‘ಕೆಲವೊಮ್ಮ ಭಾವವಿರುವ ಸಾಧಕರನ್ನು ನೋಡಿ ಕೆಲವು ಸಾಧಕರಿಗೆ, ‘ನನ್ನಲ್ಲಿ ಅವರಷ್ಟು ಭಾವವಿಲ್ಲ, ಹಾಗಾಗಿ ನನ್ನ ಪ್ರಗತಿ ಆಗುತ್ತಿದೆಯೇ ? ’ ಹೀಗೆನಿಸುತ್ತದೆ. ಕೆಲವು ಸಾಧಕರು ‘ಮೊದಲೆಲ್ಲ ನನಗೆ ಭಾವಜಾಗೃತಿಯಾಗುತ್ತಿತ್ತು ಆದರೆ ಈಗ ಆಗುತ್ತಿಲ್ಲ; ಅಂದರೆ ನನ್ನ ಸಾಧನೆಯಲ್ಲಿ ಕುಸಿತವಾಗುತ್ತಿಲ್ಲವಲ್ಲ ?’ ಎಂದೂ ಕೇಳುತ್ತಾರೆ ಭಾವಾಶ್ರು ಬರುವುದು, ಗಂಟಲು ತುಂಬಿಬರುವುದು ಮುಂತಾದ ಭಾವಜಾಗೃತಿಯ ಲಕ್ಷಣಗಳು ವ್ಯಕ್ತಭಾವವನ್ನು ತೋರಿಸುತ್ತವೆ.
ಯಾವಾಗ ಸಾಧಕನು ಗುರುಗಳು ಕೊಟ್ಟ ಸೇವೆಯಲ್ಲಿ ಹೆಚ್ಚು ಹೆಚ್ಚಾಗಿ ಏಕರೂಪನಾಗತೊಡಗುತ್ತಾನೋ ಆಗ ಅವನಲ್ಲಿರುವ ವ್ಯಕ್ತ ಭಾವವು ಅವ್ಯಕ್ತಭಾವದಲ್ಲಿ ರೂಪಾಂತರ ವಾಗಲು ಪ್ರಾರಂಭವಾಗುತ್ತದೆ. ‘ಸೇವೆಯ ತಳಮಳ’, ಇದು ಅವ್ಯಕ್ತಭಾವದ ಪ್ರಧಾನ ಲಕ್ಷಣವಾಗಿದೆ. ಸಾಧಕನ ಪ್ರಕೃತಿ, ಸಾಧನೆಯ ಮಾರ್ಗ, ಸೇವೆಯ ಸ್ವರೂಪ, ಮತ್ತು ಅವನ ಸಾಧನೆಯ ಸ್ಥಿತಿ ಇದಕ್ಕನುಸಾರವೂ ಅವನಲ್ಲಿ ವ್ಯಕ್ತ ಮತ್ತು ಅವ್ಯಕ್ತ ಭಾವದ ಪ್ರಮಾಣವು ಹೆಚ್ಚು-ಕಡಿಮೆ ಇರುತ್ತದೆ. ಭಾವವು ಜೀವದ ತಾತ್ಕಾಲಿಕ ಅವಸ್ಥೆಯಾಗಿದೆ, ಆದರೆ ‘ಮನಸ್ಸಿನ ಸ್ಥಿರತೆ ಮತ್ತು ಆನಂದಾವಸ್ಥೆ’ ಯನ್ನು ಸಾಧಿಸುವುದು ಜೀವದ ಧ್ಯೇಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಒಂದು ಮಾರ್ಗದರ್ಶನದಲ್ಲಿ ಮುಂದಿನಂತೆ ಹೇಳಿದ್ದಾರೆ, ‘ಸಾಧಕರು ತಮ್ಮಲ್ಲಿ ಯಾವ ಭಾವವಿದೆ ?’, ಎಂದು ಗಮನ ಕೊಡುವುದಕ್ಕಿಂತ ‘ನಮ್ಮ ಮನಸ್ಸು ಸ್ಥಿರವಾಗಿದೆಯಲ್ಲ ?’, ಎಂಬುದರ ಕಡೆ ಗಮನ ಕೊಡುವುದು ಹೆಚ್ಚು ಅವಶ್ಯಕವಾಗಿದೆ.’
– ಪೂ. ಸಂದೀಪ ಆಳಶಿ (೩.೬.೨೦೨೩)