ರಾಂಚಿ (ಜಾರ್ಖಂಡ) – ಮೊದಲು ನಾವು ಶರಿಯತ ಅನ್ನು ಪಾಲಿಸೋಣ, ನಂತರ ಸಂವಿಧಾನವನ್ನು. ಇಸ್ಲಾಂನಲ್ಲಿ ಶರಿಯತ್ ಮುಖ್ಯವಾದುದು. ನಾವು ಕುರಾನ್ ಅನ್ನು ನಮ್ಮ ಹೃದಯದಲ್ಲಿ ಮತ್ತು ಸಂವಿಧಾನವನ್ನು ಕೈಯಲ್ಲಿ ಇಟ್ಟುಕೊಳ್ಳುತ್ತೇವೆ, ಎಂದು ಕಾಂಗ್ರೆಸ ಶಾಸಕ ಮತ್ತು ಜಾರ್ಖಂಡನ ಕ್ರೀಡೆ, ಯುವ ವ್ಯವಹಾರ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಹಫೀಜುಲ ಹಸನ್ ಅನ್ಸಾರಿ ಹೇಳಿದ್ದಾರೆ. ಅವರು ಏಪ್ರಿಲ್ 14 ರಂದು ಡಾ. ಭೀಮರಾವ ಅಂಬೇಡಕರ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜಾರ್ಖಂಡ್ ರಾಜ್ಯ ಅನ್ಸಾರಿ ಅವರ ಹೇಳಿಕೆಗೆ ಭಾಜಪ ಪ್ರತಿಕ್ರಿಯಿಸಿ, ಯಾರ ಹೃದಯದಲ್ಲಿ ಶರಿಯತ ಇದೆಯೋ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಾಗಿಲು ತೆರೆದಿದೆ. ಭಾರತ ಕೇವಲ ಡಾ. ಭೀಮರಾವ ಅಂಬೇಡಕರ ಅವರ ಸಂವಿಧಾನದ ಮೇಲೆ ನಡೆಯುತ್ತದೆ ಮತ್ತು ಅದೇ ಸರ್ವೋಚ್ಚವಾಗಿರುತ್ತದೆ ಎಂದು ಹೇಳಿದೆ.
मंत्री हफ़ीजुल हसन के लिए संविधान नहीं, शरीयत मायने रखता है, क्योंकि ये अपने 'लक्ष्य' के प्रति स्पष्ट हैं और सिर्फ अपने कौम के प्रति वफादार…
चुनाव के समय इन्होंने गरीब, दलित, आदिवासियों के सामने हाथ जोड़कर वोट मांगा और अब अपना इस्लामिक एजेंडा चलाने की कोशिश कर रहे हैं।… pic.twitter.com/FxWvYb3nvf
— Babulal Marandi (@yourBabulal) April 14, 2025
ಸಂಪಾದಕೀಯ ನಿಲುವು
|