ಶ್ರೀರಾಮನ ನಾಮಾನುಸಂಧಾನದಲ್ಲಿ ಮಗ್ನರಿರುವ ಈಶ್ವರಪುರ ಸಾಂಗಲಿಯ ಶ್ರೀಮತಿ ವೈಶಾಲಿ ಸುರೇಶ ಮುಂಗಳೆ

ಪೂ. (ಶ್ರೀಮತಿ) ವೈಶಾಲಿ ಮುಂಗಳೆ

‘ಈಶ್ವರಪುರ (ಜಿಲ್ಲೆ ಸಾಂಗಲಿ)ದ ಶ್ರೀಮತಿ ವೈಶಾಲಿ ಸುರೇಶ ಮುಂಗಳೆ (ವಯಸ್ಸು ೭೬ ವರ್ಷಗಳು) ಇವರು ಶ್ರೀರಾಮಭಕ್ತರಾಗಿದ್ದಾರೆ. ಅಕ್ಟೋಬರ್ ೧೯೮೭ ರಲ್ಲಿ ಕನಸಿನಲ್ಲಿ ಒಬ್ಬ ಪೋಸ್ಟ್ ಮಾಸ್ತರನು ‘ಶ್ರೀರಾಮ ಜಯ ರಾಮ ಜಯ ಜಯ ರಾಮ |, ಎಂದು ಬರೆದ ಕಾಗದವನ್ನು ಅವರ ಕೈಯಲ್ಲಿ ನೀಡಿದನು ಮತ್ತು ‘ಅದು ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಅನುಗ್ರಹವಾಗಿದೆ, ಎಂದು ತಿಳಿದಾಗ ಅವರು ೧ ಲಕ್ಷ ರಾಮನ ಜಪವನ್ನು ಬರೆದರು. ಅವರು ಅನೇಕ ಸ್ಥಳಗಳಲ್ಲಿ ದಾಸಬೋಧದ ಪಾರಾಯಣಗಳನ್ನು ಮಾಡಿದರು. ಅವರು ದಾಸಬೋಧ ಮಂಡಳದ ಪರೀಕ್ಷಕರೆಂದು ಸೇವೆಯನ್ನೂ ಸಲ್ಲಿಸಿದ್ದಾರೆ. ಅವರಿಗೆ ಅನೇಕ ಸಂತರ ದರ್ಶನ ಮತ್ತು ಆಶೀರ್ವಾದ ಲಭಿಸಿದೆ.

ಶ್ರೀಮತಿ ಮುಂಗಳೆ ಇವರ ಬಾಯಿಯಲ್ಲಿ ಯಾವಾಗಲೂ ಶ್ರೀರಾಮನ ನಾಮವಿರುತ್ತದೆ. ಅವರು ಪ್ರತಿಯೊಂದು ಕೃತಿಯನ್ನು ‘ಶ್ರೀರಾಮ, ಎಂದು ಹೇಳುತ್ತಾ ಮಾಡುತ್ತಾರೆ. ಅವರು ಸತತ ‘ರಾಮನಾಮದಲ್ಲಿ ಮಗ್ನರಾಗಿರುತ್ತಾರೆ. ಅವರು ಇತರರಿಂದಲೂ ರಾಮನಾಮದ ಜಪವನ್ನು ಮಾಡಿಸಿಕೊಳ್ಳುತ್ತಾರೆ. ಈ ಹಿಂದೆ ಅವರು ಜನರಿಂದ ೮೫ ಸಾವಿರಗಳಷ್ಟು ರಾಮನಾಮದ ಜಪವನ್ನು ಮಾಡಿಸಿಕೊಂಡಿದ್ದರು ಮತ್ತು ತಾವೂ ಮಾಡಿದರು. ಶ್ರೀಮತಿ ಮುಂಗಳೆ ಇವರು ಶ್ರೀ ಕ್ಷೇತ್ರ ಗೋಂದಾವಲೆಯಲ್ಲಿ ತಮ್ಮ ೬೧ ನೇ ಹುಟ್ಟುಹಬ್ಬದ ನಿಮಿತ್ತ ೬೩ ಸಾವಿರಗಳಷ್ಟು ರಾಮನಾಮದ ಜಪವನ್ನು ಮಾಡಿದ್ದರು. ಜುಲೈ ೨೦೨೨ ರಲ್ಲಿ ಗುರುಪೂರ್ಣಿಮೆಯಂದು ಅವರಿಗೆ ೭೫ ವರ್ಷಗಳು ಪೂರ್ಣಗೊಂಡವು. ಅವರು ಆ ಹುಟ್ಟುಹಬ್ಬವನ್ನೂ ಭಿನ್ನವಾದ ಪದ್ಧತಿಯಲ್ಲಿ ಆಚರಿಸಿದರು. ಅವರು ಸತತ ೩ ದಿನಗಳಕಾಲ ೭೫ ಸಾವಿರಗಳಷ್ಟು ರಾಮನಾಮದ ಜಪವನ್ನು ಮಾಡಿದರು.

ಕೆಲವು ತಿಂಗಳುಗಳ ಹಿಂದೆ ಅವರು ಕಾಲು ಜಾರಿ ಬಿದ್ದುದರಿಂದ ಹಾಸಿಗೆ ಹಿಡಿದಿದ್ದಾರೆ, ಆದರೂ ಅವರ ಸಾಧನೆಯಲ್ಲಿ ವ್ಯತ್ಯಯ ಬಂದಿಲ್ಲ. ಅವರು ಸತತ ದೇವರ ಸ್ಮರಣೆ ಯಲ್ಲಿರುತ್ತಾರೆ. ಅವರ ಮುಖ ಆನಂದಮಯ ಮತ್ತು ಶಾಂತವೆನಿಸುತ್ತದೆ. ‘ಪ್ರತಿಯೊಂದು ಕೃತಿಯನ್ನು ಭಗವಂತನೇ ಮಾಡುತ್ತಾನೆ ಮತ್ತು ಭಗವಂತನಿಂದಲೇ ಆಗುತ್ತದೆ, ಎಂಬ ಅವರ ಭಾವವಿರುತ್ತದೆ. ತೀವ್ರ ವೇದನೆಯಾಗುತ್ತಿದ್ದರೂ ‘ಸತತ ಭಗವಂತನ ಧ್ಯಾಸ ಮತ್ತು ಶ್ರೀರಾಮನ ಅಖಂಡ ಅನುಸಂಧಾನ, ಇವುಗಳಿಂದ ಅವರು ಆನಂದದಲ್ಲಿದ್ದಾರೆ. ಸಾಧನೆಯಿಂದ ಅವರ ಮುಖದ ಮೇಲೆ ಬಹಳ ತೇಜವಿದೆ.

ಅವರ ಮಗ ಶ್ರೀ. ಸಂಜಯ ಸುರೇಶ ಮುಂಗಳೆ ಇವರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ. ‘ಈಶ್ವರನೊಂದಿಗೆ ಅನುಸಂಧಾನವನ್ನಿಟ್ಟುಕೊಂಡು ಅನಾರೋಗ್ಯ ದಲ್ಲಿಯೂ ಆನಂದದಿಂದ ಹೇಗೆ ಇರಬಹುದು ?, ಎಂಬ ಆದರ್ಶವನ್ನು ಎಲ್ಲರೆದುರು ಇಡುವ ಶ್ರೀಮತಿ ವೈಶಾಲಿ ಸುರೇಶ ಮುಂಗಳೆ ಇವರ ಆಧ್ಯಾತ್ಮಿಕ ಉನ್ನತಿ ಶೀಘ್ರ ಗತಿಯಲ್ಲಿ ಆಗುತ್ತಿದೆ. ೨೦೧೩ ರಲ್ಲಿನ ರಾಮನವಮಿಯಂದು ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡರು. ‘ಶ್ರೀರಾಮನ ಮೇಲಿನ ಅಪಾರ ಶ್ರದ್ಧೆ ಮತ್ತು ಭಾವ, ಸತತ ನಾಮಾನುಸಂಧಾನ ಇತ್ಯಾದಿ ಗುಣಗಳಿಂದಾಗಿ ಇಂದಿನ ಶುಭದಿನದಂದು (೭.೭.೨೦೨೩) ಅವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ ಮತ್ತು ಅವರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

‘ಪೂ. (ಶ್ರೀಮತಿ) ವೈಶಾಲಿ ಮುಂಗಳೆಯವರ ಮುಂದಿನ ಆಧ್ಯಾತ್ಮಿಕ ಪ್ರಗತಿ ಇದೇ ರೀತಿ ಶೀಘ್ರ ಗತಿಯಲ್ಲಿ ಆಗಲಿ, ಎಂದು ಶ್ರೀರಾಮನ ಚರಣಗಳಲ್ಲಿ ಪ್ರಾರ್ಥನೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೭.೭.೨೦೨೩)