ಶ್ರೀ. ಅರವಿಂದ ಸಹಸ್ರಬುದ್ಧೆ ಮತ್ತು ಶ್ರೀಮತಿ ವೈಶಾಲಿ ಸುರೇಶ ಮುಂಗಳೆ ಇವರು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ನಮ್ರತೆ, ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಪುಣೆಯ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಇವರು ಸನಾತನದ ೧೨೫ ನೇ ಸಂತಪದವಿಯಲ್ಲಿ ವಿರಾಜಮಾನ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಪುಣೆಯ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಇವರು ಹಿಂದೆ ನಾಸ್ತಿಕರಾಗಿದ್ದರು. ಸನಾತನದ ಮಾರ್ಗದರ್ಶನಕ್ಕನು ಸಾರ ಸಾಧನೆಯನ್ನು ಮಾಡಲು ಆರಂಭಿಸಿದ ನಂತರ, ಹಾಗೆಯೇ ಸನಾತನದ ಆಧ್ಯಾತ್ಮಿಕ ಗ್ರಂಥ ಗಳನ್ನು ಓದಿದ ನಂತರ ಅವರ ದೇವರ ಮೇಲಿನ ಶ್ರದ್ಧೆಯು ದೃಢವಾಯಿತು. ಪ್ರೇಮಭಾವ ಮತ್ತು ಸಹಜತೆ ಈ ಗುಣಗಳಿಂದ ಸಹಸ್ರಬುದ್ಧೆಕಾಕಾರವರು ಅಲ್ಪಾವಧಿಯಲ್ಲಿಯೇ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅವರು ತಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ಸಾಧಕನ ಜನ್ಮತಿಥಿಯನ್ನು ಬರೆದುಕೊಳ್ಳುತ್ತಾರೆ ಮತ್ತು ಆ ತಿಥಿಯಂದು ಆ ಸಾಧಕನಿಗೆ ನೆನಪಿನಿಂದ ಶುಭಾಶಯ ನೀಡುತ್ತಾರೆ. ಹಿಂದೆ ಕಾಕಾರವರ ಮನೆಗೆ ಅನೇಕ ಸಂತರು ಮತ್ತು ಸಾಧಕರು ಅನೇಕ ಬಾರಿ ವಾಸ್ತವ್ಯ ಮಾಡಿದ್ದರು. ಕಾಕಾ-ಕಾಕುರವಲ್ಲಿನ ಪ್ರೇಮಭಾವ ದಿಂದ ಅವರು ಸಾಧಕರ ಆದರಾತಿಥ್ಯವನ್ನು ಬಹಳ ಪ್ರೀತಿ ಯಿಂದ ಮಾಡುತ್ತಿದ್ದರು. ಈಗ ‘ಇಬ್ಬರಿಗೂ ವಯಸ್ಸು ಮತ್ತು ಶಾರೀರಿಕ ಸ್ಥಿತಿಯ ಮಿತಿಯಿಂದಾಗಿ ಹಿಂದಿನ ತುಲನೆಯಲ್ಲಿ ಅವರಿಗೆ ಶಾರೀರಿಕ ಸೇವೆಯನ್ನು ಮಾಡಲು ಸಾಧ್ಯವಾಗುವುದಿಲ್ಲ, ಎಂದು ಅವರಿಗೆ ಖೇದವೆನಿಸುತ್ತದೆ. ಅವರಿಗೆ ಹೆಚ್ಚು ವಯಸ್ಸಾಗಿದ್ದರೂ ಪತ್ನಿಗೆ (ಸೌ. ಮಂಗಲಾ ಅರವಿಂದ ಸಹಸ್ರಬುದ್ಧೆ (ವಯಸ್ಸು ೬೯) ಇವರಿಗೆ) ಸಹಾಯ ಮಾಡಲು ಅವರು ಮನೆಯಲ್ಲಿನ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಅದರಲ್ಲಿ ಅವರಿಗೆ ಯಾವುದೇ ಕೀಳರಿಮೆ ಅನಿಸುವುದಿಲ್ಲ. ಅವರು ಮನಸ್ಸಿನಿಂದ ಬಹಳ ಸ್ಥಿರವಾಗಿದ್ದಾರೆ. ಅವರ ಹರ್ನಿಯಾದ (ಟಿಪ್ಪಣಿ) ದೊಡ್ಡ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರವೂ ಅವರು ಬಹಳ ಸ್ಥಿರ ಮತ್ತು ಶಾಂತವಾಗಿದ್ದರು. ಕಳೆದ ೧೫ ವರ್ಷಗಳಿಂದ ಅವರು ಸಾಪ್ತಾಹಿಕ ‘ಸನಾತನ ಪ್ರಭಾತಕ್ಕೆ ಸಂಬಂಧಪಟ್ಟ ಸೇವೆಯನ್ನು ಅಖಂಡವಾಗಿ ಮಾಡುತ್ತಿದ್ದಾರೆ. ಆ ಸೇವೆಯನ್ನೂ ಅವರು ಮನಃಪೂರ್ವಕ, ಭಾವಪೂರ್ಣ ರೀತಿಯಲ್ಲಿ, ತಪ್ಪು ರಹಿತ ಮತ್ತು ಪರಿಪೂರ್ಣ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾರಿಗೂ ಅವರ ಸೇವೆಯ ಬೆಂಬತ್ತುವಿಕೆ ಮಾಡುವ ಪ್ರಸಂಗ ಬಂದಿಲ್ಲ. ‘ಅವರು ಸೇವೆಯೊಂದಿಗೆ ಏಕರೂಪರಾಗಿದ್ದಾರೆ, ಎಂದು ಅನಿಸುತ್ತದೆ. ಅವರ ‘ಹರ್ನಿಯಾದ ಶಸ್ತ್ರಚಿಕಿತ್ಸೆಯಾದ ನಂತರವೂ ಅವರಿಗೆ ಆಯಾಸವಿರುವಾಗ ಅವರು ಕುಳಿತು, ಕೆಲವೊಮ್ಮೆ ಮಲಗಿಕೊಂಡು ಸೇವೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ‘ನನಗೆ ಏನೂ ಬರುವುದಿಲ್ಲ. ಎಲ್ಲವನ್ನೂ ದೇವರೇ ಮಾಡುತ್ತಾನೆ, ಎಂಬ ಅವರ ಭಾವವಿರುತ್ತದೆ. ಲೆಕ್ಕಾಚಾರದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ತಡರಾತ್ರಿಯ ವರೆಗೆ ಎಚ್ಚರವಿದ್ದು ವ್ಯತ್ಯಾಸವನ್ನು ಕಂಡು ಹಿಡಿದು ನಂತರವೇ ಮಲಗುತ್ತಾರೆ. ಅವರ ಈ ಉದಾಹರಣೆಯಿಂದ ಗುರುಗಳ ಒಂದು ಪೈಸೆಯ ಲೆಕ್ಕವನ್ನು ರಾತ್ರಿಯಿಡಿ ಹುಡುಕುವ ಸಂತ ಏಕನಾಥ ಮಹಾರಾಜರ ನೆನಪು ಬರುತ್ತದೆ.

‘ಸತತ ಆನಂದದಿಂದ ಇರುವುದು, ಎಲ್ಲರನ್ನು ತಾವಾಗಿಯೇ ಮಾತನಾಡಿಸುವುದು, ತಪ್ಪನ್ನು ಮನಃಪೂರ್ವಕ ಸ್ವೀಕರಿಸುವುದು, ತಪ್ಪಾದ ನಂತರ ಸಾಧಕರಲ್ಲಿ ಕ್ಷಮೆ ಯಾಚಿಸುವುದು ಇತ್ಯಾದಿ ಅನೇಕ ಗುಣಗಳಿಂದಾಗಿ ಅವರು ಎಲ್ಲರಿಗೂ ಹತ್ತಿರದವರು ಎಂದು ಅನಿಸುತ್ತಾರೆ. ಅವರ ಮುಖವನ್ನು ನೋಡಿದಾಗ ಶಾಂತವೆನಿಸಿ ಆನಂದದ ಅರಿವಾಗುತ್ತದೆ. ಅವರ ಮಾತನಾಡುವಾಗ ಬಹಳ ನಮ್ರತೆ ಮತ್ತು ಪ್ರೀತಿಯ ಅರಿವಾಗುತ್ತದೆ. ಅವರು ಅಂತರ್ಮುಖರಾಗಿದ್ದಾರೆ. ಅವರು ಸತತ ಈಶ್ವರನ ಅನುಸಂಧಾನದಲ್ಲಿ ಇರುತ್ತಾರೆ. ದಿನವಿಡಿ ಅವರ ಪ್ರಾರ್ಥನೆ, ಕೃತಜ್ಞತೆ ಮತ್ತು ನಾಮಜಪ ನಡೆದಿರುತ್ತದೆ. ಅವರ ಮುಖದ ಮೇಲೆ ಬೇರೆಯೇ ತೇಜದ ಅರಿವಾಗುತ್ತದೆ. ಅವರು ಪತ್ನಿ ಸೌ. ಮಂಗಲಾ ಅರವಿಂದ ಸಹಸ್ರಬುದ್ಧೆ (ವಯಸ್ಸು ೬೯) ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದು ಅವರು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ.

ಸತತ ಆನಂದದಿಂದ ಇರುವ ಕಾಕಾರವರು ೨೦೧೩ ರಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿರುವ ಬಗ್ಗೆ ಘೋಷಿಸಲಾಗಿತ್ತು. ‘ಶಾರೀರಿಕ ತೊಂದರೆಯಲ್ಲಿಯೂ ಶಾಂತ ಮತ್ತು ಸ್ಥಿರವಾಗಿರುವುದು, ಕಡಿಮೆ ಅಹಂ ಇತ್ಯಾದಿ ಅನೇಕ ಗುಣಗಳಿಂದಾಗಿ ಇಂದಿನ ಶುಭದಿನದಂದು ಅವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ ಮತ್ತು ಅವರು ‘ವ್ಯಷ್ಟಿ ಸಂತರೆಂದು ಸನಾತನದ ೧೨೫ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ‘ಪೂ. ಅರವಿಂದ ಸಹಸ್ರಬುದ್ಧೆ ಇವರ ಮುಂದಿನ ಆಧ್ಯಾತ್ಮಿಕ ಪ್ರಗತಿ ಶೀಘ್ರ ಗತಿಯಲ್ಲಾಗುತ್ತದೆ, ಎಂದು ನನಗೆ ನಿಶ್ಚಿತವಿದೆ’.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೬.೭.೨೦೨೩)