ಭಾರತದಲ್ಲಿ ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆಯೋ, ಅಲ್ಲಿಯವರೆಗೆ ಸಂವಿಧಾನ, ಜಾತ್ಯಾತೀತ, ಕಾನೂನು ಉಳಿಯಲಿದೆ ! – ಗುಜರಾತ ಉಪಮುಖ್ಯಮಂತ್ರಿ ನಿತೀನ ಪಟೇಲ

ಅದನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲು ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ ದೇಶದಲ್ಲಿ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರವಿರೋಧಿ ಕಾನೂನು ಇತ್ಯಾದಿ ಕಾನೂನುಗಳನ್ನು ಮಾಡುವುದು ಅನಿವಾರ್ಯ ! – ಸಂಪಾದಕರು 

ಗುಜರಾತನ ಉಪಮುಖ್ಯಮಂತ್ರಿ ನಿತೀನ ಪಟೇಲ

ಕರ್ಣಾವತಿ (ಗುಜರಾತ) – ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿರುತ್ತಾರೆಯೋ, ಅಲ್ಲಿಯವರೆಗೆ ಸಂವಿಧಾನ, ಜಾತ್ಯಾತೀತ, ಕಾನೂನು ಉಳಿಯಲಿದೆ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಒಂದು ವೇಳೆ ಹಿಂದೂಗಳ ಸಂಖ್ಯೆ ಕಡಿಮೆಯಾದರೆ, ಆ ದಿನ ಯಾವುದೇ ನ್ಯಾಯಾಲಯ, ಕಾನೂನು ಯಾವುದೇ ಪ್ರಜಾಪ್ರಭುತ್ವ, ಯಾವುದೇ ಸಂವಿಧಾನ ಯಾವುದೂ ಇರುವುದಿಲ್ಲ ಎಲ್ಲವೂ ಮುಳುಗಿ ಹೋಗುತ್ತದೆ. ಬೇಕಿದ್ದರೆ ನನ್ನ ಮಾತುಗಳ ಚಿತ್ರೀಕರಣ ಮಾಡಿ ಇಟ್ಟುಕೊಳ್ಳಿ, ಎಂದು ಗುಜರಾತನ ಉಪಮುಖ್ಯಮಂತ್ರಿ ನಿತೀನ ಪಟೇಲರು ಹೇಳಿಕೆಯನ್ನು ನೀಡಿದ್ದಾರೆ. ಅವರು ಗಾಂಧಿನಗರದಲ್ಲಿ ಭಾರತಮಾತಾ ದೇವಾಲಯದಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾರತಮಾತೆಯ ಈ ದೇವಾಲಯವು ಇಡೀ ದೇಶದಲ್ಲೇ ಮೊದಲನೇ ದೇವಾಲಯವಾಗಿದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ರಾಜ್ಯದ ಗೃಹ ಸಚಿವ ಪ್ರದೀಪ ಸಿಂಗ್ ಜಡೆಜಾ, ಅದೇ ರೀತಿ ವಿಶ್ವ ಹಿಂದೂ ಪರಿಷತ್ತು ಹಾಗೂ ರಾ.ಸ್ವಂ. ಸಂಘದ ಹಿರಿಯ ನಾಯಕರು ಉಪಸ್ಥಿತರಿದ್ದರು.

ನಿತೀನ ಪಟೇಲರು ತಮ್ಮ ಮಾತನ್ನು ಮುಂದುವರೆಸುತ್ತಾ ಮುಂದಿನಂತೆ ಹೇಳಿದರು.

1. ನಾನು ಎಲ್ಲರ ಬಗ್ಗೆ ಈ ಮಾತನ್ನು ಆಡುವುದಿಲ್ಲ, ದೇಶದಲ್ಲಿ ಲಕ್ಷಗಟ್ಟಲೆ ಮುಸಲ್ಮಾನರು ದೇಶಭಕ್ತರಾಗಿದ್ದಾರೆ. ಲಕ್ಷಗಟ್ಟಲೆ ಕ್ರೈಸ್ತರು ದೇಶಭಕ್ತರಾಗಿದ್ದಾರೆ. ಗುಜರಾತ ಪೊಲೀಸರಲ್ಲಿ ಸಾವಿರಾರು ಮುಸಲ್ಮಾನರಿದ್ದಾರೆ. ಇವರೆಲ್ಲರೂ ದೇಶಭಕ್ತರಾಗಿದ್ದಾರೆ. (ಇಂತಹ ದೇಶಭಕ್ತರು ದೇಶದಲ್ಲಿಯ ಮತಾಂಧರ ಮತ್ತು ಜಿಹಾದಿಗಳ ವಿರುದ್ಧ ಏಕೆ ಮಾತನಾಡುತ್ತಿಲ್ಲ ? ಅವರನ್ನು ಬಹಿರಂಗವಾಗಿ ಏಕೆ ವಿರೋಧಿಸುತ್ತಿಲ್ಲ ? – ಸಂಪಾದಕರು)

2. ಒಂದು ಧರ್ಮದ ವ್ಯಕ್ತಿಯು ಇನ್ನೊಂದು ಧರ್ಮದ ವ್ಯಕ್ತಿಯೊಂದಿಗೆ ಯಾವುದೇ ಬಲವಂತವಿಲ್ಲದೇ, ಆಮಿಷಗಳನ್ನು ಅಥವಾ ತಪ್ಪಾದ ಮಾರ್ಗವನ್ನು ಅನುಸರಿಸದೇ ವಿವಾಹವಾಗುತ್ತಿದ್ದಲ್ಲಿ ಇಂತಹ ವಿವಾಹವನ್ನು ಮತಾಂತರದ ಉದ್ದೇಶದಿಂದ ಮಾಡಲಾದ ವಿವಾಹ ಎಂದು ಹೇಳಲು ಸಾಧ್ಯವಿಲ್ಲ.

3. ನಾನು ಮತಾಂತರ ವಿರೋಧಿ ಕಾನೂನನ್ನು ವಿರೋಧಿಸುವ ಸಂಘಟನೆಗಳಿಗೆ ವಿಚಾರಿಸುವುದೇನೆಂದರೆ, ಒಂದು ವೇಳೆ ಹಿಂದೂ ಹುಡುಗಿ ಹಿಂದೂ ಯುವಕನೊಂದಿಗೆ, ಮುಸಲ್ಮಾನ ಹುಡುಗಿ ಮುಸಲ್ಮಾನ ಯುವಕನೊಂದಿಗೆ, ಕ್ರೈಸ್ತ ಹುಡುಗಿ ಕ್ರೈಸ್ತ ಯುವಕನೊಂದಿಗೆ ಹಾಗೂ ಸಿಕ್ಖ ಹುಡುಗಿ ಸಿಕ್ಖ ಯುವಕನೊಂದಿಗೆ ವಿವಾಹವಾದರೆ, ನಿಮಗೇನು ಅಡಚಣೆಯಿದೆ ?

4. ಒಂದು ವೇಳೆ ಹಿಂದೂ ಯುವಕನು ಓರ್ವ ಮುಸಲ್ಮಾನ ಯುವತಿಯೊಂದಿಗೆ ಮೋಸದಿಂದ ವಿವಾಹವಾದರೆ ಅವರಿಗೂ ಇದೇ ಕಾನೂನು ಅನ್ವಯವಾಗುವುದು. ಈ ಕಾನೂನನ್ನು ಯಾವುದೇ ವಿಶಿಷ್ಟ ಧರ್ಮಕ್ಕಾಗಿ ಮಾಡಿಲ್ಲ.