ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ !

ಪೂ. ರಮಾನಂದ ಗೌಡ

೩ ಜುಲೈ ೨೦೨೩ ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸ ಲಾಯಿತು. ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಜಿಜ್ಞಾಸುಗಳಿಗೆ ಆನ್‌ಲೈನ್‌ದಲ್ಲಿ ಮಾಡಿದ ಮಾರ್ಗದರ್ಶನದ ಮುಂದಿನ ಭಾಗ ವನ್ನು ಇಲ್ಲಿ ನೀಡುತ್ತಿದ್ದೇವೆ. – (ಭಾಗ ೨)

೪ ಇ. ಭೂಕಬಳಿಕೆಯ ವಕ್ಫ್ ಕಾನೂನು : ಇಂದು ಒಂದೆಡೆ ಸರಕಾರಿಕರಣಗೊಂಡ ದೇವಸ್ಥಾನಗಳ ಜಮೀನು ಕಬಳಿಕೆ ಯಾಗುತ್ತಿದ್ದರೆ, ಇನ್ನೊಂದೆಡೆ ವಕ್ಫ್ ಕಾಯ್ದೆಯಂತಹ ಕಾನೂನುಗಳ ಮೂಲಕ ವಕ್ಫ್ ಮಂಡಳಿ ಒಡೆತನದ ಭೂಮಿ ದಿನೇ ದಿನೇ ಹೆಚ್ಚುತ್ತಿದೆ. ವಕ್ಫ್ ಕಾಯಿದೆಯ ಪ್ರಕಾರ, ವಕ್ಫ್ ಮಂಡಳಿಗೆ ಯಾವುದೇ ವ್ಯಕ್ತಿಯ ಆಸ್ತಿ ವಕ್ಫ್‌ಗೆ ಸೇರಿದ್ದು ಎಂದು ಘೋಷಿಸುವ ಅಧಿಕಾರವಿದೆ. ಇಸ್ಲಾಂ ಉದಯವಾಗಿ ಕೇವಲ ೧೪೦೦ ವರ್ಷಗಳಾಗಿವೆ; ಆದರೆ ಈ ವಕ್ಫ್ ಕಾಯಿದೆಯ ಪ್ರಕಾರ, ತಮಿಳುನಾಡಿನ ೧೫೦೦ ವರ್ಷಗಳ ಹಳೆಯ ಗ್ರಾಮ (ತಿರುಚೆಂತುರೈ) ಮತ್ತು ಅದರ ಪುರಾತನ ದೇವಾಲಯವೂ ವಕ್ಫ್ ಆಸ್ತಿಯಾಗಿದೆ ವಿಶೇಷವೇನೆಂದರೆ, ಅಂತಹ ಸ್ವರೂಪದ ನಿರ್ಧಾರವನ್ನು ದೇಶದ ಉಚ್ಚ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದಿಲ್ಲ, ಆದರೆ ವಕ್ಫ್ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು, ಆದರೆ ಅದು ನೀಡಿದ ನಿರ್ಧಾರವು (ತೀರ್ಪು) ಅಂತಿಮವಾಗಿರುತ್ತದೆ. ಕಳೆದ ೧೦ ವರ್ಷಗಳಲ್ಲಿ ವಕ್ಫ್ ಮಂಡಳಿಯು ಇತರರ ಜಮೀನುಗಳನ್ನು ಶರವೇಗದಿಂದ ಕಸಿದುಕೊಂಡು ‘ವಕ್ಫ್ ಆಸ್ತಿ ಎಂದು ಘೋಷಿಸಿದೆ. ದೇಶದಲ್ಲಿ ಸುಮಾರು ೮ ಲಕ್ಷ ಎಕರೆ ಭೂಮಿ ವಕ್ಫ್ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿದೆ. ಭಾರತೀಯ ರೈಲ್ವೇ ಮತ್ತು ಸೇನೆಯ ನಂತರ, ವಕ್ಫ್ ಮಂಡಳಿಯ ಬಳಿ ದೇಶದಲ್ಲಿ ಅತೀ ಹೆಚ್ಚಿನ ಭೂಮಿಯ ಒಡೆತನವಿದೆ.

೪ ಈ. ಲವ್ ಜಿಹಾದ್ : ಈ ಹಿಂದೆ ಕಾಮಾಂಧ ಮತಾಂಧರು ಹಿಂದೂ ಮಹಿಳೆಯರ ಶೀಲಕ್ಕೆ ಕೈ ಹಾಕುತ್ತಿದ್ದರು. ಅದು ಇಂದು ಲವ್ ಜಿಹಾದ್ ಮೂಲಕ ನಡೆಯುತ್ತಿದೆ. ಹಿಂದೂ ಹುಡುಗಿಯರು ನಕಲಿ ಪ್ರೀತಿಯ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ, ಮತಾಂಧರು ಕೆಲವೊಮ್ಮೆ ಹಿಂದೂ ಹೆಸರುಗಳನ್ನು ಹೇಳಿಕೊಂಡು ಮೋಸ ಮಾಡುತ್ತಾರೆ, ಭೋಗಿಸುತ್ತಾರೆ ಮತ್ತು ನಂತರ ತ್ಯಜಿಸುತ್ತಾರೆ ಅಥವಾ ತುಂಡು ತುಂಡು ಮಾಡಿ ಬಿಸಾಡುತ್ತಾರೆ. ಕೆಲವು ತಿಂಗಳ ಹಿಂದೆ, ಅಫ್ತಾಬ್ ಎಂಬವನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್ನಲ್ಲಿ ವಾಸಿಸುತ್ತಿದ್ದಾಗ ಶ್ರದ್ಧಾ ವಾಲಕರ್ ಎಂಬ ಹಿಂದೂ ಹುಡುಗಿಯನ್ನು ಕೊಂದು ೩೫ ತುಂಡುಗಳಾಗಿ ಕತ್ತರಿಸಿದ್ದ. ಸಾಕ್ಷಿ ದೀಕ್ಷಿತ್, ರೂಪಾಲಿ ಚಂದನಶಿವೆ, ಅನುರಾಧಾ, ರಬಿಕಾ ಇವರ ಪಟ್ಟಿಗೆ ಕೊನೆಯಿಲ್ಲ. ಹೆಣ್ಣಿನ ಚಾರಿತ್ರ್ಯ ಕಾಪಾಡಲು ಧರ್ಮಯುದ್ಧ ನಡೆಸಿದ ದೇಶದಲ್ಲಿ ಇಂದು ಕೋಟ್ಯಂತರ ಮಹಿಳೆಯರು, ಬಾಲಕಿಯರು, ವೃದ್ಧೆಯರನ್ನು ಅಪಮಾನಿಸ ಲಾಗುತ್ತಿದೆ ಎಂಬುದಕ್ಕಿಂತ ಹೆಚ್ಚಿನ ದುರದೃಷ್ಠ ಇನ್ನೇನಿದೆ ?

ಗುರುಪೂರ್ಣಿಮೆಯ ದಿನದಂದು ಈ ವಿಷಯ ಏಕೆ ಎಂದು ನೀವು ಯೋಚಿಸಬಹುದು, ಆದರೆ ಸಹೋದರ ಸಹೋದರಿಯರೇ, ಇಂದು ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ಕೃತಿಯ ಸ್ತರದಲ್ಲಿ ಪ್ರಯತ್ನವನ್ನು ಮಾಡಬೇಕಾಗಿದೆ. ದಿ ಕೇರಳ ಸ್ಟೋರಿ ನಮ್ಮ ಜಿಲ್ಲೆಯ ಕಥೆಯಾಗಬಾರದು ಎಂದು ನಾವು ಬಯಸುವುದಾದರೆ, ಹಿಂದೂ ಹೆಣ್ಣುಮಕ್ಕಳಿಗೆ ಧರ್ಮಶಿಕ್ಷಣವನ್ನು ನೀಡುವುದು, ಅವರಿಂದ ಧರ್ಮಾಚರಣೆ ಮಾಡಿಸುವುದು ಅವಶ್ಯಕವಾಗಿದೆ. ದ್ವಾಪರಯುಗದಲ್ಲಿ ದ್ರೌಪದಿಯ ಮೇಲೆಯೂ ವಸ್ತ್ರಾಪಹರಣದ ಪ್ರಸಂಗ ಬಂದಿತ್ತು; ಆದರೆ ದ್ರೌಪದಿಯು ಭಗವಾನ ಶ್ರೀಕೃಷ್ಣನ ಪರಮಭಕ್ತೆಯಾಗಿದ್ದ ಕಾರಣ ಆತನನ್ನೇ ಆರ್ತಳಾಗಿ ಕರೆದಳು, ಆಗ ಭಗವಾನ ಶ್ರೀಕೃಷ್ಣನು ಅಪರಿಮಿತ ವಸ್ತ್ರವನ್ನು ಒದಗಿಸಿ ದ್ರೌಪದಿಯ ಮಾನ ರಕ್ಷಿಸಿದ್ದನು.

ಹಿಂದೂ ಹಬ್ಬ ಹರಿದಿನಗಳಲ್ಲಿ ಮೆರವಣಿಗೆಗಳ ಮೇಲೆ ಕಲ್ಲು ತೂರಾಟದ ಘಟನೆಗಳು ನಡೆದಿರುವುದನ್ನು ನಾವು ಸ್ಮರಿಸಬಹುದು. ಕೆಲವು ದಿನಗಳ ಹಿಂದೆ, ಕೊಲ್ಹಾಪುರ, ರತ್ನಾಗಿರಿ ಯಂತಹ ನಗರಗಳ ಕೆಲವು ಮತಾಂಧರು ತಮ್ಮ ವಾಟ್ಸಾಪ್‌ನಲ್ಲಿ ಔರಂಗಜೇಬನನ್ನು ವೈಭವೀಕರಿಸುವ ಪೋಸ್ಟ್ ಹಾಕಿದ್ದರು. ಬಹಿರಂಗವಾಗಿ ತೇಜೋವಧೆ ಆಕ್ರಮಣಕಾರರ ದುಸ್ಸಾಹಸಕ್ಕೆ ಕಡಿವಾಣ ಹಾಕಬೇಕಾದರೆ ಮತ್ತು ಭಾರತದ ರಾಷ್ಟ್ರವೀರರನ್ನು, ಹಿಂದೂಗಳ ಆರಾಧ್ಯರಾಗಿರುವಂತಹ ಧರ್ಮಪುರುಷರತ್ತ ವಕ್ರನೋಟ ಬೀರುವಂತಹ ಧೈರ್ಯ ಯಾರಲ್ಲಿಯೂ ಬರಬಾರದು ಎಂದು ಅನಿಸುತ್ತಿದ್ದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು.

೫. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಧರ್ಮವು ಒಂದು ಉದಾತ್ತ ಕಲ್ಪನೆಯಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದ್ದಾರೆ, ಇಡೀ ವಿಶ್ವ ಕಲ್ಯಾಣಕ್ಕಾಗಿ ದೀಪಸ್ತಂಭವಾಗಿರುವ ಹಿಂದೂ ಧರ್ಮದ ತೇಜವನ್ನು ಪೂರ್ಣ ಜಗತ್ತಿನಲ್ಲಿ ಸ್ಥಾಪಿಸುವ ತನಕ ಸುಮ್ಮನೆ ಕುಳಿತುಕೊಳ್ಳಬೇಡಿ ! ಈ ರಾಷ್ಟ್ರವನ್ನು ಜೀವಂತವಾಗಿರಿಸಬೇಕೆಂಬ ಚಡಪಡಿಕೆ ತಮ್ಮಲ್ಲಿ ಇದ್ದಲ್ಲಿ ಈ ರಾಷ್ಟ್ರವು ಹಿಂದೂ ಜೀವನ ಪದ್ಧತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕು !

೫ ಆ. ಧರ್ಮಶಿಕ್ಷಣ ಮತ್ತು ಧರ್ಮಾಚರಣೆ : ಕಳೆದ ಕೆಲವು ದಶಕಗಳಲ್ಲಿ, ಹಿಂದೂಗಳ ಪೂಜಾಸ್ಥಳಗಳು, ನಂಬಿಕೆ ಮತ್ತು ಸಂಪ್ರದಾಯಗಳ ಮೇಲೆ ದಾಳಿ ನಡೆಸಲಾಗಿದೆ. ‘ವಿದೇಶಿ ಯಾಗಿರುವುದೆಲ್ಲವೂ ಉತ್ತಮ, ಭಾರತೀಯವಾಗಿರುವುದೆಲ್ಲವೂ ತ್ಯಾಜ್ಯ ಎಂಬ ಭಾವನೆಯನ್ನು ಮೂಡಿಸುವ ಪ್ರಯತ್ನ ನಡೆಸ ಲಾಯಿತು. ಅದರ ಪರಿಣಾಮವಾಗಿ, ಹುಟ್ಟಿನಿಂದ ಹಿಂದೂ; ಆದರೆ ಆಲೋಚನೆ, ಕ್ರಿಯೆ, ಭಾವನೆಯಿಂದ ಹಿಂದೂ ಅಲ್ಲದ ಪೀಳಿಗೆ ತಯಾರಾಯಿತು. ಈ ಹೇಳಿಕೆಯು ಸುಲಭವಾಗಿ ಜೀರ್ಣವಾಗದಿರಬಹುದು; ಆದರೆ ಇದು ವಾಸ್ತವ. ‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ದೇವತೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ತನ್ನ ಹಿಂದೂ ಸ್ನೇಹಿತೆಯರ ಬುದ್ಧಿಭ್ರಮಣೆ ಮಾಡುವುದನ್ನು ತೋರಿಸಲಾಗಿದೆ. ಉದಾಹರಣೆಗೆ ಸೀತೆಯನ್ನು ಸ್ವತಃ ಬಿಡುಗಡೆಗೊಳಿಸಲು ಸಾಧ್ಯವಿಲ್ಲದೇ ರಾಮನು ವಾನರರ ಸಹಾಯ ಪಡೆದಿದ್ದನು. ಅಂತಹ ರಾಮನು ದೇವರು ಹೇಗಾಗಲು ಸಾಧ್ಯವಿದೆ ? ಶ್ರೀಕೃಷ್ಣ
ದೇವರಾಗಿದ್ದರೆ, ಅವನು ೧೬ ಸಾವಿರ ಮಹಿಳೆಯರನ್ನು ಏಕೆ ಇಟ್ಟುಕೊಂಡಿದ್ದ ? ಹಿಂದೂಗಳಲ್ಲಿ ೩೩ ಕೋಟಿ ದೇವರುಗಳು ಏಕೆ ? ಇಂದಿಗೂ ಹೆಚ್ಚಿನ ಹಿಂದೂಗಳಿಗೆ ಈ ಪ್ರಶ್ನೆಗಳಿಗೆ ಉತ್ತರ ತಿಳಿದಿಲ್ಲ. ಇದಕ್ಕೆಲ್ಲ ಧರ್ಮಶಿಕ್ಷಣದ ಕೊರತೆಯೆ ಕಾರಣವಾಗಿದೆ !

ಮುಸ್ಲಿಮರು ಬಾಲ್ಯದಿಂದಲೂ ಕುರಾನ್ ಓದುತ್ತಾರೆ, ಕ್ರಿಶ್ಚಿಯನ್ನರು ಬೈಬಲ್ ಓದುತ್ತಾರೆ; ಆದರೆ ಹಿಂದೂಗಳು ರಾಮಾಯಣ-ಮಹಾಭಾರತ ಓದುವುದಿಲ್ಲ. ಹಾಗಾಗಿ ಯಾರಾದರೂ ಧರ್ಮದ ಬಗ್ಗೆ, ದೇವರುಗಳ ಬಗ್ಗೆ ಏನಾದರೂ ಪ್ರಶ್ನೆಗಳನ್ನು ಕೇಳಿದರೆ ಅವರಿಗೆ ತಕ್ಷಣವೇ ಹಿಂದೂ ಧರ್ಮದ ಬಗ್ಗೆ ಪ್ರಶ್ನೆಗಳು(ಸಂದೇಹ) ಬರುತ್ತವೆ. ಅವರ ಧಾರ್ಮಿಕ ಶ್ರದ್ಧೆ ಅಲುಗಾಡತೊಡಗುತ್ತದೆ.

ರಾವಣನನ್ನು ಕೊಂದು ಸೀತೆಯನ್ನು ಉದ್ಧರಿಸುವ ಶಕ್ತಿ ಶ್ರೀರಾಮನೊಬ್ಬನಿಂದಲೇ ಸಾಧ್ಯವಿತ್ತು. ಆದರೆ ವಾನರ ಸೇನೆ ಯನ್ನು ಅವತಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಲು ರಾಮನು ವಾನರರ ಸಹಾಯ ಪಡೆದನು ! ವಾನರರಿಂದ ಸೇವೆ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಹಾಯ ಪಡೆದನು ! ಶ್ರೀಕೃಷ್ಣನು ನರಕಾಸುರನ ಸೆರೆಯಿಂದ ಮುಕ್ತನಾಗಿಸಿದ ೧೬ ಸಾವಿರ ರಾಜಕುಮಾರಿಯರನ್ನು ಮದುವೆಯಾದನು, ಆದ್ದರಿಂದ ಈ ರಾಜಕುಮಾರಿಯರು ಸಮಾಜದಿಂದ ತಿರಸ್ಕೃತ ರಾಗಬಾರದು ಅಥವಾ ಅಪಮಾನಿತರಾಗಬಾರದು ಮತ್ತು ಸಮಾಜದಲ್ಲಿ ಅವರಿಗೆ ಗೌರವ ಸಿಗಬೇಕೆಂಬ ಉದ್ದೇಶವಿತ್ತು. ಕೃಷ್ಣನು ಗೋಪಿಕೆಯರೊಂದಿಗೆ ರಾಸಲೀಲೆಯನ್ನು ನಡೆಸಿದಾಗ, ಕೃಷ್ಣನು ಕೇವಲ ೭ ವರ್ಷದವನಾಗಿದ್ದನು. ೧೨ ನೇ ವಯಸ್ಸಿ ನಲ್ಲಿ, ಶ್ರೀಕೃಷ್ಣನು ವೃಂದಾವನವನ್ನು ಬಿಟ್ಟು ಮಥುರಾದಲ್ಲಿ ನೆಲೆಸಿದನು, ಅವನು ತನ್ನ ಜೀವನದಲ್ಲಿ ಮತ್ತೆ ಯಾವತ್ತೂ ಪುನಃ ವೃಂದಾವನಕ್ಕೆ ಹಿಂತಿರುಗಲಿಲ್ಲ. ಪರಮಾತ್ಮನ ಅವತಾರ ವಾದುದರಿಂದ ಶ್ರೀಕೃಷ್ಣನು ೧೬ ಸಾವಿರ ಸ್ತ್ರೀಯರಲ್ಲಿ ಪ್ರತಿಯೊಬ್ಬರ ಜೊತೆಯಲ್ಲಿದ್ದನು, ಪ್ರತಿಯೊಬ್ಬ ಗೋಪಿಯರ ಜೊತೆಗೆ ಒಂದೇ ಸಮಯದಲ್ಲಿ. ಇರುತ್ತಿದ್ದನು. ವಾಸನಾರಹಿತ ಪ್ರೇಮ ಮತ್ತು ಭಕ್ತಿ, ವಿವೇಚನಾರಹಿತ ವಿದ್ಯಮಾನಗಳು ಮತ್ತು ಲೀಲೆಗಳ ನಡುವೆ ವ್ಯತ್ಯಾಸವಿದೆ. ಅದನ್ನು ತಿಳಿಯಲು ಸತ್ಸಂಗ ದಲ್ಲಿದ್ದು ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕು. ಸಾಧನೆಯನ್ನು ಮಾಡಬೇಕು. ಹಿಂದೂಗಳಲ್ಲಿ ೩೩ ಕೋಟಿ ದೇವತೆಗಳಿದ್ದಾರೆ. ಪ್ರತಿಯೊಂದು ದೇವತೆಗೂ ತನ್ನದೇ ಆದ ಗುಣಲಕ್ಷಣಗಳಿವೆ. ಉದಾಹರಣೆಗೆ, ಬುದ್ಧಿವಂತಿಕೆಯ ದೇವರು ಗಣಪತಿ, ವಿದ್ಯೆಯ ದೇವರು ಸರಸ್ವತಿ, ಸಂಪತ್ತಿನ ದೇವರು ಲಕ್ಷ್ಮಿ, ಬಲೋಪಾಸನೆಯ ದೇವರು ಹನುಮಂತ ಹೀಗೆ ಒಂದು ನಿರ್ದಿಷ್ಟ ಕಾಯಕ್ಕೆ ನಿರ್ದಿಷ್ಟ ದೇವತೆಗಳು. ಇದು ಹಿಂದೂ ಧರ್ಮದ ದೌರ್ಬಲ್ಯವಲ್ಲ, ಆದರೆ ಒಂದು ವೈಶಿಷ್ಟ್ಯವಾಗಿದೆ ಸರ್ಕಾರವನ್ನು ನಡೆಸಲು ಬೇರೆ ಬೇರೆ ಮಂತ್ರಿಗಳು ಇರುವಂತೆಯೇ ವಿಶ್ವವನ್ನು ನಡೆಸಲು ಈ ದೇವರುಗಳಿದ್ದಾರೆ. ಇದೆಲ್ಲವನ್ನು ತಿಳಿದುಕೊಳ್ಳಲು, ಹಾಗೆಯೇ ವಿರೋಧಿಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು, ಧರ್ಮದ ಶಿಕ್ಷಣ, ಧರ್ಮದ ಅಧ್ಯಯನ ಮಾಡುವುದು ಅವಶ್ಯಕ.

ಕನಿಷ್ಠ ಇದಕ್ಕಾಗಿ ನಾವು ಏನು ಮಾಡಬಹುದು ? ಇಂದು, ಅಂತರ್ಜಾಲಕ್ಕೆ ಧನ್ಯವಾದಗಳು, ಎಲ್ಲಾ ಧರ್ಮಗ್ರಂಥಗಳು, ಅವುಗಳ ಅನುವಾದಗಳು, ಸಂತರ ಧರ್ಮೋಪದೇಶಗಳು, ಅವರ ಜೀವನ ಕಥೆಗಳು ಸುಲಭವಾಗಿ ಲಭ್ಯವಿವೆ. ಧರ್ಮ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸುವ ಬರಹಗಳನ್ನು ಓದಿ, ಅಧ್ಯಯನ ಮಾಡಿ, ಚಿಂತನ ಮನನ ಮಾಡಿ. ಪ್ರತಿದಿನ ಕನಿಷ್ಠ ೧೫ ನಿಮಿಷಗಳ ಕಾಲ ಅದರ ಕುರಿತು ಚರ್ಚಿಸಿ. ನಾವು ಮಹಾನ್ ಹಿಂದೂ ಧರ್ಮದಲ್ಲಿ ಹುಟ್ಟಿದ್ದರೂ, ಅದರ ಅನುಭೂತಿಯನ್ನು ಪಡೆಯಲು ವಿಫಲರಾದರೆ, ನಾವು ನಮ್ಮಂತಹ ದುರದೃಷ್ಠಶಾಲಿಗಳು ನಾವೇ ಆಗುತ್ತೇವೆ. ಇದು ಸಂಭವಿಸಬಾರದು; ಎಂದಾದರೆ ನಮ್ಮ ಧರ್ಮ ಏನು ಹೇಳುತ್ತದೆ ಎಂದು ತಿಳಿಯಿರಿ.

ಒಬ್ಬ ವ್ಯಕ್ತಿಯು ಹಿಂದೂ ಆಗಿದ್ದಾನೆ ಎಂಬುದು ಏನನ್ನು ಸಾಬೀತುಪಡಿಸುತ್ತದೆ ? ಹುಟ್ಟಿನಿಂದಲೋ ಅಥವಾ ನಡವಳಿಕೆಯಿಂದ ಮಾತ್ರವೇ ? ಖಂಡಿತವಾಗಿ ನಡವಳಿಕೆಯಿಂದ ಹಿಂದೂ ಅನಿಸಿಕೊಳ್ಳುತ್ತಾನೆ. ಹುಟ್ಟಿನಿಂದ ಹಿಂದೂ ಎನ್ನುವುದಕ್ಕಿಂತ ಕರ್ಮ ಹಿಂದೂ ಆಗಿರುವುದು ಮುಖ್ಯ. ಹಿಂದೂ ಧರ್ಮದಲ್ಲಿ ೩೬೫ ದಿನಗಳಲ್ಲಿ ಸಾಮಾನ್ಯ ೧೫೦ ದಿನಗಳಲ್ಲಿ ಹಬ್ಬಗಳು, ಹಬ್ಬಗಳು, ವ್ರತ ಹಾಗೂ ಉತ್ಸವಗಳಿವೆ ಅವುಗಳನ್ನು ಧರ್ಮಶಾಸ್ತ್ರದ ಪ್ರಕಾರ ಆಚರಿಸಿದರೆ, ಕುಟುಂಬದ ಮೇಲೆ ಧರ್ಮಸಂಸ್ಕಾರಗಳು ಮೂಡುತ್ತವೆ. ಕುಟುಂಬದ ಮಕ್ಕಳ ಮನಸ್ಸು ಧರ್ಮಪರಾಯಣವಾಗುವುದು. ಧರ್ಮವು ಆಚರಣಾಶೀಲವಾಗಿದೆ. ನೈತಿಕವಾಗಿದೆ. ಧರ್ಮಾಚರಣೆಯಿಂದ, ಸಾಧನೆ ಮಾಡುವುದರಿಂದ ವಾಸ್ತವದಲ್ಲಿ ಧರ್ಮದ ರಕ್ಷಣೆಯಾಗುತ್ತದೆ. ಆಧ್ಯಾತ್ಮಿಕ ಸಾಧನೆಯಿಂದಲೇ ಆಂತರಿಕ ದಿವ್ಯ ಉರ್ಜೆಯು ಜಾಗೃತಗೊಳ್ಳುತ್ತದೆ. ಮನೋಬಲ ಹೆಚ್ಚುತ್ತದೆ ಆತ್ಮ ಶಕ್ತಿ ಜಾಗೃತವಾಗುತ್ತದೆ. ಈ ದಿವ್ಯಶಕ್ತಿಯ ಆಧಾರದಲ್ಲಿ ಹಿಂದೂ ಧರ್ಮದ ರಕ್ಷಣೆ, ಈ ದಿವ್ಯಭೂಮಿ ಭಾರತದ ರಕ್ಷಣೆ ಸುಲಭವಾಗಿ ಆಗುವುದು.

೫ ಇ. ಆಧ್ಯಾತ್ಮಿಕ ಸಾಧನೆ ಮಾಡಿ ಮಾನವ ಜನ್ಮವನ್ನು ಸಾರ್ಥಕಗೊಳಿಸಿ ! : ದೇವಭೂಮಿ ಭಾರತವನ್ನು ರಕ್ಷಿಸಬೇಕಾ ದರೆ, ನಾವು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕು. ಗುರು ಪೂರ್ಣಿಮೆಯ ಸಂದರ್ಭದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡುವ ಸಂಕಲ್ಪ ಮಾಡೋಣ. ಯಾರು ಸಾಧನೆಯನ್ನು ಮಾಡುತ್ತಿದ್ದಾರೆಯೋ ಅವರು ಅದನ್ನು ಹೆಚ್ಚಿಸಲು ಪ್ರಯತ್ನಿಸಿರಿ. ಸಾಧನೆ ಎಂದರೆ ಭಗವಂತನ ಪ್ರಾಪ್ತಿಗಾಗಿ ಮಾಡುವಂತಹ ದೈನಂದಿನ ಪ್ರಯತ್ನಗಳು. ಕಲಿಯುಗದಲ್ಲಿ ನಾಮಸ್ಮರಣೆಯ ಸಾಧನೆಯನ್ನು ಹೇಳಲಾಗಿದೆ. ಆಧ್ಯಾತ್ಮಿಕ ಸಾಧನೆಯ ಆರಂಭಿಕ ಹಂತದಲ್ಲಿ, ನಾವು ಕುಲದೇವಿಯ ಹೆಸರನ್ನು ಜಪಿಸಬೇಕು. ಕುಲದೇವತೆ ನಮ್ಮ ಕುಲದ ಉದ್ಧಾರಕರಾಗಿರುತ್ತಾರೆ. ಅವರ ನಾಮಸ್ಮರಣೆಯಿಂದ ನಾವು ಪ್ರಗತಿ ಹೊಂದಿದಾಗ ನಮ್ಮ ಜೀವನದಲ್ಲಿ ಗುರು ಬರುತ್ತಾರೆ. ಅದರ ನಂತರ ನಾವು ಗುರುದೇವರು ಏನು ಹೇಳುತ್ತಾರೋ ಅದನ್ನು ಜಪಿಸಬೇಕು. ಕುಲದೇವತೆ ಶ್ರೀ ಭವಾನಿದೇವಿಯಾಗಿದ್ದರೆ, ಶ್ರೀ ಭವಾನಿದೇವ್ಯೈ ನಮಃ. ಶ್ರೀ ಮಹಾಲಕ್ಷ್ಮಿ ಇದ್ದರೆ, ಶ್ರೀ ಮಹಾಲಕ್ಷ್ಮೀದೇವ್ಯೈ ನಮಃ ಎಂದು ಜಪಿಸಿ. ಕುಲದೇವಿ ಗೊತ್ತಿಲ್ಲದಿದ್ದಲ್ಲಿ ಶ್ರೀ ಕುಲದೇವತಾಯೈ ನಮಃ ಎಂದು ಜಪಿಸಿ. ಇದರೊಂದಿಗೆ ಪೂರ್ವಜರ ಸಂಕಷ್ಟವನ್ನು ಹೋಗಲಾಡಿಸಲು ಪ್ರತಿನಿತ್ಯ ಶ್ರೀ ಗುರುದೇವ ದತ್ತ ಎಂಬ ನಾಮಜಪವನ್ನು ಸಹ ಮಾಡಬೇಕು. ನೀವು ಈಗಾಗಲೇ ದೇವತೆ ಅಥವಾ ಸಂತರು ಹೇಳಿದಂತೆ ಜಪಿಸುತ್ತಿದ್ದರೆ ಅಥವಾ ನೀವು ಜಪ ಮಾಡುವುದರಿಂದ ನಿಮಗೆ ಅನುಭೂತಿಗಳು ಬಂದಿದ್ದಲ್ಲಿ, ಅದನ್ನೇ ಮುಂದುವರಿಸಿರಿ ಸಾಧನಾ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೀವು ಇಲ್ಲಿ ಪುಸ್ತಕ ಪ್ರದರ್ಶನದಲ್ಲಿ ಇರಿಸಲಾಗಿರುವ ಪುಸ್ತಕಗಳ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಸನಾತನ ಸಂಸ್ಥೆಯ ಸಾಧಕರನ್ನು ಸಂಪರ್ಕಿಸಬಹುದು.

೬. ಮನವಿ ಇಂದು ವೈಜ್ಞಾನಿಕ ಸ್ತರದಲ್ಲಿಯೂ ಆಷಾಢ ಹುಣ್ಣಿಮೆಯ ಮಹತ್ವವು ದೃಢಪಟ್ಟಿದೆ. ಗುರು ಪೂರ್ಣಿಮೆಯ ಸಂದರ್ಭದಲ್ಲಿ ಧರ್ಮಾಚರಣೆ-ಸಾಧನೆ ಮಾಡೋಣ, ಆರಾಧನಾ ಶಕ್ತಿ ಹೆಚ್ಚಿಸೋಣ. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ದೃಢ ಸಂಕಲ್ಪ ಮಾಡೋಣ ಸಮರ್ಪಣಾ ಭಾವದಿಂದ ಕೆಲಸ ಮಾಡೋಣ. ನಮ್ಮ ಪ್ರತಿ ಯೊಂದು ಕ್ರಿಯೆಗೂ ಧರ್ಮ ಅಂದರೆ ದೇವರ ಅಧಿಷ್ಠಾನ ಇಟ್ಟುಕೊಳ್ಳೋಣ. ರಾತ್ರಿಯ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಹಾಗೆಯೇ, ಕಾಲಮಿತಿಯನ್ನು ಅನುಸರಿಸುವ ಧಾರ್ಮಿಕ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರ ಬರುತ್ತದೆ, ಅದು ಕಪ್ಪು ಕಲ್ಲಿನ ಮೇಲೆ ಎಳೆದ ಅಳಿಸಲಾಗದ ಬಿಳಿ ಗೆರೆಯಾಗಿದೆ. ಅನೇಕ ಸಂತರು ಕೂಡ ಇದರ ಬಗ್ಗೆ ಹೇಳಿದ್ದಾರೆ. ಕಾಲ ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಆದುದರಿಂದ ಈ ಅವಧಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಶ್ರಮಿಸಿದರೆ ಕಾಲಕ್ಕನುಸಾರ ನಮ್ಮ ಸಾಧನೆಯಾಗುತ್ತದೆ. ನಮ್ಮ ಆಂತರಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ಧಾರ್ಮಿಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಶ್ರೀ ಗುರುಗಳು ನಮಗೆ ಭಕ್ತಿ, ಬುದ್ಧಿ ಮತ್ತು ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುವ ಮೂಲಕ ನಾನು ನನ್ನ ವಾಣಿಗೆ ವಿರಾಮ ನೀಡುತ್ತೇನೆ. ನಮಸ್ಕಾರ.

– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.