಥಿತಿ ಚಿಂತಾಜನಕವಾಗಿರುತ್ತಿರಲಿಲ್ಲ ! ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಹಾಗೂ ‘ದೇಶದ ಸಂಪನ್ಮೂಲಗಳ ಮೇಲೆ ಮೊದಲ ಅಧಿಕಾರಮುಸಲ್ಮಾನರದ್ದಾಗಿದೆ’, ಎಂದು ಹೇಳುತ್ತಿರಲಿಲ್ಲ ! ಮತಗಳ ಆಧಾರದಲ್ಲಿ ಭಾರತದ ವಿಭಜನೆಯಾಗುತ್ತಿರಲಿಲ್ಲ ! – ಸಂಪಾದಕರು)