ಜಾತ್ಯತೀತವೆಂದರೆ ಇದೇನಾ ?

ಸಂಪಾದಕೀಯ

ಮಸೀದಿಗಳಲ್ಲಿನ ಧ್ವನಿವರ್ಧಕಗಳ ವಿರುದ್ಧ ಕ್ರಮಕೈಗೊಳ್ಳುವಾಗ ಬಾಲ ಮುದುಡಿಕೊಳ್ಳುವ ಪೊಲೀಸರ ದ್ವಿಮುಖನೀತಿ !

ಇಡೀ ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ನಿಜವೆಂದರೆ ಹಿಂದೂ ಧರ್ಮದ ಹೊರತಾಗಿ ಇತರ ಎಲ್ಲವೂ ಪಂಥಗಳಾಗಿವೆ; ಆದರೆ ಜಾತ್ಯತೀತ ವ್ಯವಸ್ಥೆಗಳು ಅವುಗಳಿಗೆ ‘ಧರ್ಮ’ ಎಂದು ಮಾನ್ಯತೆ ನೀಡಿದೆ. ಪ್ರತಿಯೊಂದು ಧರ್ಮದ ಆಚರಣೆಗಳು, ಪದ್ದತಿಗಳು ಮತ್ತು ಶಿಕ್ಷಣ ತನ್ನದೇ ಆದ ವೈವಿಧ್ಯಗಳನ್ನು ಹೊಂದಿದೆ. ಪ್ರತಿಯೊಂದು ಧರ್ಮದ ಆಯಾ ಸಮಾಜದೊಂದಿಗೆ ಇರುವ ಹೊಕ್ಕಳಬಳ್ಳಿಯು ಧರ್ಮದ ಸಂಪ್ರದಾಯಗಳು ಮತ್ತು ಪರಂಪರೆಗಳನ್ನು ಅವಲಂಬಿಸಿರುತ್ತದೆ. ಧರ್ಮದ ಯಾವುದೇ ಪದ್ದತಿಯನ್ನು ಇಡೀ ಸಮಾಜದ ಮೇಲೆ ಹೇರಬಾರದು ಅಥವಾ ಅದು ಇತರರಿಗೆ ದಬ್ಬಾಳಿಕೆಯಾಗಬಾರದು ಎಂಬುದರ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ. ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ, ಒಂದು ಧರ್ಮದ ಉಪಾಸನೆಯಿಂದ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು; ಆದರೆ ಹಾಗಾಗದೇ ಸಾರ್ವಜನಿಕವಾಗಿ ನೀಡಲಾಗುವ ಅಜಾನ್ ಎಂದರೆ ಇತರ ಧರ್ಮದವರ ಧಾರ್ಮಿಕ ಸ್ವಾತಂತ್ರ್ಯದ ಮೇಲಾದ ಗದಾಪ್ರಹಾರವಾಗಿದೆ. ಧ್ವನಿವರ್ಧಕಗಳ ಮೂಲಕ ಈ ಆಜಾನ್‌ನ ಶಬ್ದ ದೂರದ ವರೆಗೆ ಹರಡುತ್ತದೆ. ಹಾಗಾಗಿ ಇದು ವೃದ್ಧರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಚಿಕ್ಕ ಮಕ್ಕಳಿಗೆ ಹೀಗೆ ಎಲ್ಲರಿಗೂ ತಲೆನೋವಾಗಿದೆ. ಈ ಸಮಸ್ಯೆಯನ್ನು ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳು ಎದುರಿಸುತ್ತಿವೆ; ಏಕೆಂದರೆ ಇಂದು ಅನೇಕ ದೇಶಗಳಲ್ಲಿ ಇಸ್ಲಾಂ ಹರಡಿರುವುದರಿಂದ ಅಲ್ಲಿಯ ಮಸೀದಿಗಳು ಮತ್ತು ಧ್ವನಿವರ್ಧಕಗಳು ಇದ್ದೇ ಇರುತ್ತದೆ.

ಅನೇಕರು ಈ ಧ್ವನಿವರ್ಧಕಗಳನ್ನು ವಿರೋಧಿಸುತ್ತಾರೆ. ವಿರೋಧದ ನಂತರ ಧ್ವನಿವರ್ಧಕಗಳ ಶಬ್ದವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗುತ್ತದೆ; ಆದರೆ ಪುನಃ ‘ನಾಯಿ ಬಾಲ ಡೊಂಕು !’ ಎಂಬಂತೆ ಸ್ಥಿತಿ ಆಗುತ್ತದೆ. ಈ ವಿಷಯ ಅತಿಸೂಕ್ಷ್ಮವಾಗಿರುವುದರಿಂದ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಹೀಗಿದ್ದರೂ, ವಿಶ್ವದಲ್ಲೇ ಅತಿ ಹೆಚ್ಚು ಅಂದರೆ ೨೧ ಕೋಟಿ ಮುಸಲ್ಮಾನ ಜನಸಂಖ್ಯೆ ಇರುವ ಇಂಡೋನೇಷ್ಯಾದಲ್ಲಿ ೭೦ ಸಾವಿರ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿಯನ್ನು ‘ಇಂಡೋನೇಷ್ಯಾ ಮಸೀದಿ ಪರಿಷದ್’ ಕಡಿಮೆ ಮಾಡಿದೆ. ದೊಡ್ಡ ಶಬ್ದದಿಂದ ಜನರು ತೊಂದರೆಗೀಡಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ, ಇಸ್ಲಾಮಿಕ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿಯೂ ಅಲ್ಲಿಯ ಸರಕಾರವು ಮಸೀದಿಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ತಗ್ಗಿಸಲು ಆದೇಶಿಸಿತು. ಅಲ್ಲಿ ಅದರಂತೆ ಕ್ರಮ ಕೈಗೊಳ್ಳಲಾಯಿತು. ‘ಕೋಟಿಗಟ್ಟಲೆ ಮುಸಲ್ಮಾನರನ್ನು ಹೊಂದಿರುವ ಮುಸ್ಲಿಂ ರಾಷ್ಟ್ರಗಳಲ್ಲಿ ಇದು ಸಾಧ್ಯವಾಗಿದ್ದರೆ ಹಿಂದೂಬಹುಸಂಖ್ಯಾತ ಭಾರತದಲ್ಲಿ ಏಕಾಗುವುದಿಲ್ಲ ?’ ಇದು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಮೂಡಿರುವ ಪ್ರಶ್ನೆಯಾಗಿದೆ, ಇದರಲ್ಲಿ ಸಂದೇಹವಿಲ್ಲ ‘ಇಂಡೋನೇಷ್ಯಾ ಮಾಡಿ ತೋರಿಸಿದ್ದನ್ನು ಭಾರತವೂ ಮಾಡಿ ತೋರಿಸಬೇಕು’, ಇದು ಎಲ್ಲ ಭಾರತೀಯರ ಅಪೇಕ್ಷೆಯಾಗಿದೆ. ಇಂಡೋನೇಷ್ಯಾದಲ್ಲಿ ಜನರು, ಧ್ವನಿವರ್ಧಕಗಳ ದೊಡ್ಡ ಶಬ್ದವು ನಮ್ಮ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದರು. ಖಿನ್ನತೆ, ಕಿರಿಕಿರಿ, ನಿದ್ರಾಹೀನತೆಯಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಈ ವಿರೋಧದ ನಂತರ ಈ ಮೇಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೆಲವು ವರ್ಷಗಳ ಹಿಂದೆ ಪಂಜಾಬ್-ಹರಿಯಾಣ ಉಚ್ಚ ನ್ಯಾಯಾಲಯವು, ‘ಇಸ್ಲಾಂ ಧರ್ಮದ ಸ್ಥಾಪನೆಯ ಸಮಯದಲ್ಲಿ ವಿದ್ಯುತ್ ಮತ್ತು ಮೈಕ್ರೊಫೋನ್ ಹೀಗೆ ಏನೂ ಇರಲಿಲ್ಲ. ಆದ್ದರಿಂದ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳು ಇಸ್ಲಾಂನ ಅವಿಭಾಜ್ಯ ಅಂಗವಲ್ಲ’ ಎಂದಿತ್ತು. ನ್ಯಾಯಾಲಯದ ಈ ಹೇಳಿಕೆಯನ್ನು ಎಲ್ಲಾ ಹಂತಗಳಲ್ಲಿ ವಿಚಾರವಾಗಬೇಕು. ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮಕ್ಕನುಸಾರ ಆಚರಣೆಯ ಸ್ವಾತಂತ್ರ್ಯವನ್ನು ನೀಡಿದ್ದರೂ, ನೈತಿಕವಾಗಿ ಯೋಚಿಸುವುದು ಅಪೇಕ್ಷಿತವಾಗಿದೆ.

ಪೊಲೀಸರ ನೋಟ!

ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ಉಂಟಾಗುವ ಮಾಲೀನ್ಯದ ವಿರುದ್ಧ ನ್ಯಾಯಾಲಯದ ಪ್ರಕ್ರಿಯೆ ಮಾಡಲಾಗಿದೆ. ನ್ಯಾಯಾಲಯವೂ ಈ ನಿಟ್ಟಿನಲ್ಲಿ ಆದೇಶಗಳನ್ನು ನೀಡಿದೆ; ಆದರೆ ಕ್ರಮಕೈಗೊಂಡಿರುವುದು ಕಂಡುಬಂದಿಲ್ಲ, ಇದು ಭಾರತದ ದುರದೃಷ್ಟಕರವಾಗಿದೆ. ಅನೇಕ ಮಸೀದಿಗಳಲ್ಲಿ ಈ ಧ್ವನಿವರ್ಧಕಗಳನ್ನು ಅಕ್ರಮವಾಗಿ ಅಳವಡಿಸಲಾಗಿದೆ; ಆದರೆ ಅದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಇದರಿಂದ ಮಾಲೀನ್ಯವನ್ನು ತಡೆಗಟ್ಟುವುದು ದೂರದ ಮಾತಾಗಿದೆ. ಇದೆಲ್ಲದರಲ್ಲೂ ನ್ಯಾಯಾಲಯದ ಜೊತೆಗೆ ಪೊಲೀಸ್ ಆಡಳಿತದ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ; ಆದರೆ ಪೊಲೀಸರು ಕೇವಲ ನೋಡುವುದಷ್ಟೆ ಬೇರೇನೂ ಮಾಡುವುದಿಲ್ಲ. ಹಿಂದೂ ಧಾರ್ಮಿಕ ಹಬ್ಬಗಳಲ್ಲಿ, ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ; ಆದರೆ ಮಸೀದಿಗಳ ಮೇಲೆ ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಬಂದಾಗ, ಪೊಲೀಸರು ತಕ್ಷಣವೇ ಬಾಲ ಮುದುಡಿಕೊಳ್ಳುತ್ತಾರೆ. ‘ಇದನ್ನು ಪೊಲೀಸರ ಪೌರುಷ ಎನ್ನಬೇಕೇ ? ಈ ಸರ್ವಧರ್ಮಸಮಭಾವ ಎಲ್ಲಿಂದ ಬಂತು ? ಇದನ್ನೇ ಜಾತ್ಯತೀತ ಎನ್ನಬೇಕೇ ?’ ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.

ಮಾನಖುರ್ದ್ (ಮುಂಬಯಿ) ನಲ್ಲಿ ವಾಸಿಸುತ್ತಿರುವ ಯುವತಿ ಕು. ಕರಿಷ್ಮಾ ಭೋಸಲೆ ಮಧ್ಯಂತರ ಅವಧಿಯಲ್ಲಿ ಎಲ್ಲರಿಗೂ ಪರಿಚಿತರಾದರು; ಏಕೆಂದರೆ ಅವಳಲ್ಲಿ ಕಂಡ ಪ್ರಖರ ಧರ್ಮಾಭಿಮಾನವಿತ್ತು ! ಆಕೆಯ ಮನೆಯ ಪಕ್ಕದ ಮಸೀದಿಯಲ್ಲಿರುವ ಧ್ವನಿವರ್ಧಕಗಳ ಶಬ್ದದಿಂದ ತೊಂದರೆಯಾದಾಗ ಆಕೆ ಪೊಲೀಸ್ ಠಾಣೆಗೆ ಹೋಗಿ ವಿರೋಧಿಸಿದ್ದಳು. ವಾಸ್ತವವಾಗಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂ ಹುಡುಗಿಯೊಬ್ಬಳು ಈ ರೀತಿಯಲ್ಲಿ ಧ್ವನಿ ಎತ್ತುವುದು ಖಂಡಿತವಾಗಿಯೂ ಪ್ರಶಂಸನೀಯವಾಗಿದೆ; ಆದರೆ ಭಾರತದಲ್ಲಿ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹಾಗಾಗಿ ಕರಿಷ್ಮಾಗೆ ವಿರೋಧವನ್ನು ಎದುರಿಸಬೇಕಾಯಿತು. ಸ್ಥಳೀಯ ಮುಸಲ್ಮಾನರು ಆಕೆಗೇ ‘ಧ್ವನಿವರ್ಧಕದಿಂದ ತೊಂದರೆ ಆಗುತ್ತಿದ್ದರೆ, ಮನೆಯನ್ನು ಬದಲಾಯಿಸು’ ಎಂದು ಬೆದರಿಕೆಯೊಡ್ಡಿದರು. ಈ ಬೆದರಿಕೆಯಿಂದ ಅಂತಿಮವಾಗಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಅಂದರೆ ಪೊಲೀಸರಿಗೆ ಇದು ಹೀಗೆ ಆಗುತ್ತದೆ ಎಂದು ತಿಳಿದಿತ್ತು; ಆದರೆ ಅನೇಕ ಹಿಂದೂಗಳು ಆಕೆಯನ್ನು ಬೆಂಬಲಿಸಿದ್ದರಿಂದ ಕೊನೆಯಲ್ಲಿ ಮಹಾನಗರ ಪಾಲಿಕೆಯು ಧ್ವನಿವರ್ಧಕವನ್ನು ತೆಗೆದುಹಾಕಿತು. ಭಾರತದಲ್ಲಿ ಮಸೀದಿಗಳಲ್ಲಿನ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡಲು ಕರಿಶ್ಮಾ ಭೋಸಲೆಯಂತೆ ಪ್ರತಿಯೊಬ್ಬರೂ ರಣರಾಗಿಣಿಯಾಗುವ ಅಗತ್ಯವಿದೆ.

ನ್ಯಾಯಸಮ್ಮತ ರೀತಿಯಲ್ಲಿ ಹೋರಾಡುವ ಅವಶ್ಯಕತೆ !

ಭಾರತ ಯಾವಾಗಲೂ ಇತರ ಧರ್ಮಗಳ ಯಾವುದೇ ವಿಷಯವನ್ನು ವಿರೋಧಿಸಲು ಪ್ರಯತ್ನಿಸಿದರೆ, ಅದನ್ನು ತಕ್ಷಣವೇ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಗುತ್ತಿದೆ’ ಎಂದು ಕೂಗಾಡುತ್ತಾರೆ. ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ಅಥವಾ ಗಣೇಶೋತ್ಸವದಲ್ಲಿ ಹಾಕುವ ಹಾಡುಗಳಿಂದ ಹಾಗೂ ಹೋಳಿ ಸಮಯದಲ್ಲಿ ಕಟ್ಟಿಗೆ ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ ಎಂದು ಹಿಂದೂದ್ವೇಷಿಗಳು ಕೂಗಾಡುತ್ತಾರೆ; ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಗ್ಗೆ ಅಲ್ಪ ಪ್ರಮಾಣದಲ್ಲಿ ವಿರೋಧಿಸಲಾಗುತ್ತದೆ. ಭಾರತೀಯರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಶಬ್ದದ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಡಬೇಕು. ಇಲ್ಲಿಯವರೆಗೆ ನೀಡಿರುವ ಆದೇಶಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು. ಆ ಆದೇಶಗಳ ಅವಮಾನ ಆಗುತ್ತಿದ್ದರೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಧಾರ್ಮಿಕ ಸೌಹಾರ್ದತೆ ಕಾಪಾಡಲು ಸಾಧ್ಯ.

ಆಗ ಸೆಕ್ಯುಲರ್ಗಳು (ಜಾತ್ಯತೀತರು) ಎಲ್ಲಿದ್ದರು ?

ಇಂದು ನುಸುಳುಕೋರ ರೋಹಿಂಗ್ಯಾರನ್ನು ಹೊರಹಾಕಿದರೆ ಸೆಕ್ಯುಲರ್ (ಜಾತ್ಯತೀತ) ಹಾಗೂ ಎಡಪಂಥೀಯರು ಸ್ವತಃ ಎದೆ ಬಡಿದುಕೊಳ್ಳಲು ಆರಂಭಿಸುತ್ತಾರೆ. ಆದರೆ ಯಾವಾಗ ಲಕ್ಷಗಟ್ಟಲೆ ಕಾಶ್ಮೀರಿ ಹಿಂದೂಗಳು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಛಾವಣಿಗಳಲ್ಲಿ ಉಳಿಯಬೇಕಾಯಿತೋ ಆಗ ಈ ಸೆಕ್ಯುಲರ್ ಹಾಗೂ ಎಡಪಂಥೀಯರು ಎಲ್ಲಿ ಹೋಗಿದ್ದರು ? – ಸಾಥ್ವಿ ಡಾ. ಪ್ರಾಚಿ.