SP MLA Indrajit Saroj Statement : ‘ದೇವಸ್ಥಾನಗಳಲ್ಲಿ ಶಕ್ತಿ ಇದ್ದಿದ್ದರೆ, ಮುಸ್ಲಿಂ ಲೂಟಿಕೋರರು ಬರುತ್ತಲೇ ಇರಲಿಲ್ಲ!’ – ಸಮಾಜವಾದಿ ಪಕ್ಷದ ಶಾಸಕ ಇಂದ್ರಜಿತ ಸರೋಜ

ಸಮಾಜವಾದಿ ಪಕ್ಷದ ಶಾಸಕ ಇಂದ್ರಜಿತ ಸರೋಜ ಅವರ ಹಾಸ್ಯಾಸ್ಪದ ಹೇಳಿಕೆ

ಕೌಶಾಂಬಿ (ಉತ್ತರ ಪ್ರದೇಶ) – ಭಾರತದ ದೇವಸ್ಥಾನಗಳಲ್ಲಿ ಶಕ್ತಿ ಇದ್ದಿದ್ದರೆ, ಮಹಮ್ಮದ್ ಬಿನ್ ಕಾಸಿಮ್, ಮಹಮೂದ್ ಗಝನಿ, ಮಹಮ್ಮದ್ ಘೋರಿಯಂತಹ ಲೂಟಿಕಾರರು ದೇಶಕ್ಕೆ ಬರುತ್ತಿರಲಿಲ್ಲ. ಎಲ್ಲಿಯಾದರೂ ಶಕ್ತಿ ಇದ್ದರೆ, ಅದು ಅಧಿಕಾರದ ದೇವಸ್ಥಾನದಲ್ಲಿದೆ. ಅದಕ್ಕಾಗಿಯೇ ‘ಬಾಬಾ’ ದೇವಸ್ಥಾನವನ್ನು ಬಿಟ್ಟು ಅಧಿಕಾರದ ದೇವಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಅವರು ಹೆಲಿಕಾಪ್ಟರನಲ್ಲಿ ತಿರುಗಾಡುವ ಕೆಲಸ ಮಾಡುತ್ತಾರೆ, ಎಂದು ಸಮಾಜವಾದಿ ಪಕ್ಷದ ಶಾಸಕ ಇಂದ್ರಜಿತ ಸರೋಜ ಅವರು ಇಲ್ಲಿನ ಪಕ್ಷದ ಕಚೇರಿಯಲ್ಲಿ ಡಾ. ಭೀಮರಾವ ಅಂಬೇಡಕರ ಅವರ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ‘ಶ್ರೀರಾಮನ ನಾಮ ಜಪಿಸುವುದರಿಂದ ಏನೂ ಆಗುವುದಿಲ್ಲ, ಬದಲಿಗೆ ‘ಜೈ ಭೀಮ್’ ಎಂದು ಘೋಷಣೆ ಕೂಗಿದರೆ ನೀವು ಮುಂದೆ ಹೋಗುತ್ತೀರಿ. ಈ ಘೋಷಣೆಯಿಂದ ನಾನು 5 ಬಾರಿ ಶಾಸಕ ಮತ್ತು ಒಂದು ಬಾರಿ ಮಂತ್ರಿಯಾಗಿದ್ದೇನೆ,’ ಎಂದೂ ಸರೋಜ ಈ ಸಂದರ್ಭದಲ್ಲಿ ಹೇಳಿದರು.

1. ಶಾಸಕ ಇಂದ್ರಜಿತ ಸರೋಜ ಅವರು ಸಂತ ತುಳಸಿದಾಸರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರು, ‘ಯಾವುದೇ ಕೆಳಜಾತಿಯ ವ್ಯಕ್ತಿ ಕಲಿತರೆ, ಅದು ಹಾವಿಗೆ ಹಾಲು ಕುಡಿಸಿದಂತೆ’, ಎಂದು ತುಳಸಿದಾಸರು ಶ್ರೀರಾಮಚರಿತಮಾನಸದಲ್ಲಿ ಬರೆದಿದ್ದಾರೆ,’ ಎಂದರು. (ಇತರ ಪಂಥಗಳ ಪುಸ್ತಕಗಳಲ್ಲಿ ಇತರ ಧರ್ಮೀಯರನ್ನು ಕೊಲ್ಲಿರಿ, ಅವರನ್ನು ಮತಾಂತರಿಸಿ, ಅವರ ಮಹಿಳೆಯರನ್ನು ವಶಪಡಿಸಿಕೊಳ್ಳಿ, ಅವರ ಪ್ರಾರ್ಥನಾ ಸ್ಥಳಗಳನ್ನು ಕೆಡವಿ ಮುಂತಾದ ವಿಷಯಗಳನ್ನು ಬರೆಯಲಾಗಿದೆ ಮತ್ತು ಅವರು ಕಳೆದ ಅನೇಕ ಶತಮಾನಗಳಿಂದ ಮತ್ತು ಇಂದಿಗೂ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ, ಅದರ ಬಗ್ಗೆ ಸರೋಜ ಏಕೆ ಮಾತನಾಡುವುದಿಲ್ಲ? – ಸಂಪಾದಕರು)

2. ಶಾಸಕ ಸರೋಜ ಅವರು ಮಾತು ಮುಂದುವರೆಸುತ್ತಾ, ತುಳಸಿದಾಸರು ನಮ್ಮ ಬಗ್ಗೆ (ದಲಿತರ ಬಗ್ಗೆ) ಬಹಳಷ್ಟು ಬರೆದಿದ್ದಾರೆ; ಆದರೆ ಅಕಬರನ ಸಮಕಾಲೀನರಾಗಿದ್ದರೂ ಮುಸಲ್ಮಾನರ ವಿರುದ್ಧ ಏನನ್ನೂ ಬರೆಯಲಿಲ್ಲ, ಬಹುಶಃ ಅವರಿಗೆ ಧೈರ್ಯವಿರಲಿಲ್ಲ, ಎಂದೂ ಅವರು ವಾದಿಸಿದರು.

ಸಂಪಾದಕೀಯ ನಿಲುವು

  • ನಾಲಿಗೆಗೆ ಎಲುಬು ಇಲ್ಲ ಅಂತ ಏನೇನೋ ಮಾತನಾಡುವ ಸಮಾಜವಾದಿ ಪಕ್ಷದ ಶಾಸಕ! ದೇವಸ್ಥಾನಗಳ ಶಕ್ತಿ ಭಕ್ತನಿಗೆ ಸಹಾಯ ಮಾಡುತ್ತದೆ ಮತ್ತು ಸಮಾಜದಲ್ಲಿ ಸತ್ತ್ವಗುಣವನ್ನು ನಿರ್ಮಾಣ ಮಾಡುತ್ತದೆ. ಅವು ಹಿಂದೂಗಳ ಪ್ರೇರಣೆಯ ಮೂಲವಾಗಿವೆ. ಇದು ತಿಳಿದಿಲ್ಲದ ಕಾರಣ ಮತ್ತು ಮನಸ್ಸಿನಲ್ಲಿ ಹಿಂದೂದ್ವೇಷ ತುಂಬಿಕೊಂಡಿರುವ ಕಾರಣ ಸರೋಜ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
  • ಇಸ್ಲಾಮಿಕ ದೇಶಗಳಲ್ಲಿ ಅನೇಕ ದಶಕಗಳಿಂದ ಜಿಹಾದಿ ಭಯೋತ್ಪಾದಕರು ಮಸೀದಿಗಳಲ್ಲಿಯೇ ನಮಾಜ  ಸಮಯದಲ್ಲಿ ದಾಳಿ ಮಾಡಿ ನೂರಾರು ಜನರನ್ನು ಕೊಲ್ಲುತ್ತಿದ್ದಾರೆ, ಅದರ ಬಗ್ಗೆ ಸರೋಜ ಏಕೆ ಮಾತನಾಡುವುದಿಲ್ಲ?