ಔರಂಗಜೇಬನ ಗೋರಿ ತೆಗೆಯದಿದ್ದರೆ ಬಾಬ್ರಿಯ ಪುನರಾವರ್ತನೆ ಮಾಡುತ್ತೇವೆ!

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದಿಂದ ಎಚ್ಚರಿಕೆ

ಛತ್ರಪತಿ ಸಂಭಾಜಿನಗರ – ಖುಲ್ತಾಬಾದ್‌ನಲ್ಲಿರುವ ಔರಂಗಜೇಬನ ಗೋರಿಯನ್ನು ತೆರವುಗೊಳಿಸದಿದ್ದರೆ ಬಾಬ್ರಿಯನ್ನು ಪುನರಾವರ್ತಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಪುಣೆಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಪ್ರತಿನಿಧಿಗಳು ಮಾತನಾಡಿ, ಔರಂಗಜೇಬನ ಗೋರಿ ಗುಲಾಮಗಿರಿ, ಅಸಹಾಯಕತೆ ಮತ್ತು ದೌರ್ಜನ್ಯದ ನೆನಪನ್ನು ನೀಡುತ್ತದೆ. ಆದ್ದರಿಂದ ಮಹಾರಾಷ್ಟ್ರ ಸರಕಾರವು ಅದನ್ನು ಶೀಘ್ರವಾಗಿ ತೆಗೆದುಹಾಕಬೇಕು. ಮಾರ್ಚ್ 17 ರಂದು, ಗೋರಿಯನ್ನು ತೆಗೆದುಹಾಕಲು ಎಲ್ಲಾ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು. ಅಲ್ಲದೆ, ‘ಔರಂಗಜೇಬನ ಗೋರಿಯನ್ನು ತೆಗೆದುಹಾಕದಿದ್ದರೆ ಬಾಬ್ರಿಯನ್ನು ಪುನರಾವರ್ತಿಸಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿತ್ತು.

ಈ ಎಚ್ಚರಿಕೆಯ ಕಾರಣ, ಗೋರಿಯ ಬಳಿ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ 115 ಶಸ್ತ್ರಸಜ್ಜಿತ ಸೈನಿಕರು, ಗಲಭೆ ನಿಗ್ರಹ ದಳದ 25 ಪೊಲೀಸರು ಮತ್ತು 60 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೋರಿ ಪ್ರದೇಶಕ್ಕೆ ಹೋಗುವಾಗ 2 ಸ್ಥಳಗಳಲ್ಲಿ ತಡೆಗೋಡೆಗಳನ್ನು ಹಾಕಲಾಗಿದ್ದು, ಗೋರಿಯ ಬಳಿ ಹೋಗುವ ಪ್ರವಾಸಿಗರನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಪೊಲೀಸರ ಜೊತೆಗೆ ಪುರಾತತ್ವ ಇಲಾಖೆಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಪುಣೆಯ ಪತಿತ ಪಾವನ ಸಂಘಟನೆಯಿಂದ ಪ್ರತಿಭಟನೆ!

ಔರಂಗಜೇಬನ ಗೋರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪುಣೆಯಲ್ಲಿ ಪತಿತ ಪಾವನ ಸಂಘಟನೆ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಔರಂಗಜೇಬನ ಚಿತ್ರವಿರುವ ಫಲಕವನ್ನು ಸುಡಲಾಯಿತು.

ಹಿಂದೂತ್ವನಿಷ್ಠ ಮಿಲಿಂದ್ ಏಕಬೋಟೆಗೆ ಛತ್ರಪತಿ ಸಂಭಾಜಿನಗರ ಜಿಲ್ಲೆಗೆ ಪ್ರವೇಶ ನಿಷೇಧ

ಸಮಸ್ತ ಹಿಂದೂ ಅಘಾಡಿಯ ಶ್ರೀ. ಮಿಲಿಂದ್ ಏಕಬೋಟೆ ಅವರು ಛತ್ರಪತಿ ಸಂಭಾಜಿನಗರಕ್ಕೆ ಹೋಗಿ ಗೋರಿಯನ್ನು ಕಿತ್ತುಹಾಕುವುದಾಗಿ ಎಚ್ಚರಿಕೆ ನೀಡಿದ್ದರಿಂದ ಅವರಿಗೆ ಮುಂದಿನ ಕೆಲವು ದಿನಗಳ ಕಾಲ ಛತ್ರಪತಿ ಸಂಭಾಜಿನಗರ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಎಚ್ಚರಿಕೆಗಳನ್ನು ಏಕೆ ನೀಡಬೇಕಾಗುತ್ತದೆ? ಸರಕಾರ ಮತ್ತು ಆಡಳಿತವು ತಾವಾಗಿ ಹಿಂದೂ ಜನರ ಭಾವನೆಗಳನ್ನು ಪರಿಗಣಿಸಬೇಕು ಮತ್ತು ದಬ್ಬಾಳಿಕೆಯ ಆಡಳಿತಗಾರನ ವೈಭವೀಕರಣದ ಎಲ್ಲಾ ಕುರುಹುಗಳನ್ನು ಅಳಿಸುವ ರಾಷ್ಟ್ರೀಯ ಕಾರ್ಯವನ್ನು ಪೂರ್ಣಗೊಳಿಸಬೇಕು, ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತು ರಾಷ್ಟ್ರ ಮತ್ತು ಹಿಂದೂ ಧರ್ಮ ಪ್ರೇಮಿ ಸಂಘಟನೆಗಳು ಮತ್ತು ಸಾರ್ವಜನಿಕರು ಬಯಸುತ್ತಾರೆ!