ಸಂತರು ಅಥವಾ ಉನ್ನತ ಸಾಧಕರ ಬಗ್ಗೆ ವಿಕಲ್ಪವನ್ನು ತಂದುಕೊಂಡು ಪಾಪವನ್ನು ಎಳೆದುಕೊಳ್ಳದಿರಿ !

(ಪೂ.) ಶ್ರೀ. ಸಂದೀಪ ಆಳಶಿ,

‘ಸನಾತನದ ಅನೇಕ ಸಂತರು ಅಥವಾ ಉನ್ನತ ಸಾಧಕರು ವಿವಿಧ ಸಾಧಕರ ಸೇವೆಗಳ ಜವಾಬ್ದಾರಿಯನ್ನು ನಿಭಾಯಿಸು ತ್ತಾರೆ. ಕೆಲವೊಮ್ಮೆ ಅವರು ಸಾಧಕರಿಗೆ ಯಾವುದಾದರೊಂದು ತಪ್ಪು ತೋರಿಸಿದರೆ ಅಥವಾ ಯಾವುದಾದರೊಂದು ನಿರ್ಣಯವನ್ನು ಹೇಳಿದರೆ ಮತ್ತು ಅದು ಸಾಧಕರಿಗೆ ಒಪ್ಪಿಗೆ ಆಗದಿದ್ದರೆ, ಆಗ ಸಾಧಕರಿಗೆ ಅವರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ಅಥವಾ ವಿಕಲ್ಪಗಳು ಬರುತ್ತವೆ. ತಪ್ಪು ತೋರಿಸುವುದರ ಹಿಂದಿನ ಕಾರಣ ಅಥವಾ ನಿರ್ಣಯದ ಹಿಂದಿನ ಕಾರಣವನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ಆ ನಿರ್ಣಯದ ಬಗ್ಗೆ ತಾವೇ ಏನಾದರೊಂದು ತಿಳಿದುಕೊಂಡು ಸಾಧಕರು ದೋಷಗಳಿಗೆ ಬಲಿಯಾಗುತ್ತಾರೆ ಮತ್ತು ತಮ್ಮ ಸಾಧನೆಯಲ್ಲಿ ಹಾನಿಯನ್ನು ಮಾಡಿಕೊಳ್ಳುತ್ತಾರೆ. ಸಂತರು ಅಥವಾ ಉನ್ನತ ಸಾಧಕರ ಬಗ್ಗೆ ವಿಕಲ್ಪ ಬರುವುದು ಪಾಪವಾಗಿದೆ. ವಿಕಲ್ಪ ಬರುವ ಸಾಧಕನ ಆಧ್ಯಾತ್ಮಿಕ ಮಟ್ಟ ಎಷ್ಟು ಹೆಚ್ಚಿರುತ್ತದೆಯೋ, ಆ ವಿಕಲ್ಪದಿಂದ ಅವನಿಗೆ ತಗಲುವ ಪಾಪವೂ ಅಷ್ಟೇ ಹೆಚ್ಚಿರುತ್ತದೆ. ಹಾಗೆಯೇ ವಿಕಲ್ಪವು ಎಷ್ಟು ಹೆಚ್ಚು ಮಟ್ಟವಿರುವ ವ್ಯಕ್ತಿಯ ಬಗ್ಗೆ ಇರುತ್ತದೆಯೋ, ಪಾಪವೂ ಅಷ್ಟೇ ಹೆಚ್ಚು ತಗಲುತ್ತದೆ. ಇಂತಹ ಪಾಪ ನಮಗೆ ತಗಲಬಾರದೆಂದು ಸಾಧಕರು ವಿಕಲ್ಪ ಬಂದರೆ ಸಂಬಂಧಿತರೊಂದಿಗೆ ಮನಮುಕ್ತವಾಗಿ ಮಾತನಾಡಿಕೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಸಮಷ್ಟಿ ಸಂತರೊಂದಿಗೆ ಅಥವಾ ಯಾವ ಸಾಧಕರು ಸಮಷ್ಟಿ ಸ್ತರದ ಯೋಗ್ಯ ದೃಷ್ಟಿಕೋನವನ್ನು ಕೊಡಬಲ್ಲರೋ, ಅವರೊಂದಿಗೆ ಮಾತನಾಡಿಕೊಳ್ಳಬೇಕು. ಆ ವಿಕಲ್ಪವನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಇದರೊಂದಿಗೆ ಭಾವದ ಸ್ತರದಲ್ಲಿ ಪ್ರಯತ್ನವನ್ನೂ ಹೆಚ್ಚಿಸಬೇಕು. ವಿಕಲ್ಪದ ಬಗ್ಗೆ ಕ್ಷಮಾಯಾಚನೆಯನ್ನು ಮಾಡಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು. ಇದರಿಂದ ಸಾಧಕರ ಪಾಪ ಪರಿಹಾರವಾಗಲು ಸಹಾಯವಾಗುತ್ತದೆ. ಒಮ್ಮೆ ಓರ್ವ ಸಂತರು ಒಂದು ಲೇಖನವನ್ನು ಬರೆದಿದ್ದರು. ಆ ಲೇಖನವನ್ನು ಗ್ರಂಥದಲ್ಲಿ ತೆಗೆದುಕೊಳ್ಳಲು ಸಂಕಲನವನ್ನು ಮಾಡುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವ್ಯಾಕರಣದ ದೃಷ್ಟಿಯಿಂದ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಆ ಬದಲಾವಣೆಗಳನ್ನು ನೋಡಿದ ನಂತರ, ಆ ಸಂತರಿಗೆ ಅದು ಸರಿ ಅನಿಸಲಿಲ್ಲ. ಇದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ತಿಳಿದನಂತರ ಅವರು, “ಅವರು ಸಂತರಿದ್ದಾರೆ, ಸಂತರು ಹೇಳಿದ್ದನ್ನು ಕೇಳಬೇಕು. ಸಂತರು ಹೇಗೆ ಹೇಳುತ್ತಾರೆಯೋ, ಹಾಗೆಯೇ ಮಾಡೋಣ” ಎಂದು ಹೇಳಿದರು. ಈ ಒಂದು ಉದಾಹರಣೆಯಿಂದ ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮನಸ್ಸಿನಲ್ಲಿ ಸಂತರ ಬಗ್ಗೆ ಎಷ್ಟು ಅಪಾರ ಭಾವವಿದೆ’, ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಈ ಆದರ್ಶ ವನ್ನು ಕಣ್ಣೆದುರಿಗೆ ಇಟ್ಟುಕೊಂಡು ಸಾಧಕರು ಸಹ ಮೇಲಿನಂತೆ ಪ್ರಯತ್ನಿಸಿದರೆ ಅವರ ಅಧ್ಯಾತ್ಮದಲ್ಲಿ ಬೇಗನೇ ಪ್ರಗತಿ ಆಗುವುದು.’ – ಪೂ. ಸಂದೀಪ ಆಳಶಿ (೨೩.೬.೨೦೨೩)