ಪುಣೆಯ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಮತ್ತು ಈಶ್ವರಪುರ (ಸಾಂಗಲಿ ಜಿಲ್ಲೆ) ಶ್ರೀಮತಿ ವೈಶಾಲಿ ಮುಂಗಳೆ (ವಯಸ್ಸು ೭೬) ಇವರು ಸಂತಪದವಿಯಲ್ಲಿ ವಿರಾಜಮಾನ ! – ಪೂ. ಅರವಿಂದ ಸಹಸ್ರಬುದ್ಧೆ

ಪೂ. ಅರವಿಂದ ಸಹಸ್ರಬುದ್ಧೆ

ಪುಣೆ – ನಮ್ರತೆ, ಪರಿಪೂರ್ಣ ಸೇವೆ ಮಾಡುವ ಧ್ಯಾಸವಿರುವ ಮತ್ತು ಎಲ್ಲರನ್ನು ತಂದೆಯಂತೆ ಪ್ರೀತಿಸುವ ಸನಾತನದ ಸಾಧಕರಾದ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಇವರು ಸನಾತನದ ೧೨೫ ನೇ ಸಂತಪದವಿಯಲ್ಲಿ ವಿರಾಜಮಾನರಾದರು. ಪುಣೆಯಲ್ಲಿ ನಡೆದ ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಸನಾತನದ ಧರ್ಮಪ್ರಚಾರಕ ಸಂತರಾದ ಸದ್ಗುರು ಸ್ವಾತಿ ಖಾಡಯೆ ಇವರು ಅವರ ವ್ಯಷ್ಟಿ ಸಂತಪದವಿಯ ಆನಂದದಾಯಕ ಘೋಷಣೆಯನ್ನು ಮಾಡಿದರು. ನಂತರ ಸದ್ಗುರು ಸ್ವಾತಿ ಖಾಡಯೆ ಇವರು ಪೂ. ಅರವಿಂದ ಸಹಸ್ರಬುದ್ಧೆ ಇವರಿಗೆ ಶಾಲು, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು. ಈ ಕಾರ್ಯಕ್ರಮಕ್ಕೆ ಪೂ. ಅರವಿಂದ ಸಹಸ್ರಬುದ್ಧೆ ಇವರ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಪತ್ನಿ ಸೌ. ಮಂಗಲಾ ಸಹಸ್ರಬುದ್ಧೆ, ಮಗಳು ಸೌ. ಅಂಜಲಿ ಬೊಡಸ, ಪೂ. (ಸೌ.) ಮನಿಷಾ ಪಾಠಕ ಮತ್ತು ಪುಣೆಯ ಕೆಲವು ಸಾಧಕರು ಉಪಸ್ಥಿತರಿದ್ದರು.

ಪೂ. ಅರವಿಂದ ಸಹಸ್ರಬುದ್ಧೆಯವರ ಜೀವನದಲ್ಲಿ ಸಾಧನೆಯಿಂದಾಗಿರುವ ಆಮುಲಾಗ್ರ ಬದಲಾವಣೆ, ಅವರು ಅನೇಕ ಕಠಿಣ ಪ್ರಸಂಗಳನ್ನು ಸ್ಥಿರವಾಗಿ ಎದುರಿಸುವುದು, ಅವರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿರುವ ಶ್ರದ್ಧೆ ಇವುಗಳ ಕುರಿತಾದ ಪ್ರಸಂಗಗಳನ್ನು ಕೇಳಿ ಉಪಸ್ಥಿತರಿದ್ದವರಿಗೆ ಭಾವಜಾಗೃತವಾಯಿತು.

ಈಶ್ವರಪುರ (ಸಾಂಗಲಿ ಜಿಲ್ಲೆ) – ಶ್ರೀರಾಮನ ಅಖಂಡ ನಾಮಜಪವನ್ನು ಮಾಡಿ ಆ ಮೂಲಕ ಇತರರಿಗೆ ನಾಮಜಪದ ಮಾಧುರ್ಯವನ್ನು ಸವಿಯಲು ನೀಡುವ ಮತ್ತು ಜಿಗುಟುತನದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವ ಈಶ್ವರಪುರದ ಶ್ರೀಮತಿ ಮುಂಗಳೆಅಜ್ಜಿಯವರನ್ನು ಜುಲೈ ೭ ರಂದು ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಾಡಯೆ ಇವರು ‘ಸಂತರೆಂದು ಘೋಷಿಸಿದರು. ಸದ್ಗುರು ಸ್ವಾತಿ ಖಾಡಯೆ ಇವರು ಪೂ. ಮುಂಗಳೆಅಜ್ಜಿಯವರ ನಿವಾಸಸ್ಥಳದಲ್ಲಿ ಚೈತನ್ಯಮಯ ವಾತಾವರಣದಲ್ಲಿ ಮುಂಗಳೆ ಅಜ್ಜಿಯವರೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸುತ್ತಿರುವಾಗ ಸಂತತ್ವದ ರಹಸ್ಯವನ್ನು ಬಹಿರಂಗಪಡಿಸಿದರು. ಅನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂ. ಮುಂಗಳೆಅಜ್ಜಿಯವರ ಬಗ್ಗೆ ನೀಡಿದ ಸಂದೇಶವನ್ನು ಓದಿ ಸದ್ಗುರು ಸ್ವಾತಿ ಖಾಡಯೆ ಇವರು ಅವರಿಗೆ ಪುಷ್ಪಹಾರವನ್ನು ಹಾಕಿ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು. ಈ ಸಮಯದಲ್ಲಿ ಪೂ. ಮುಂಗಳೆಅಜ್ಜಿಯವರೊಂದಿಗೆ ಸಂವಾದ ನಡೆಸುತ್ತಿರುವಾಗ ಸದ್ಗುರು ಸ್ವಾತಿ ಖಾಡಯೆ ಇವರ ಭಾವಜಾಗೃತಿಯಾಯಿತು.

ಈ ಆನಂದವಾರ್ತೆಯನ್ನು ಕೇಳಿದ ನಂತರ ಎಲ್ಲರಿಗೂ ಬಹಳ ಆನಂದವಾಯಿತು. ಪರಾತ್ಪರ ಗುರುದೇವರ ಕೃಪೆಯನ್ನು ಅನುಭವಿಸುವಾಗ ಉಪಸ್ಥಿತ ಎಲ್ಲ ಜನರಿಗೆ ಹೃದಯ ತುಂಬಿ ಬಂದಿತು.