ಇಸ್ರೈಲ್‌ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಅದನ್ನು ತಡೆಯಲು ಅಸಾಧ್ಯ ! – ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ

ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ ಇವರಿಂದ ಮಾಹಿತಿ

ನವ ದೆಹಲಿ – ಇಸ್ರೈಲ್‌ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಭಾರತವು ಎಲ್ಲಾ ಕ್ಷಿಪಣಿಗಳನ್ನು ತಡೆಯಲು ಸಾಧ್ಯವಿಲ್ಲ; ಕಾರಣ ನಮ್ಮ ಪ್ರದೇಶ ಇಸ್ರೈಲ್ ಗಿಂತಲೂ ದೊಡ್ಡದಾಗಿದೆ, ಎಂದು ಭಾರತೀಯ ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ ಇವರು ಮಾಹಿತಿ ನೀಡಿದರು. ‘ರಷ್ಯಾದಿಂದ ಖರೀದಿ ಮಾಡಲಾಗುತ್ತಿರುವ ‘ಎಸ್ ೪೦೦ ಹವಾಯಿ ಸಂರಕ್ಷಣಾ ಪ್ರಣಾಳಿಕೆ’ಯಲ್ಲಿನ ೨ ಪ್ರಣಾಳಿಕೆ ರಷ್ಯಾ ಶೀಘ್ರದಲ್ಲೇ ನೀಡಲಿದೆ, ಎಂದು ನಂಬಿಕೆ ಇದೆ, ಹೀಗೂ ಕೂಡ ಅವರು ಹೇಳಿದರು. ೯೨ ನೇ ವಾಯುಪಡೆ ದಿನದ ವರ್ಧ್ಯಂತ್ಯುತ್ಸವ ದಿನದ ಪ್ರಯುಕ್ತ ಆಯೋಜಿಸಿರುವ ಪತ್ರಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಭಾರತವು ರಷ್ಯಾದಿಂದ ಈ ವ್ಯವಸ್ಥೆಯನ್ನು ಖರಿದಿ ಮಾಡಿದೆ. ಈ ಮೂಲಕ ಭಾರತದ ಮೇಲೆ ಯಾರಾದರೂ ಕ್ಷಿಪಣಿ ಹಾಕಿದರೆ ಅದನ್ನು ಗಾಳಿಯಲ್ಲೇ ನಾಶ ಮಾಡಬಹುದು.

ಚೀನಾ ಜೊತೆಗೆ ಬಿಗುವಿನ ವಾತಾವರಣ ಮುಂದುವರಿಕೆ !

ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ ಇವರು, ಪೂರ್ವ ಲಡಾಕ್ ದಲ್ಲಿನ ಚೀನಾ ಜೊತೆಗಿನ ಪ್ರತ್ಯಕ್ಷ ನಿಯಂತ್ರಣಾರೇಖೆಯ ಮೇಲೆ ಯಾವುದೇ ಬದಲಾವಣೆ ಆಗಿಲ್ಲ; ಆದರೆ ಉಭಯ ದೇಶದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ. ಚೀನಾ ಅದರ ಗಡಿಯ ಮೇಲೆ ಮೂಲಭೂತ ಸೌಲಭ್ಯಗಳನ್ನು ವೇಗವಾಗಿ ಹೆಚ್ಚುಸುತ್ತಿದೆ. ಶತ್ರುಗಳ ಸಿದ್ಧತೆಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ನಮ್ಮ ಎದುರು ಸವಾಲುಗಳಿವೆ ಮತ್ತು ನಾವು ನಮ್ಮ ಮೂಲಭೂತ ಸೌಲಭ್ಯಗಳನ್ನು ಇತರ ಮಾರ್ಗದಿಂದ ಸುಧಾರಣೆ ಮಾಡುತ್ತಿದ್ದೇವೆ. ಪೂರ್ವ ಲಡಾಕ್ ದಲ್ಲಿ ಹೆಚ್ಚಿನ ಆಧುನಿಕ ಲ್ಯಾಂಡಿಂಗ್ ಗ್ರೌಂಡ್ ಮತ್ತು ಹೊಸ ವಿಮಾನ ನಿಲ್ದಾಣ ಕಟ್ಟಲಾಗುತ್ತಿದೆ.

ನಾವು ಎಲ್ಲಿ ಮತ್ತು ಯಾರನ್ನು ಹೊಡೆಯಬಹುದು, ಇದನ್ನು ನಾನು ಹೇಳಲಾರೆನು !

ವಾಯುಪಡೆಯ ಪ್ರಮುಖ ಅಮರಪ್ರೀತ ಸಿಂಹ ಇವರಿಗೆ, ಇಸ್ರೈಲ್ ಲೆಬನಾನ್ ನಲ್ಲಿ ಹಿಜಬುಲ್ಲಾದ ಮುಖ್ಯಸ್ಥನನ್ನು ಮುಗಿಸಬಹುದಾದರೆ ಭಾರತ ಹೀಗೆ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ವಿರುದ್ಧ ಏಕೆ ಮಾಡುವುದಿಲ್ಲ ? ಎಂದು ಕೇಳಲಾಗಿತ್ತು. ಈ ಬಗ್ಗೆ ಅವರು, ‘ನಾವು ಇದನ್ನು ಬಾಲಕೋಟದಲ್ಲಿ ಮಾಡಿದ್ದೆವು. ನಾವು ಎಲ್ಲಿ ಮತ್ತು ಯಾರನ್ನು ಹೊಡೆಯಬಹುದು, ಇದನ್ನು ನಾನು ಹೇಳುವುದಿಲ್ಲ.’ ಎಂದು ಹೇಳಿದರು.

ವಾಯುಪಡೆಗೆ ಯುದ್ಧವಿಮಾನದ ಆವಶ್ಯಕತೆ !

ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ ಇವರು, ಯುದ್ಧ ವಿಮಾನದ ಶಕ್ತಿ ಉಳಿಸಿಕೊಳ್ಳುವುದು ಇದು ಭಾರತೀಯ ವಾಯುಪಡೆಯ ಮುಂದೆ ಇರುವ ದೊಡ್ಡ ಸವಾಲಾಗಿದೆ. ಭಾರತೀಯ ವಾಯುಪಡೆಗೆ ಈಗ ಯುದ್ಧ ವಿಮಾನದ ಕೊರತೆ ಕಾಡುತ್ತಿದೆ. ಭಾರತೀಯ ವಾಯುಪಡೆಯ ಬಳಿ ಈಗ ೩೧ ಸ್ಕ್ವಾಡರ್ಸ್ (ವಿಮಾನಗಳ ಗುಂಪು, ಒಂದು ಗುಂಪಿನಲ್ಲಿ ೧೨ ರಿಂದ ೧೪ ವಿಮಾನಗಳು ಇರುತ್ತವೆ.) ಇವೆ ಮತ್ತು ಮುಂದಿನ ೧೫ ವರ್ಷಗಳಲ್ಲಿ ಇದರಲ್ಲಿನ ಬಹಳಷ್ಟು ಸ್ಕ್ವಾಡರ್ಸ್ ಹಂತಹಂತವಾಗಿ ತೆಗೆದು ಹಾಕಲಾಗುವುದು. ಭಾರತಕ್ಕೆ ೪೨ ಸ್ಕ್ವಾಡರ್ಸ್ ನ ಅವಶ್ಯಕತೆ ಇದೆ. ‘ಮಿಗ ೨೧ ಬಾಯಸನ್’ ಮತ್ತು ‘ಮಿಗ ೨೯’ ಸ್ಕ್ವಾಡರ್ಸ್ ಅನುಕ್ರಮವಾಗಿ ೨೦೨೫ ಮತ್ತು ೨೦೩೫ ರವರೆಗೆ ಹಂತ ಹಂತವಾಗಿ ಹೊರಹಾಕಲಾಗುವುದು. ೨೦೧೯ ರಲ್ಲಿ ಪಾಕಿಸ್ತಾನದ ವಿರುದ್ಧ ಬಾಲಕೋಟೆಯಲ್ಲಿ ದಾಳಿ ಮಾಡಿರುವ ಫ್ರೆಂಚ್ ಯುದ್ಧ ವಿಮಾನಗಳು ‘ಮಿರಾಜ್ ೨೦೦೦’ ಇದನ್ನು ೨೦೩೫ ವರೆಗೆ ನಿವೃತ್ತವಾಗುವುದು. ನಾವು ನಮ್ಮ ಅವಶ್ಯಕತೆ ಬಹಳ ಸ್ಪಷ್ಟಪಡಿಸಿದ್ದೇವೆ ಮತ್ತು ನಾವು ಸರಕಾರದಿಂದ ಪ್ರತಿಕ್ರಿಯೆಯ ಕುರಿತು ದಾರಿ ಕಾಯುತ್ತಿದ್ದೇವೆ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಈ ವಿಮಾನಗಳು ಭಾರತದಲ್ಲಿಯೇ ತಯಾರಾಗಬೇಕು ಎಂದು ಹೇಳಿದರು.