Uniform Civil Code Implementation : ದೇಶಾದ್ಯಂತ ಸಮಾನ ನಾಗರಿಕ ಕಾನೂನು ಜಾರಿಗೆ ತರುವ ಸಿದ್ಧತೆಯಲ್ಲಿ ಪ್ರಧಾನಿ ಮೋದಿ !

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ

ನವದೆಹಲಿ – ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ಸುಧಾರಣೆ ಮಸೂದೆ ಅಂಗೀಕಾರವಾದ ನಂತರ ಈಗ ಕೇಂದ್ರ ಸರಕಾರ ಸಮಾನ ನಾಗರಿಕ ಕಾನೂನನ್ನು ತರಲು ಪ್ರಯತ್ನಿಸುತ್ತಿದೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಹರಿಯಾಣ ಭಾಷಣದಿಂದ ಗಮನಕ್ಕೆಬರುತ್ತದೆ. ಪ್ರಧಾನಿ ಮೋದಿ ಮಾತನಾಡಿ, ಕಾಂಗ್ರೆಸ್ ಅಧಿಕಾರದ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ಸಂವಿಧಾನವನ್ನು ತುಳಿಯಲಾಯಿತು. ಸಂವಿಧಾನದ ಆತ್ಮವೆಂದರೆ ಎಲ್ಲರಿಗೂ ಸಮಾನ ನಾಗರಿಕ ಕಾನೂನು ಇರಬೇಕು, ಅದನ್ನು ನಾನು ಜಾತ್ಯತೀತ ನಾಗರಿಕ ಕಾನೂನು ಎನ್ನುತ್ತೇನೆ. ಕಾಂಗ್ರೆಸ್ ಅದನ್ನು ಎಂದಿಗೂ ಜಾರಿಗೆ ತರಲಿಲ್ಲ. ಉತ್ತರಾಖಂಡದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾತ್ಯತೀತ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಯಿತು. ಸಂವಿಧಾನವು ಯಾರ ಜೇಬಿನಲ್ಲಿದೆಯೋ ಅದೇ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ.

ನ್ಯಾಯಮೂರ್ತಿ (ನಿವೃತ್ತ) ಋತುರಾಜ ಅವಸ್ತಿ ಅವರ ಅಧ್ಯಕ್ಷತೆಯಲ್ಲಿನ 22ನೇ ಕಾನೂನು ಆಯೋಗವು ಸಮಾನ ನಾಗರಿಕ ಕಾನೂನಿನ ಕರಡನ್ನು ಸಿದ್ಧಪಡಿಸಿ ಜನರ ಅಭಿಪ್ರಾಯಕ್ಕೆ ಪ್ರಕಟಿಸಿತ್ತು. ಆಯೋಗಕ್ಕೆ ಸುಮಾರು 1 ಕೋಟಿ ಜನರ ಅಭಿಪ್ರಾಯಗಳು ಬಂದಿದ್ದವು. ಈ ಕಾನೂನು ಆಯೋಗವು ಸುಮಾರು 30 ಸಂಸ್ಥೆಗಳೊಂದಿಗೆ ಚರ್ಚಿಸಿತ್ತು; ಆದರೆ ಆಯೋಗದ ಅವಧಿ ಮುಗಿದಿದ್ದರಿಂದ ಅಂತಿಮ ಕರಡು ಸಿದ್ಧಪಡಿಸುವ ಕಾರ್ಯ ಸ್ಥಗಿತಗೊಂಡಿತು. ಆದಾಗ್ಯೂ, ಈಗ ಈ ಕಾನೂನು ಮುಂದುವರಿಯಲು ಕಾನೂನು ಆಯೋಗವನ್ನು ಮತ್ತೆ ಸಕ್ರಿಯಗೊಳಿಸಲಾಗುತ್ತಿದೆ. 23ನೇ ಕಾನೂನು ಆಯೋಗದ ಅಧಿಸೂಚನೆಯನ್ನು ಸೆಪ್ಟೆಂಬರ್ 2, 2024 ರಂದು ಪ್ರಕಟಿಸಲಾಗಿದೆ. ಈಗ ಸುಮಾರು 7 ತಿಂಗಳ ನಂತರ ಅದರ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೇ 2023 ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತರಾದ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಅವರೊಂದಿಗೆ ಖ್ಯಾತ ವಕೀಲ ಹಿತೇಶ ಜೈನ ಮತ್ತು ಪ್ರಾಧ್ಯಾಪಕ ಡಿ.ಪಿ. ವರ್ಮಾ ಪೂರ್ಣಾವಧಿ ಸದಸ್ಯರಾಗಿರುತ್ತಾರೆ. ಅವರ ನೇಮಕಾತಿಯ ಅಧಿಸೂಚನೆಯನ್ನು ಈ ವಾರ ಪ್ರಕಟಿಸಲಾಗುವುದು. ಈ ಹಿಂದೆ ಭಾಜಪ ಆಡಳಿತದ ಉತ್ತರಾಖಂಡ ಸರಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸಿದೆ. ಸ್ವಾತಂತ್ರ್ಯದ ನಂತರ ಈ ಕಾನೂನು ಮಾಡಿದ ಮೊದಲ ರಾಜ್ಯ ಇದಾಗಿದೆ. ಗೋವಾದಲ್ಲಿಯೂ ಈ ಕಾನೂನು ಇದೆ; ಆದರೆ ಅದು ಪೋರ್ಚುಗೀಸರ ಕಾಲದಿಂದಲೂ ಇದೆ ಎಂದು ಹೇಳಿದರು.