ಸತತ ಕೃತಜ್ಞತಾಭಾವದಲ್ಲಿರುವ ಸನಾತನದ ಸಂತ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರಿಂದ ದೇಹತ್ಯಾಗ

ಪೂ. ಅಜ್ಜಿಯವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, “ಯಾವಾಗಲೂ ಶ್ರೀ ಗುರುಗಳ ಅನುಸಂಧಾನದಲ್ಲಿರುವ ಪೂ. ಅಜ್ಜಿಯವರಿಂದ ಅಖಂಡ ನಾಮಜಪ ನಡೆಯುತ್ತಿತ್ತು. ಅವರ ಮುಂದಿನ ಸಾಧನಾ ಪ್ರವಾಸವೂ ಒಳ್ಳೆಯದಾಗಿ ನಡೆಯಲಿದೆ”, ಎಂದು ಹೇಳಿದರು.

ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ !

೩ ಜುಲೈ ೨೦೨೩ ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸ ಲಾಯಿತು. ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಜಿಜ್ಞಾಸುಗಳಿಗೆ ಆನ್‌ಲೈನ್‌ದಲ್ಲಿ ಮಾಡಿದ ಮಾರ್ಗದರ್ಶನದ ಮುಂದಿನ ಭಾಗ ವನ್ನು ಇಲ್ಲಿ ನೀಡುತ್ತಿದ್ದೇವೆ. – (ಭಾಗ ೨) ೪ ಇ. ಭೂಕಬಳಿಕೆಯ ವಕ್ಫ್ ಕಾನೂನು : ಇಂದು ಒಂದೆಡೆ ಸರಕಾರಿಕರಣಗೊಂಡ ದೇವಸ್ಥಾನಗಳ ಜಮೀನು ಕಬಳಿಕೆ ಯಾಗುತ್ತಿದ್ದರೆ, ಇನ್ನೊಂದೆಡೆ ವಕ್ಫ್ ಕಾಯ್ದೆಯಂತಹ ಕಾನೂನುಗಳ ಮೂಲಕ ವಕ್ಫ್ ಮಂಡಳಿ ಒಡೆತನದ … Read more

ನಮ್ಮಲ್ಲಿ ಯಾವ ಭಾವವಿದೆ ? ಇದಕ್ಕಿಂತಲೂ ನಮ್ಮ ಮನಸ್ಸು ಸ್ಥಿರ ಮತ್ತು ಆನಂದದಲ್ಲಿದೆಯೇ ? ಎಂದು ಗಮನ ಕೊಡುವುದು ಬಹಳ ಆವಶ್ಯಕ !

ಯಾವಾಗ ಸಾಧಕನು ಗುರುಗಳು ಕೊಟ್ಟ ಸೇವೆಯಲ್ಲಿ ಹೆಚ್ಚು ಹೆಚ್ಚಾಗಿ ಏಕರೂಪನಾಗತೊಡಗುತ್ತಾನೋ ಆಗ ಅವನಲ್ಲಿರುವ ವ್ಯಕ್ತ ಭಾವವು ಅವ್ಯಕ್ತಭಾವದಲ್ಲಿ ರೂಪಾಂತರ ವಾಗಲು ಪ್ರಾರಂಭವಾಗುತ್ತದೆ.

ಸಂತರು ಅಥವಾ ಉನ್ನತ ಸಾಧಕರ ಬಗ್ಗೆ ವಿಕಲ್ಪವನ್ನು ತಂದುಕೊಂಡು ಪಾಪವನ್ನು ಎಳೆದುಕೊಳ್ಳದಿರಿ !

‘ಸನಾತನದ ಅನೇಕ ಸಂತರು ಅಥವಾ ಉನ್ನತ ಸಾಧಕರು ವಿವಿಧ ಸಾಧಕರ ಸೇವೆಗಳ ಜವಾಬ್ದಾರಿಯನ್ನು ನಿಭಾಯಿಸು ತ್ತಾರೆ. ಕೆಲವೊಮ್ಮೆ ಅವರು ಸಾಧಕರಿಗೆ ಯಾವುದಾದರೊಂದು ತಪ್ಪು ತೋರಿಸಿದರೆ ಅಥವಾ ಯಾವುದಾದರೊಂದು ನಿರ್ಣಯವನ್ನು ಹೇಳಿದರೆ ಮತ್ತು ಅದು ಸಾಧಕರಿಗೆ ಒಪ್ಪಿಗೆ ಆಗದಿದ್ದರೆ, ಆಗ ಸಾಧಕರಿಗೆ ಅವರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ಅಥವಾ ವಿಕಲ್ಪಗಳು ಬರುತ್ತವೆ.

ಶ್ರೀ. ಅರವಿಂದ ಸಹಸ್ರಬುದ್ಧೆ ಮತ್ತು ಶ್ರೀಮತಿ ವೈಶಾಲಿ ಸುರೇಶ ಮುಂಗಳೆ ಇವರು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

ನಮ್ರತೆ, ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಪುಣೆಯ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಇವರು ಸನಾತನದ ೧೨೫ ನೇ ಸಂತಪದವಿಯಲ್ಲಿ ವಿರಾಜಮಾನ !

ಪುಣೆಯ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಮತ್ತು ಈಶ್ವರಪುರ (ಸಾಂಗಲಿ ಜಿಲ್ಲೆ) ಶ್ರೀಮತಿ ವೈಶಾಲಿ ಮುಂಗಳೆ (ವಯಸ್ಸು ೭೬) ಇವರು ಸಂತಪದವಿಯಲ್ಲಿ ವಿರಾಜಮಾನ ! – ಪೂ. ಅರವಿಂದ ಸಹಸ್ರಬುದ್ಧೆ

ಪುಣೆಯಲ್ಲಿ ನಡೆದ ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಸನಾತನದ ಧರ್ಮಪ್ರಚಾರಕ ಸಂತರಾದ ಸದ್ಗುರು ಸ್ವಾತಿ ಖಾಡಯೆ ಇವರು ಅವರ ವ್ಯಷ್ಟಿ ಸಂತಪದವಿಯ ಆನಂದದಾಯಕ ಘೋಷಣೆಯನ್ನು ಮಾಡಿದರು.

ಶ್ರೀರಾಮನ ನಾಮಾನುಸಂಧಾನದಲ್ಲಿ ಮಗ್ನರಿರುವ ಈಶ್ವರಪುರ ಸಾಂಗಲಿಯ ಶ್ರೀಮತಿ ವೈಶಾಲಿ ಸುರೇಶ ಮುಂಗಳೆ

ಅಕ್ಟೋಬರ್ ೧೯೮೭ ರಲ್ಲಿ ಕನಸಿನಲ್ಲಿ ಒಬ್ಬ ಪೋಸ್ಟ್ ಮಾಸ್ತರನು ‘ಶ್ರೀರಾಮ ಜಯ ರಾಮ ಜಯ ಜಯ ರಾಮ |, ಎಂದು ಬರೆದ ಕಾಗದವನ್ನು ಅವರ ಕೈಯಲ್ಲಿ ನೀಡಿದನು ಮತ್ತು ‘ಅದು ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಅನುಗ್ರಹವಾಗಿದೆ, ಎಂದು ತಿಳಿದಾಗ ಅವರು ೧ ಲಕ್ಷ ರಾಮನ ಜಪವನ್ನು ಬರೆದರು.

ನಿಜವಾದ ಗುರುಗಳ ಲಕ್ಷಣಗಳು

‘ಯಾರು ಸತ್ಕುಲದಲ್ಲಿ ಜನಿಸಿದ್ದಾರೆ, ಸದಾಚಾರಿಯಾಗಿದ್ದಾರೆ, ಶುದ್ಧ ಭಾವನೆಗಳನ್ನು ಹೊಂದಿದ್ದಾರೆ, ಇಂದ್ರಿಯಗಳನ್ನು ತಮ್ಮ ಹತೋಟಿಯಲ್ಲಿರಿಸಿದ್ದಾರೆ, ಯಾರು ಎಲ್ಲಾ ಶಾಸ್ತ್ರಗಳ ಸಾರವನ್ನು ಅರಿತಿದ್ದಾರೆ, ಪರೋಪಕಾರಿಯಾಗಿದ್ದಾರೆ. ಸದಾ ಭಗವಂತನ ಅನು ಸಂಧಾನದಲ್ಲಿರುತ್ತಾರೆ

ಸನಾತನದ ಎರಡನೆ ಬಾಲಸಂತರಾದ ಪೂ. ವಾಮನ ಅನಿರುದ್ಧ ರಾಜಂದೇಕರ (4 ವರ್ಷಗಳು) ಇವರು `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ನೀಡಿದ ಸಂದೇಶ

‘ಸನಾತನದ ಎರಡನೆ ಬಾಲಸಂತರಾದ ಪೂ. ವಾಮನ ರಾಜಂದೇಕರ(ವಯಸ್ಸು 4 ವರ್ಷಗಳು) ಇವರು `ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಾವೆಲ್ಲರೂ ಹೇಗೆ ಪ್ರಯತ್ನಿಸಬೇಕಾಗಿದೆ? ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಶ್ರದ್ಧೆ ಮತ್ತು ಭಾವವನ್ನು ಹೇಗೆ ಇಡಬೇಕು?’ ಎನ್ನುವ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ನೀಡಿರುವ ಸಂದೇಶವನ್ನು ಧ್ವನಿಮುದ್ರಣ(ಆಡಿಯೋ ರೆಕಾರ್ಡಿಂಗ) ಮಾಡಲಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ಸಮಯದಲ್ಲಿ ಅವರ ಚರಣಗಳಲ್ಲಿ ಸಂತರು ಮತ್ತು ಗಣ್ಯರು ಅರ್ಪಿಸಿದ ಕೃತಜ್ಞತಾರೂಪದ ಭಾವಪುಷ್ಪಗಳು !

‘ನನ್ನ ಶರೀರದಲ್ಲಿರುವ ಎಲ್ಲ ಜೀವಕೋಶಗಳು ಸತತವಾಗಿ ‘ಶ್ರೀ ಗುರವೇ ನಮಃ | ಈ ನಾಮಜಪವನ್ನು ಮಾಡುತ್ತಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇವಲ ನನ್ನದಷ್ಟೇ ಅಲ್ಲ, ಅವರು ಎಲ್ಲ ಸಾಧಕರ ರಕ್ಷಕರಾಗಿದ್ದಾರೆ.- ಪೂ. ಪ್ರದೀಪ ಖೇಮಕಾ