ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವಕ್ಕೆ ಅನೇಕ ಗಣ್ಯರು ಮತ್ತು ಹಿತಚಿಂತಕರು ಉಪಸ್ಥಿತರಿದ್ದರು ಅವರಲ್ಲಿ ಧನಬಾದ, ಝಾರಖಂಡನ ಉದ್ಯಮಿ ಮತ್ತು ಸನಾತನದ ಸಂತರಾದ ಪೂ. ಪ್ರದೀಪ ಖೇಮಕಾ, ಅವರ ಪತ್ನಿ ಪೂ. (ಸೌ) ಸುನಿತಾ ಖೇಮಕಾ, ದೆಹಲಿಯ ಉದ್ಯಮಿ ಮತ್ತು ಸನಾತನದ ಸಂತರಾದ ಪೂ. ಸಂಜೀವಕುಮಾರ, ‘ಪಿತಾಂಬರಿ ಉದ್ಯಮ ಸಮೂಹದ ವ್ಯವಸ್ಥಾಪಕೀಯ ಸಂಚಾಲಕರಾದ ಶ್ರೀ ರವೀಂದ್ರ ಪ್ರಭುದೇಸಾಯಿ (ಆಧ್ಯಾತ್ಮಿಕ ಮಟ್ಟ ಶೇ. ೬೧) ಮತ್ತು ಮಡಿಕೇರಿಯ ನ್ಯಾಯವಾದಿ ಪಿ. ಕೃಷ್ಣಮೂರ್ತಿ (ಆಧ್ಯಾತ್ಮಿಕ ಮಟ್ಟ ಶೇ. ೬೪) ಇವರು ಸಮಾರಂಭದ ಕೊನೆಯ ಹಂತದಲ್ಲಿ ಭಾವಪೂರ್ಣ ಮನೋಗತ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿರಲು ಅವಕಾಶ ನೀಡಿದ ಬಗ್ಗೆ ಮೂರೂ ಗುರುಗಳ ಚರಣಗಳಲ್ಲಿ ಕೃತಜ್ಞತೆ ! – ಪೂ. (ಸೌ.) ಸುನೀತಾ ಖೇಮಕಾ, ಝಾರಖಂಡ
ಸಾಧನೆಯನ್ನು ಪ್ರಾರಂಭಿಸುವ ಮೊದಲು ನನಗೆ ಒಬ್ಬಂಟಿ ಆಗಿದ್ದೇನೆ ಎಂದು ಅನಿಸುತ್ತಿತ್ತು, ಸಾಧನೆಯಲ್ಲಿ ಬಂದ ಬಳಿಕ ಅದು ಸಂಪೂರ್ಣ ದೂರವಾಯಿತು. “ನನಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸ್ತಿತ್ವ ನಿರಂತರವಾಗಿ ಅನುಭವಿಸಲು ಸಿಗುತ್ತದೆ. ಅವರು ಯಾವಾಗಲೂ ನನ್ನೊಂದಿಗೆ ಇದ್ದಾರೆಂದು ಹೇಳಬೇಕೆಂದು ಅನಿಸುತ್ತದೆ. ನನಗೆ ನಾನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಅನಿಸುತ್ತದೆ. ಈ ಸಮಾರಂಭದಲ್ಲಿ ಉಪಸ್ಥಿತರಿರಲು ನನಗೆ ಅವಕಾಶ ನೀಡಿದ್ದಕ್ಕಾಗಿ ಮೂರೂ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಲ್ಲ ಸಾಧಕರ ರಕ್ಷಕರು ! – ಉದ್ಯಮಿ ಮತ್ತು ಸನಾತನದ ಸಂತ ಪೂ. ಪ್ರದೀಪ ಖೇಮಕಾ, ಝಾರಖಂಡ
‘ನನ್ನ ಶರೀರದಲ್ಲಿರುವ ಎಲ್ಲ ಜೀವಕೋಶಗಳು ಸತತವಾಗಿ ‘ಶ್ರೀ ಗುರವೇ ನಮಃ | ಈ ನಾಮಜಪವನ್ನು ಮಾಡುತ್ತಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇವಲ ನನ್ನದಷ್ಟೇ ಅಲ್ಲ, ಅವರು ಎಲ್ಲ ಸಾಧಕರ ರಕ್ಷಕರಾಗಿದ್ದಾರೆ. ನನ್ನ ಜೀವನ ಒಂದು ಬ್ಯಾಂಕಿನ ವ್ಯವಸ್ಥಾಪಕರಂತಿದೆ. ಬ್ಯಾಂಕಿನಲ್ಲಿ ಬಹಳ ಹಣವಿರುತ್ತದೆ; ಆದರೆ ವ್ಯವಸ್ಥಾಪಕನಿಗೆ ಅದರ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ. ಹಾಗೆ ನನ್ನದು ಅನೇಕ ವ್ಯವಹಾರಗಳಿದ್ದು ಅವೆಲ್ಲ ಗುರುಕೃಪೆಯಿಂದ ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿವೆ. ಅನೇಕ ವ್ಯವಹಾರಗಳ ಸ್ಥಳಗಳಿಗೆ ವರ್ಷಗಟ್ಟಲೇ ನಾನು ಹೋಗುವುದಿಲ್ಲ; ಆದರೂ ಗುರುಗಳು ಎಲ್ಲ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ಗುರುದೇವರ ಚರಣಗಳಲ್ಲಿ ಒಂದೇಭಾವವನ್ನು ಅರ್ಪಣೆ ಮಾಡಬೇಕೆಂದು ಅನಿಸುತ್ತದೆ.
ಗುರುದೇವರು ನಮಗೆ ಅಮೂಲ್ಯವಾದ ಸಾಧನೆಯನ್ನು ಕಲಿಸಿದರು ! – ಪೂ. ಸಂಜೀವಕುಮಾರ, ದೆಹಲಿ
ನನಗೆ ಇಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಶ್ರೀವಿಷ್ಣುರೂಪದಲ್ಲಿ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅನುಕ್ರಮವಾಗಿ ಬ್ರಹ್ಮ ಮತ್ತು ಮಹೇಶ ಇವರ ರೂಪದಲ್ಲಿ ದರ್ಶನವಾಯಿತು. ಈ ಮೂರೂ ಗುರುಗಳ ಚರಣಗಳಲ್ಲಿ ಸೂಕ್ಷ್ಮ ಜ್ಞಾನದ ಅನುಭೂತಿ ಬರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನನ್ನ ಅನೇಕ ಸಮಸ್ಯೆಗಳು ಬಗೆಹರಿದಿವೆ. ಸನಾತನದ ಸಾಧಕರ ಮೂಲಕ ಗುರುಗಳ ವ್ಯಾಪಕ ರೂಪವು ಕಾರ್ಯನಿರತವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಮಗೆ ಅಮೂಲ್ಯ ಸಾಧನೆಯನ್ನು ಕಲಿಸಿದರು ಈ ಬಗ್ಗೆ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.
ಸಚ್ಚಿದಾನಂದ ಪರಬ್ರಹ್ಮ ಡಾ ಆಠವಲೆಯವರು ಹೇಳಿದ ‘ಗುರುಕೃಪಾಯೋಗದಲ್ಲಿ ಭಾರತವನ್ನು ವಿಶ್ವಗುರು ಮಾಡುವ ಸಾಮರ್ಥ್ಯವಿದೆ ! – ಶ್ರೀ. ರವೀಂದ್ರ ಪ್ರಭುದೇಸಾಯಿ (ಆಧ್ಯಾತ್ಮಿಕ ಮಟ್ಟ ಶೇ. ೬೧) ವ್ಯವಸ್ಥಾಪಕೀಯ ಸಂಚಾಲಕರು, ‘ಪಿತಾಂಬರಿ ಉದ್ಯಮ ಸಮೂಹ, ಠಾಣೆ
೧. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದಂತೆ ಗುರುಕೃಪಾಯೋಗದಲ್ಲಿ ಭಾರತವನ್ನು ವಿಶ್ವ ಗುರುವಾಗಿಸುವ ಸಾಮರ್ಥ್ಯವಿದೆ. ‘ಜಗತ್ತಿನ ೮೦೦ ಕೋಟಿ ಜನಸಂಖ್ಯೆಗಾಗಿ ಅಷ್ಟೇ ಸಾಧನಾಮಾರ್ಗಗಳಿವೆ ಮತ್ತು ‘ಎಷ್ಟು ವ್ಯಕ್ತಿಗಳೋ ಅಷ್ಟೇ ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು ಸಾಧನೆಯ ಈ ಅದ್ಭುತ ಸಿದ್ಧಾಂತವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ್ದಾರೆ. ಈ ಸಿದ್ಧಾಂತದಿಂದ ಹಿಂದೂ ಧರ್ಮದಲ್ಲಿ ಎಷ್ಟು ಸಾಧನೆಯ ಸ್ವಾತಂತ್ರ್ಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ ಮತ್ತು ಇದರಿಂದ ಹಿಂದೂ ಧರ್ಮದ ಮಹಾನತೆಯೂ ಗಮನಕ್ಕೆ ಬರುತ್ತದೆ ಒಂದು ಸಾವಿರ ವರ್ಷಗಳಲ್ಲಿ ಸನಾತನ ಸಂಸ್ಥೆಯಂತಹ ಸಂಸ್ಥೆ, ಒಂದೇ ನಿರ್ಮಾಣವಾಗಿದೆ.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಸ್ಥೂಲದಿಂದ ಸೂಕ್ಷ್ಮದ ಕಡೆಗೆ ಹೋಗುವುದು ಈ ಸಾಧನೆಯ ಒಂದು ತತ್ತ್ವವನ್ನು ಹೇಳಿದ್ದಾರೆ. ಅದರಂತೆ ನಾನು ‘ಪಿತಾಂಬರಿಯ ಸಂಶೋಧನೆ ಮತ್ತು ಅಭಿವೃದ್ಧಿ (ರಿಸರ್ಚ್ ಅಂಡ್ ಡೆವಲಪಮೆಂಟ್) ವಿಭಾಗಕ್ಕೆ ಕಾರ್ಯವನ್ನು ಮಾಡಲು ಹೇಳಿದ್ದೇನೆ. ಅಧ್ಯಾತ್ಮದ ಶಕ್ತಿಯು ಎಷ್ಟಿದೆಯೆಂದರೆ, ಸಾಧನೆಯಿಂದ ಆನಂದಪ್ರಾಪ್ತಿಯಾಗುತ್ತದೆ. ಪ್ರಾರಬ್ಧವೂ ಬದಲಾಗುತ್ತದೆ. ಶಿಕ್ಷಣ ಅಥವಾ ವ್ಯವಸ್ಥಾಪನೆಗಿಂತ ಅಧ್ಯಾತ್ಮದ ತತ್ತ್ವಗಳು ಶ್ರೇಷ್ಠವಾಗಿವೆ.
೩. ನಮಗೆ ಈ ಕಾರ್ಯಕ್ರಮಕ್ಕೆ ಬರುವ ಅನುಮತಿ ಸಿಕ್ಕಿತು, ಆಗ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿಯ ಆರೋಗ್ಯ ತಾನಾಗಿಯೇ ಸುಧಾರಿಸಿತು. ಹೆದ್ದಾರಿಯಲ್ಲಿ ಸಾವಿರಾರು ವಾಹನಗಳಿಂದ ರಸ್ತೆಯಲ್ಲಿ ದಟ್ಟಣೆ ಇರುವಾಗ (ಟ್ರಾಫಿಕ್ ಜಾಮ್) ಕೇವಲ ನಮ್ಮ ವಾಹನಕ್ಕೆ ಬರಲು ದಾರಿಸಿಕ್ಕಿತು. ಇವೆಲ್ಲವೂ ಗುರುಕೃಪೆಯಿಂದಲೇ ಆದವು.
೪. ನಾನು ಕೊರೊನಾ ರೋಗ ಬಂದಾಗ ಆಸ್ಪತ್ರೆಯಲ್ಲಿದ್ದಾಗ, ನನ್ನ ಆತ್ಮವಿಶ್ವಾಸವೇ ಕಳೆದು ಹೋಗಿತ್ತು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನನ್ನ ಕನಸಿನಲ್ಲಿ ಬಂದರು. ಅವರು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು ಮತ್ತು ಒಂದು ರೀತಿಯಲ್ಲಿ ನನ್ನ ಪುನರ್ಜನ್ಮವೇ ಆಯಿತು, ಎಂದು ಆ ಸಮಯದಲ್ಲಿ ನನಗೆ ಅನಿಸಿತು.
೫. ನಾವು ‘ಪಿತಾಂಬರಿ(ಕಂಪನಿ)ಯನ್ನು ಗುರುಚರಣಗಳಲ್ಲಿ ಅರ್ಪಿಸಿದ್ದೇವೆ. ಅವರೇ ‘ಪಿತಾಂಬರಿ ಮತ್ತು ಪ್ರಭುದೇಸಾಯಿ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ. ಅವರೇ ನಮ್ಮ ಕಲ್ಯಾಣವನ್ನು ಮಾಡುವವರಿದ್ದಾರೆ.
ಪೂರ್ವನಿಯೋಜಿತ ಕಾರ್ಯಕ್ರಮಕ್ಕಿಂತ ಗುರುದೇವರ ಬ್ರಹ್ಮೋತ್ಸವಕ್ಕೆ ಪ್ರಾಮುಖ್ಯತೆಯನ್ನು ನೀಡುವ ಶ್ರೀ. ರವೀಂದ್ರ ಪ್ರಭುದೇಸಾಯಿ ತಾಮ್ಹಾಣೆ (ರಾಜಪೂರ ತಾಲೂಕು, ರತ್ನಾಗಿರಿ ಜಿಲ್ಲೆ)ಯಲ್ಲಿ ಪಿತಾಂಬರಿ ಉದ್ಯಮದ ವತಿಯಿಂದ ಸುಗಂಧಿತ ಪುಷ್ಪಗಳನ್ನು ನೀಡುವ ಸಸಿಗಳನ್ನು, ಹಾಗೆಯೇ ವನೌಷಧಿಗಳ ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟಿದ್ದಾರೆ. ಆ ಗ್ರಾಮದಲ್ಲಿ ಪಿತಾಂಬರಿಯ ಅಗರಬತ್ತಿ ನಿರ್ಮಾಣದ ಕಾರ್ಖಾನೆಯೂ ಇದೆ. ಅಲ್ಲಿ ೧೧ ಮೇ ೨೦೨೩ ರಂದು ಹೊಸ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಈ ಕಾರ್ಯಕ್ರಮಗಳಿಗೆ ಪಿತಾಂಬರಿಯ ವ್ಯವಸ್ಥಾಪನದ ಸಂಚಾಲಕರಾರ ಶ್ರೀ. ರವೀಂದ್ರ ಪ್ರಭುದೇಸಾಯಿಯವರು ಪೂರ್ವನಿಯೋಜನೆಯಂತೆ ಉಪಸ್ಥಿತ ರಿರುವವರಿದ್ದರು. ಆದರೆ ಅದೇ ದಿನ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ಕಾರ್ಯಕ್ರಮ ಗೋವಾದಲ್ಲಿ ಇರುವುದಾಗಿ ಅವರಿಗೆ ತಿಳಿದಾಗ ಅವರು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿರ ಬೇಕೆಂದು ಪೂರ್ವ ನಿಯೋಜಿತ ಕಾರ್ಯಕ್ರಮದ ನಿಯೋಜಕರಿಗೆ ಅವರ ಕಾರ್ಯಕ್ರಮಕ್ಕೆ ಉಪಸ್ಥಿತರಿರಲು ಸಾಧ್ಯವಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿ ‘೧೦-೧೫ ದಿನಗಳ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಲು ಬರುವುದಾಗಿ ತಿಳಿಸಿದರು ತದ ನಂತರ ಅವರು ಗುರುದೇವರ ಬ್ರಹ್ಮೋತ್ಸವಕ್ಕೆ ಸಕುಟುಂಬಸಮೇತ ಉಪಸ್ಥಿತರಿದ್ದರು. |
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮೋಕ್ಷದ ದ್ವಾರವನ್ನು ತೆರೆದಿದ್ದಾರೆ – ನ್ಯಾಯವಾದಿ ಕೃಷ್ಣಮೂರ್ತಿ, ಕರ್ನಾಟಕ (ಆಧ್ಯಾತ್ಮಿಕ ಮಟ್ಟ ಶೇ. ೬೪)
‘ಈ ಸಮಾರಂಭಕ್ಕೆ ಉಪಸ್ಥಿತ ಇರಲು ಸಾಧ್ಯವಾಗಿದ್ದರಿಂದ ನನ್ನ ಮನಸ್ಸು ತುಂಬಿ ಬಂದಿದೆ. ಹಿಂದುತ್ವನಿಷ್ಠರಿಗಾಗಿ ಮೊಕದ್ದಮೆಯನ್ನು ಹೋರಾಡುವಾಗ ‘ಪ್ರತಿವಾದಿಗೆ ಏನು ಪ್ರಶ್ನೆಯನ್ನು ಕೇಳಬೇಕು ? ಎನ್ನುವುದು ಹೊಳೆಯದಿದ್ದಾಗ ಅಥವಾ ನಾನು ಬಹಳ ಆಯಾಸಗೊಂಡಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಶರಣಾಗುತ್ತೇನೆ. ೧೨.೪.೨೦೨೩ ರಂದು ರಾತ್ರಿ ಮಡಿಕೇರಿಯಿಂದ ಚತುಷ್ಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಕೆಲವರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಆ ಸಮಯದಲ್ಲಿ ಬಂದೂಕಿನ ಒಂದು ಗುಂಡು ನನ್ನ ತಲೆಯಿಂದ ೨-೩ ಸೆಂ.ಮೀ. ಅಂತರದಿಂದ ಹಾದು ಹೋಯಿತು. ನನ್ನ ವಾಹನದ ಗತಿ ಕಡಿಮೆಯಿದ್ದ ಕಾರಣ ಆ ಗುಂಡು ನನಗೆ ತಗಲಲಿಲ್ಲ. ಆ ಸಮಯದಲ್ಲಿ ನನ್ನ ವಾಹನವನ್ನು ಕಡಿಮೆ ವೇಗದಿಂದ ನಡೆಸುವಂತೆ ಗುರುಗಳೇ ನನಗೆ ಸುಬುದ್ಧಿಯನ್ನು ನೀಡಿದ್ದರು. ನನ್ನ ನಾಮಜಪ ನಿರಂತರವಾಗಿ ಆಗದೇ ಇದ್ದರೂ ಗುರುಗಳು ನನ್ನ ಎಷ್ಟೊಂದು ಕಾಳಜಿಯನ್ನು ವಹಿಸುತ್ತಾರೆ ? ಅವರು ಸಾಧಕರಿಗಾಗಿ ಮೋಕ್ಷದ ದ್ವಾರವನ್ನೇ ತೆರೆದಿರುವುದರಿಂದ ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ‘ಅವರ ಕೃಪೆಯಿಂದ ನನಗೆ ಹಿಂದುತ್ವದ ಕಾರ್ಯವನ್ನು ಹೆಚ್ಚೆಚ್ಚು ಮಾಡಲು ಸಾಧ್ಯವಾಗಲಿ ಎಂದು ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.