ಗಂಡನು ಮಸೀದಿಯಲ್ಲಿ ತನ್ನ ಹೆಂಡತಿಯ ಬಗ್ಗೆ ದೂರು ನೀಡಿದ ನಂತರ ಮುಸ್ಲಿಮರಿಂದ ಹೆಂಡತಿಗೆ ಥಳಿತ

ದಾವಣಗೆರೆ – ಇಲ್ಲಿ, ಜಮೀಲ್ ಅಹ್ಮದ್ ಅಲಿಯಾಸ್ ಶಮೀರ್ ಮಸೀದಿಗೆ ಹೋಗಿ ತನ್ನ ಹೆಂಡತಿಯ ವಿರುದ್ಧ ದೂರು ನೀಡಿದ ನಂತರ, ಅವನ ಹೆಂಡತಿ ಶಬೀನಾ ಬಾನು (ವಯಸ್ಸು 38)ಳನ್ನು ಮಸೀದಿಯ ಹೊರಗೆ ಕೋಲು, ಪೈಪ್ ಇತ್ಯಾದಿಗಳಿಂದ ಥಳಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಘಟನೆ ಏಪ್ರಿಲ್ 9 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 7 ರಂದು, ಸಂತ್ರಸ್ತೆ ಶಬಿನಾ ಬಾನುಳ ಮನೆಗೆ ಅವಳ ಸಂಬಂಧಿಕರಾದ ನಸ್ರೀನ್ ಮತ್ತು ಫಯಾಜ್ ಬಂದಿದ್ದರು. ಆ ನಂತರ, ಅವಳು ಅವರ ಜೊತೆಗೆ ತಿರುಗಾಡಲು ಹೋಗಿದ್ದಳು. ಇದು ಗಂಡ ಅಹ್ಮದ್‌ಗೆ ಇಷ್ಟವಾಗಲಿಲ್ಲ ಮತ್ತು ಕೋಪಗೊಂಡು ಪತ್ನಿ ನಸ್ರೀನ್ ಮತ್ತು ಫಯಾಜ್ ವಿರುದ್ಧ ಮಸೀದಿಯಲ್ಲಿ ದೂರು ನೀಡಿದನು. ಏಪ್ರಿಲ್ 9 ರಂದು ಮೂವರನ್ನು ಮಸೀದಿಗೆ ಕರೆಸಲಾಯಿತು. ಅವರು ಮಸೀದಿಯ ಹತ್ತಿರ ತಲುಪಿದಾಗ, 6 ಜನರ ಗುಂಪು ಶಬೀನಾಳನ್ನು ಥಳಿಸಿತು. ಆಕೆಯ ಮೇಲೆ ಕಲ್ಲುಗಳನ್ನು ಎಸೆಯಲಾಯಿತು. ಈ ಪ್ರಕರಣದಲ್ಲಿ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳು, ಈ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶದಲ್ಲಿ ಘಟಿಸುತ್ತಿರುವುದು ನಾಚಿಕೆಗೇಡು! ಜಾತ್ಯತೀತರು ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ಮಹಿಳೆಯರ ಬಗ್ಗೆ ಕಾಳಜಿ ವಹಿಸುತ್ತೇವೆಂದು ತೋರಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಏಕೆ ಮೌನವಾಗಿದ್ದಾರೆ?