ಮೇಘಾಲಯದಲ್ಲಿನ ಭಾಜಪದ ಮಂತ್ರಿ ಸನಬೊರ ಶುಲಾಯಿಯವರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಮುಖೇನ ಮನವಿ !
|
ಶಿಲ್ಲಾಂಗ (ಮೇಘಾಲಯ) – ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿನ ಕ್ರೈಸ್ತರ ಸಮೀಕ್ಷೆ ನಡೆಸಲಾಗುವುದು ಎಂಬ ಹಿನ್ನೆಲೆಯಲ್ಲಿ ಶುಲಾಯಿಯವರು ಈ ಸಮೀಕ್ಷೆಯಲ್ಲಿ ಹಸ್ತಕ್ಷೇಪ ಮಾಡಬೇಕಾಗಿ ಮನವಿ ಮಾಡಿದ್ದಾರೆ. ಅವರು ’ಇಂತಹ ಸಮೀಕ್ಷೆಯು ಸಂವಿಧಾನ ವಿರೋಧಿಯಾಗಿದ್ದು ರಾಜ್ಯದಲ್ಲಿನ ಕ್ರೈಸ್ತ ನಾಗರಿಕರಲ್ಲಿ ಅವಿಶ್ವಾಸದ ಭಾವನೆಯನ್ನು ಹುಟ್ಟಿಸುತ್ತದೆ’ ಎಂದು ಹೇಳಿದ್ದಾರೆ. ಮೇಘಾಲಯದಲ್ಲಿ ಕೇವಲ ೨ ಭಾಜಪದ ಶಾಸಕರಿದ್ದಾರೆ. ರಾಜ್ಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಭಾಜಪದ ಸಮ್ಮಿಶ್ರ ಸರಕಾರವಿದೆ.
Meghalaya’s lone BJP minister Sanbor Shullai writes to PM Narendra Modi, urging him to ensure “safety and security” of Christians living in Karnataka
— Press Trust of India (@PTI_News) December 4, 2021
ಶುಲಾಯಿಯವರು ಈ ಪತ್ರದಲ್ಲಿ `ದಯವಿಟ್ಟು ಕರ್ನಾಟಕದಲ್ಲಿನ ಆರ್ಚ್ ಬಿಷಪ್ ಪೀಟರ ಮಚಾಡೋ ಮತ್ತು ಕ್ರೈಸ್ತ ಪಂಥದವರು ಮಂಡಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನಾನು ವಿನಂತಿಸುತ್ತಿದ್ದೇನೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ’ಜಾತ್ಯತೀತ’ ರಾಷ್ಟ್ರ ಎಂಬ ಪರಿಚಯವಿದ್ದು ಈ ಸಮೀಕ್ಷೆಯಿಂದ ಅದು ಮಲಿನವಾಗಬಹುದು’ ಎಂದು ಬರೆದಿದ್ದಾರೆ.