ಶೇಖ ಹಸೀನಾ ಇವರನ್ನು ಪದಚ್ಯುತಗೊಳಿಸುವುದರಲ್ಲಿ ಅಮೆರಿಕಾದ ಕೈವಾಡ ಇಲ್ಲ !

ಅಮೇರಿಕಾದಿಂದ ಸ್ಪಷ್ಟನೆ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ರಾಷ್ಟ್ರಾಧ್ಯಕ್ಷರ ವೈಟ್ ಹೌಸ್‌ನ ಪ್ರಸಾರ ಮಾಧ್ಯಮ ಸಚಿವ ಕ್ಯಾರಿನ್ ಜೀನ್ ಪಿಯರೆ ಇವರು ಪತ್ರಕರ್ತರ ಸಭೆಯಲ್ಲಿ ಶೇಖ ಹಸೀನಾ ಇವರನ್ನು ಪದಚ್ಯುತ ಗೊಳಿಸುವುದರಲ್ಲಿ ಅಮೇರಿಕಾದ ಸಹಭಾಗವಿಲ್ಲ ಎಂದು ಹೇಳಿದ್ದಾರೆ. ‘ನಾನು ಏನಾದರೂ ಬಾಂಗ್ಲಾದೇಶದಲ್ಲಿನ ಸೇಂಟ್ ಮಾರ್ಟಿನ್ ದ್ವೀಪದಲ್ಲಿನ ಅಧಿಕಾರ ಬಿಟ್ಟಿದ್ದರೆ ಮತ್ತು ಅಮೆರಿಕ್ಕಾಗೆ ಬಂಗಾಳ ಉಪಸಾಗರದಲ್ಲಿ ಅಧಿಕಾರ ಸ್ಥಾಪಿಸಲು ಅನುಮತಿ ನೀಡಿದ್ದರೆ ಆಗ ನಾನು ಅಧಿಕಾರದಲ್ಲಿ ಇರುತ್ತಿದ್ದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ ಹಸೀನಾ ಇವರು ಆರೋಪಿಸಿದ್ದರು. ಈ ಆರೋಪವನ್ನು ಪಿಯರೆ ಇವರು ತಳ್ಳಿ ಹಾಕಿದ್ದಾರೆ. ಅವರು ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆಯಲ್ಲಿ ನಮ್ಮದು ಯಾವುದೇ ರೀತಿ ಸಹಭಾಗವಿಲ್ಲ. ಈ ಘಟನೆಯಲ್ಲಿ ಅಮೆರಿಕಾ ಸರಕಾರದ ಸಹಭಾಗಿರುವುದರ ವಾರ್ತೆ ಸಂಪೂರ್ಣವಾಗಿ ಹುಸಿಯಾಗಿದೆ ಎಂದು ಹೇಳಿದರು.

ಕ್ಯಾರಿನ್ ಜೀನ್ ಪಿಯರೆ ಇವರು ಮಾತು ಮುಂದುವರಿಸಿ, ಬಾಂಗ್ಲಾದೇಶದಲ್ಲಿನ ಜನರ ಭವಿಷ್ಯ ದೃಢಗೊಳಿಸುವುದು ಇದು ಅವರ ವಿಶೇಷ ಅಧಿಕಾರವಾಗಿದೆ. ಅವರ ನಾಯಕರ ಆಯ್ಕೆ ಮಾಡುವುದು ಬಾಂಗ್ಲಾದೇಶದ ಜನರು ಅವರಿಗಾಗಿ ತೆಗೆದುಕೊಂಡಿರುವ ಮಹತ್ವದ ನಿರ್ಣಯವಾಗಿದೆ. ಬಾಂಗ್ಲಾದೇಶದಲ್ಲಿನ ಜನರೆ ಅವರ ಸರಕಾರದ ಭವಿಷ್ಯ ನಿಶ್ಚಯಿಸಬೇಕೆಂದು ನಮ್ಮ ಅಭಿಪ್ರಾಯವಾಗಿದೆ. ಯಾವುದೇ ರೀತಿಯ ಆರೋಪದ ಕುರಿತು ನಾವು ಇದನ್ನೇ ಹೇಳುವೆವು ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಹೇಳಿದರು.

ಶೇಖ ಹಸೀನಾ ಇವರ ಮಗ ಕೂಡ ಅಮೇರಿಕಾ ದಾವೆ ತಳ್ಳಿ ಹಾಕಿದ್ದಾರೆ !

ಇನ್ನೊಂದು ಕಡೆ ಶೇಖ ಹಸೀನಾ ಇವರ ಪುತ್ರ ಸಜೀಬ್ ವಾಜೇದ ಕೂಡ, ‘ನನ್ನ ತಾಯಿ ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ, ನನ್ನ ತಾಯಿ ನನಗೆ, ಅವರು ಢಾಕಾ ಬಿಡುವ ಮೊದಲು ಅಥವಾ ನಂತರ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ’, ಎಂದು ಸ್ಪಷ್ಟ ಪಡಿಸಿದರು.

ಸಂಪಾದಕೀಯ ನಿಲುವು

ಅಮೇರಿಕಾದ ಇತಿಹಾಸ ಮತ್ತು ವರ್ತಮಾನ ನೋಡಿದರೆ ಇದರ ಕುರಿತು ಯಾರು ವಿಶ್ವಾಸ ಇಡುವುದಿಲ್ಲ ? ಅಮೇರಿಕಾ ಎಂದಿಗೂ ಅದರ ಕೈವಾಡ ಇದೆ ಎಂದು ಸ್ವೀಕರಿಸುವುದಿಲ್ಲ !