Ajmera Dargah Issue : ಅಜ್ಮೇರ ದರ್ಗಾ ಒಂದು ಶಿವ ದೇವಸ್ಥಾನವಾಗಿದೆ; ನಾವು ಅದನ್ನು ಮರಳಿ ಪಡೆಯುತ್ತೇವೆ ! – ಅಖಿಲ ಭಾರತ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ

(ದರ್ಗಾ ಎಂದರೆ ಮುಸಲ್ಮಾನರ ತಥಾಕಥಿತ ಸಿದ್ಧಪುರುಷರಸಮಾಧಿ ಸ್ಥಾನ)

ಅಜ್ಮೇರ (ರಾಜಸ್ಥಾನ) – ಅಜ್ಮೇರ ದರ್ಗಾ ವಾಸ್ತವವಾಗಿ ಶಿವನ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ಅಪವಿತ್ರಗೊಳಿಸಿದ ಅಪರಾಧವನ್ನು ಉಗ್ರರು ಮಾಡಿದ್ದಾರೆ. ಈಗ ಈ ಶಿವನ ದೇವಸ್ಥಾನವನ್ನು ಪುನಃ ಅದರ ಮೂಲ ಸ್ವರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನ್ಯಾಯಾಲಯದ ನೆರವು ಪಡೆಯುತ್ತೇವೆ ಎಂದು ಅಖಿಲ ಭಾರತೀಯ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಹೇಳಿದ್ದಾರೆ. ವೈಶಾಲಿನಗರದ ತಪಸ್ವಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ವಿಷ್ಣು ಗುಪ್ತಾ ಮಾತು ಮುಂದುವರೆಸಿ, ದರ್ಗಾ ವಿಷಯವು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ `ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ ಅಡಿಯಲ್ಲಿ ಬರುವುದಿಲ್ಲ; ಏಕೆಂದರೆ ಈ ಕಾಯಿದೆಯು ದೇವಾಲಯಗಳು, ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳನ್ನು ಮಾತ್ರ ಒಳಗೊಂಡಿದೆ, ಅವು ಪ್ರಾರ್ಥನಾ ಸ್ಥಳಗಳಾಗಿವೆ ಮತ್ತು ದರ್ಗಾ ಇವುಗಳಲ್ಲಿ ಯಾವುದೇ ವರ್ಗಗಳ ಅಡಿಯಲ್ಲಿ ಬರುವುದಿಲ್ಲ. ದರ್ಗಾ ಪೂಜಾ ಸ್ಥಳವಲ್ಲ. ಹಾಗಾಗಿ ಇದು ಉಪಾಸನಾ ಕಾಯ್ದೆಯಡಿ ಬರುವುದಿಲ್ಲ. ಅದರ ಸಮೀಕ್ಷೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು’, ಎಂದು ವಿಷ್ಣು ಗುಪ್ತಾ ತಿಳಿಸಿದರು.

1. ”ನಾನು ಸನಾತನಿಯಾಗಿರುವುದರಿಂದ ನನಗೆ ಅಜ್ಮೇರ ದರ್ಗಾ ವಿರುದ್ಧ ದಾವೆ ಹೂಡುವ ಸಾಂವಿಧಾನಿಕ ಹಕ್ಕಿದೆ ಮತ್ತು ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ವಿಷ್ಣು ಗುಪ್ತಾ ಹೇಳಿದ್ದಾರೆ.

2. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಶ್ವ ಹಿಂದೂ ಪೀಠದ ಹರಿದ್ವಾರದ ಅಧ್ಯಕ್ಷ ಮದನ್ ಆಚಾರ್ಯ ಮಾತನಾಡಿ, 11ನೇ ಶತಮಾನಕ್ಕಿಂತ ಮೊದಲು ಭಾರತದಲ್ಲಿ ಒಂದೂ ಮಸೀದಿ ಅಥವಾ ದರ್ಗಾ ಇರಲಿಲ್ಲ, ಮೊಘಲ್ ದೊರೆಗಳು ಇಲ್ಲಿಗೆ ಬಂದು ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದರು’, ಎಂದು ಹೇಳಿದರು.

3. ಸನಾತನ ಧರ್ಮ ರಕ್ಷಣಾ ಸಂಘದ ಅಧ್ಯಕ್ಷ ಅಜಯಮೇರು ರಾಜಸ್ಥಾನದ ಮಾಜಿ ನ್ಯಾಯಾಧೀಶ ಅಜಯ ಶರ್ಮಾ, ಸನಾತನ ಸಂಘದ ಸಂಘಟಕ ತರುಣ ವರ್ಮಾ, ಸನಾತನ ಧರ್ಮ ರಕ್ಷಾ ಸಂಘದ ಮಾಧ್ಯಮ ಸಲಹೆಗಾರ ವಿಜಯ ಕುಮಾರ್ ಶರ್ಮಾ ಇವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಂಪಾದಕೀಯ ನಿಲುವು

ಭಾರತದಲ್ಲಿರುವ ವಿವಾದಿತ ಮಸೀದಿ ಹಾಗೂ ದರ್ಗಾಗಳ ಸಮೀಕ್ಷೆ ನಡೆಸಿ ಹಿಂದೆ ಮಂದಿರಗಳಾಗಿದ್ದರೆ ಅದನ್ನು ಹಿಂದೂಗಳ ಸುಪರ್ದಿಗೆ ನೀಡಲು ಕೇಂದ್ರ ಸರಕಾರ ಈಗ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !