ಒಂದು ತಿಂಗಳ ಹಿಂದಷ್ಟೇ ದೈನಿಕ ಸನಾತನ ಪ್ರಭಾತದಲ್ಲಿ ಪ್ರಸಿದ್ಧಗೊಳಿಸಲಾಗಿತ್ತು ಈ ಸುದ್ದಿ !
(ಎ.ಡಿ.ಆರ್. ಎಂದರೆ ಅಸೋಸಿಯೇಷನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್ ಹೆಸರಿನ ರಾಜಕೀಯೇತರ ಸಂಸ್ಥೆ)
ಮುಂಬಯಿ, ಆಗಸ್ಟ್ ೨ (ವಾರ್ತೆ.) – ಚುನಾವಣೆಯ ಮತ್ತು ಅದರ ಅಂಕಿ ಅಂಶದ ಯಾದಿ ಹೊಂದಿರುವ ಕೇಂದ್ರ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಬಹಳಷ್ಟು ವ್ಯತ್ಯಾಸವಿರುವುದು ದೈನಿಕ ಸನಾತನ ಪ್ರಭಾತ ೨೩ ಜೂನ್ ೨೦೨೪ ರಂದು ಮೊಟ್ಟಮೊದಲು ಬಹಿರಂಗಪಡಿಸಿತ್ತು. ವೆಬ್ ಸೈಟ್ ನ ಒಂದು ಪೇಜ್ ನಲ್ಲಿ ಒಂದು ರೀತಿಯ ಅಂಕಿ ಅಂಶ ಹಾಗೂ ಇನ್ನೊಂದು ಕಡೆ ರಾಜ್ಯವಾರು ಅಂಕಿ ಅಂಶ ನೋಡಿದರೆ ಅದರಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ರಾಜಕೀಯೆತರ ಸಂಸ್ಥೆಯ ಸಂಸ್ಥಾಪಕ ಜಗದೀಶ್ ಛೋಕರ್ ಅವರು ಹಾಗೂ ಕೆಲ ಹೆಸರಾಂತ ಪತ್ರಕರ್ತರು ಈಗ ಈ ಗೊಂದಲದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಲೋಕಸಭೆಯ ಚುನಾವಣೆಯಲ್ಲಿ ಇವಿಎಂ ಯಂತ್ರದಲ್ಲಿ ದಾಖಲಾದ ಮತಗಳು ಮತ್ತು ಪ್ರತ್ಯಕ್ಷ ಮಾಡಿರುವ ಮತದಾನದ ಅಂಕಿ ಅಂಶದಲ್ಲಿ ಬಹಳ ವ್ಯತ್ಯಾಸವಿರುವುದನ್ನು ಜಗದೀಶ್ ಛೋಕರ ಇವರು ಬಹಿರಂಗಪಡಿಸಿದ್ದಾರೆ.
Association for Democratic Reforms claims discrepancies in Election Commission’s Lok Sabha voting data.
A similar report was published by the daily ‘Sanatan Prabhat’ a month ago!
This suggests there could be anomalies in the election data. It implies that the results in… pic.twitter.com/vHf32phAhv
— Sanatan Prabhat (@SanatanPrabhat) August 2, 2024
೧. ‘ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್’ ಈ ರಾಜಕೀಯೇತರ ಸಂಸ್ಥೆ ಕಳೆದ ೨೫ ವರ್ಷಗಳಿಂದ ಚುನಾವಣೆ ಮತ್ತು ರಾಜಕಾರಣ ಇದರಲ್ಲಿನ ಸುಧಾರಣೆಗಾಗಿ ಕಾರ್ಯನಿರತವಾಗಿದೆ. ಈ ವಿಷಯದ ಕುರಿತು ಪತ್ರಕರ್ತರ ಸಭೆ ನಡೆಸಿ ಜಗದೀಶ ಛೋಕರ ಇವರು ಈ ಅಂಶಗಳನ್ನು ಮಂಡಿಸಿದರು.
೨. ಇದರಲ್ಲಿ ಅವರು, ದೇಶದಲ್ಲಿನ ೫೪೩ ಲೋಕಸಭಾ ಮತದಾರ ಕ್ಷೇತ್ರಗಳ ಪೈಕಿ ೩೬೨ ಮತದಾರ ಕ್ಷೇತ್ರಗಳಲ್ಲಿ ಎಷ್ಟು ಮತದಾನ ನಡೆದಿದೆ, ಇದಕ್ಕಿಂತಲೂ ಹೆಚ್ಚಾಗಿ, ಪ್ರತ್ಯಕ್ಷ ಮತ ಎಣಿಕೆಯಲ್ಲಿ ೫,೫೪,೫೯೮ ಮತಗಳು ಕಡಿಮೆ ಕಂಡು ಬಂದಿದೆ. ಹಾಗೂ ೧೭೬ ಲೋಕಸಭಾ ಕ್ಷೇತ್ರದಲ್ಲಿನ ಮತ ಎಣಿಕೆಯಲ್ಲಿ ೫,೮೯,೬೫೧ ಮತಗಳು ಹೆಚ್ಚಿರುವುದು ಕಂಡು ಬಂದಿವೆ.
೩. ಈ ರೀತಿ ೫೩೮ ಲೋಕಸಭಾ ಕ್ಷೇತ್ರಗಳಲ್ಲಿನ ಮತದಾನದ ಸಂಖ್ಯೆಯಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಈ ವ್ಯತ್ಯಾಸ ಹೇಗಾಯಿತು ಎಂಬುದರ ಬಗ್ಗೆ ಚುನಾವಣೆ ಆಯೋಗವೇ ಸ್ಪಷ್ಟೀಕರಣ ನೀಡುವುದು ಆವಶ್ಯಕವಾಗಿದೆ.
ದೈನಿಕ ‘ಸನಾತನ ಪ್ರಭಾತ’ವು ತಿಂಗಳ ಹಿಂದೆ ಬಹಿರಂಗಪಡಿಸಿರುವ ಮತಗಳಲ್ಲಿನ ವ್ಯತ್ಯಾಸ !
ದೈನಿಕ ‘ಸನಾತನ ಪ್ರಭಾತ’ದಲ್ಲಿ ‘ಲೋಕಸಭಾ ಚುನಾವಣೆಯಲ್ಲಿ ‘ನೋಟಾ’ ಬಳಸಿರುವ ಅಂಕಿ ಅಂಶಗಳಲ್ಲಿ ೪ ಲಕ್ಷದ ೧೬ ಸಾವಿರ ಮತಗಳ ವ್ಯತ್ಯಾಸ’ ಈ ವರದಿಯನ್ನು ಪ್ರಾಮುಖ್ಯವಾಗಿ ಪ್ರಸಿದ್ಧಿಗೊಳಿಸಿತ್ತು. ಈ ವರದಿಯಲ್ಲಿ ದೇಶದಲ್ಲಿ ಒಟ್ಟು ೬೩ ಲಕ್ಷ ೭೨ ಸಾವಿರದ ೨೨೦ ಮತದಾರರು ನೋಟಾದ ಬಳಕೆ ಮಾಡಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ವೆಬ್ ಸೈಟ್ ನ ಮುಖ್ಯ ಪುಟದಲ್ಲಿ ಈ ಮಾಹಿತಿ ನೀಡಲಾಗಿತ್ತು. ಪ್ರತ್ಯಕ್ಷದಲ್ಲಿ ಆಯೋಗದ ವೆಬ್ ಸೈಟ್ ನಲ್ಲಿ ೩೬ ರಾಜ್ಯಗಳ ಅಂಕಿ ಅಂಶ ಸರಿ ಇದೆಯೇ ಎಂದು ದೈನಿಕ ಸನಾತನ ಪ್ರಭಾತದ ಪ್ರತಿನಿಧಿ ಪರಿಶೀಲಿಸಿದಾಗ ೬೭,೮೮,೪೯೨ ಮತಗಳ ವ್ಯತ್ಯಾಸ ಕಂಡು ಬಂದಿತ್ತು. ಇದರರ್ಥ ನೋಟಾಗೆ ಹಾಕಲಾದ ಮತದಾನದಲ್ಲಿ ನೀವ್ವಳ ೪,೧೬,೨೭೭ ಮತಗಳ ವ್ಯತ್ಯಾಸ ಕಂಡು ಬಂದಿದೆ. ಇದರ ಬಗ್ಗೆ ‘ದೈನಿಕ ಸನಾತನ ಪ್ರಭಾತ’ದಿಂದ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಕಾರ್ಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.
ಚುನಾವಣಾ ಆಯೋಗವು ಜಾಲತಾಣದಲ್ಲಿನ ಅಂಕಿಅಂಶಗಳನ್ನು ತೆಗೆದಿದೆ !ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯ ಚುನಾವಣೆಯ ಅಂಕಿಅಂಶಗಳು ಹಾಗೆ ಇರಿಸಿ ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ೨೦೨೪ ರ ಮತದಾನದ ಅಂಕಿಅಂಶಗಳನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ. ಚುನಾವಣಾ ಆಯೋಗವು ಈ ವಿಷಯದ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡದೆ ಮತದಾನದ ಅಂಕಿ ಅಂಶಗಳನ್ನು ತೆಗೆದಿದ್ದರಿಂದ ಈ ವಿಷಯದ ಬಗ್ಗೆ ಹೆಚ್ಚು ಗೊಂದಲ ನಿರ್ಮಾಣವಾಗಿದೆ. |
ಜಗದೀಪ ಛೋಕರ್ ಇವರ ಸಂದರ್ಶನ ನೋಡಲು ಮುಂದಿನ ಲಿಂಕ ಮೇಲೆ ಕ್ಲಿಕ್ ಮಾಡಿ !
(ಸೌಜನ್ಯ – TV9 Bharatvarsh)
ಸಂಪಾದಕೀಯ ನಿಲುವುಇದರಿಂದ ಚುನಾವಣೆಯ ಅಂಕಿ ಅಂಶದಲ್ಲಿ ದೊಡ್ಡ ಎಡವಟ್ಟು ನಡೆದಿದೆ ಎಂದೇ ಹೇಳಬಹುದು. ಇದರಿಂದ ಯಾವ ಕ್ಷೇತ್ರದಲ್ಲಿ ಅತ್ಯಲ್ಪ ಮತದಿಂದ ಯಾರು ಗೆಲವು ಸಾಧಿಸಿದ್ದಾರೆ ಅಲ್ಲಿನ ತೀರ್ಪಿನಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ. ಇಂತಹ ಸಂಭಾವ್ಯ ತಪ್ಪಿನ ಜವಾಬ್ದಾರಿ ಚುನಾವಣಾ ಆಯೋಗದ್ದೇ ಆಗಿದ್ದು, ಈ ಬಗ್ಗೆ ಅದು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಅವಶ್ಯಕತೆ ಅನಿಸಿದರೆ ಕೆಲವು ಕ್ಷೇತ್ರದಲ್ಲಿ ಮರುಮತ ಎಣಿಕೆ ನಡೆಯಬೇಕು. ಕೇಂದ್ರ ಸರಕಾರ ಹಾಗೂ ಸರ್ವೋಚ್ಚ ನ್ಯಾಯಾಲಯ ಈ ಕಡೆ ಗಮನಹರಿಸುವುದು ಅತ್ಯಾವಶ್ಯಕವಾಗಿದೆ ! |