ಕೊಲ್ಹಾಪುರ – ಧರ್ಮಾಚರಣೆ ಮತ್ತು ಪ್ರೇಮಮಯಿಯಾಗಿರುವ ಕೊಲ್ಲಾಪುರದ ಸನಾತನದ ೭೧ ನೇ ಸಂತರಾದ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರು (ವಯಸ್ಸು ೯೪ ವರ್ಷಗಳು) ಜುಲೈ ೨೨ ರಂದು ರಾತ್ರಿ ೯.೧೫ ಗಂಟೆಗೆ ದೇಹತ್ಯಾಗ ಮಾಡಿ ದರು. ಅವರು ೨ ಪುತ್ರರು, ೨ ಸೊಸೆಯಂದಿರು, ೧ ಪುತ್ರಿ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಅವರು ಗೋವಾದ ಸಾಧಕಿ ಅಶ್ವಿನಿ ಕುಲಕರ್ಣಿ ಇವರ ಅಜ್ಜಿಯಾಗಿದ್ದಾರೆ.
ಈ ಬಗ್ಗೆ ಅಶ್ವಿನಿ ಕುಲಕರ್ಣಿ ಇವರು ಮಾತನಾಡುತ್ತಾ, “ಪೂ. ಅಜ್ಜಿಯವರು ಯಾವಾಗಲೂ ಕೃತಜ್ಞತಾಭಾವದಲ್ಲಿರುತ್ತಿದ್ದರು. ‘ಶ್ರೀ ಗುರುಗಳು ನನಗಾಗಿ ಎಷ್ಟು ಮಾಡುತ್ತಾರೆ, ನಾನು ಅವರಿಗಾಗಿ ಏನೂ ಮಾಡಲಿಲ್ಲ’, ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ‘ಜೀವನದ ಎಲ್ಲ ಕಹಿ ಪ್ರಸಂಗಗಳಲ್ಲಿ ದೇವರು ಜೊತೆಗಿದ್ದರು. ಇದೆಲ್ಲವೂ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಾಗಿದ್ದು ಅವರು ಎಲ್ಲರನ್ನೂ ಕಾಪಾಡುತ್ತಿದ್ದಾರೆ’, ಎಂಬ ಅವರ ಭಾವವಿತ್ತು. ದೇಹತ್ಯಾಗದ ಸುಮಾರು ೧೫ ದಿನಗಳ ಮುನ್ನ ಅವರ ತಿನ್ನುವುದು-ಕುಡಿಯುವುದು ತುಂಬಾ ಕಡಿಮೆಯಾಗಿತ್ತು; ಆದರೆ ಆ ಸ್ಥಿತಿಯಲ್ಲಿಯೂ ಅವರು ಬಹಳ ಶಾಂತವಾಗಿದ್ದರು. ದೇಹ ತ್ಯಾಗದ ನಂತರ ಅವರ ಕೋಣೆ ಮತ್ತು ಮನೆಯಲ್ಲಿ ಚೈತನ್ಯ ಮತ್ತು ಪ್ರಕಾಶದಲ್ಲಿ ಹೆಚ್ಚಳವಾಗಿತ್ತು. ಅವರ ಕೋಣೆಗೆ ಹೋದಾಗ ಟೊಳ್ಳಿನಲ್ಲಿ ಕುಳಿತಂತೆ ಅನಿಸಿ ಶಾಂತಿಯ ಸ್ಪಂದನ ಗಳ ಅರಿವಾಗುತ್ತಿತ್ತು. ಅಲ್ಲಿ ಏಕಾಗ್ರತೆಯಿಂದ ನಾಮಜಪ ನಡೆಯುತ್ತಿತ್ತು”, ಎಂದು ಹೇಳಿದರು.
ಪೂ. ಅಜ್ಜಿಯವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, “ಯಾವಾಗಲೂ ಶ್ರೀ ಗುರುಗಳ ಅನುಸಂಧಾನದಲ್ಲಿರುವ ಪೂ. ಅಜ್ಜಿಯವರಿಂದ ಅಖಂಡ ನಾಮಜಪ ನಡೆಯುತ್ತಿತ್ತು. ಅವರ ಮುಂದಿನ ಸಾಧನಾ ಪ್ರವಾಸವೂ ಒಳ್ಳೆಯದಾಗಿ ನಡೆಯಲಿದೆ”, ಎಂದು ಹೇಳಿದರು. |