ಜಾತ್ಯತೀತ ದೇಶದಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಲು ವಿಧಾನಸಭೆಯಲ್ಲಿ ಕೋಣೆ ನೀಡುವುದು ಸಂವಿಧಾನದ ಅವಮಾನವೇ ಆಗಿದೆ. ಇದನ್ನು ಜಾತ್ಯಾತೀತವಾದಿಗಳು, ಪುರೋ(ಅಧೋ)ಗಾಮಿಗಳು ಏಕೆ ವಿರೋಧಿಸುತ್ತಿಲ್ಲ? ಭಾಜಪ ಸರಕಾರವಿರುವ ರಾಜ್ಯಗಳಲ್ಲಿ ಸರಕಾರದಿಂದ ಹಿಂದೂಗಳಿಗೆ ಪೂಜೆ ಮಾಡಲು ಇಂತಹ ಕೋಣೆಯನ್ನು ನೀಡಲಾಗಿದ್ದರೆ ತಥಾಕಥಿತ ಜಾತ್ಯಾತೀತವಾದಿಗಳು ಸಂವಿಧಾನದ ಹೆಸರಿನಲ್ಲಿ ಆಕಾಶ ಪಾತಾಳವನ್ನು ಒಂದು ಮಾಡಿಬಿಡುತ್ತಿದ್ದರು.– ಸಂಪಾದಕರು
ರಾಂಚಿ (ಜಾರ್ಖಂಡ) – ಜಾರ್ಖಂಡದಲ್ಲಿನ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರದಿಂದ ವಿಧಾನಸಭೆಯಲ್ಲಿ ನಮಾಜು ಮಾಡಲು ಸ್ವತಂತ್ರ ಕೋಣೆಯನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ಅಧ್ಯಕ್ಷರಿಂದ ಆದೇಶ ನೀಡಲಾಗಿದೆ. ‘ಟಿ ಡಬ್ಲ್ಯೂ 348′ ಈ ಕೋಣೆಯನ್ನು ನೀಡಲಾಗಿದೆ. ಭಾಜಪವೂ ಈ ಬಗ್ಗೆ ಟೀಕೆ ಮಾಡಿದೆ.
Jharkhand Assembly to have a dedicated room to offer Namaz, BJP opposes the decisionhttps://t.co/v5aiiLFPHi
— OpIndia.com (@OpIndia_com) September 4, 2021