ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕ ! – ಯೋಗಿ ಆದಿತ್ಯನಾಥ

ಸ್ವಾತಂತ್ರ್ಯನಂತರದ ೭೪ ವರ್ಷಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದ ಕಾರಣ ಇಂದು ದೇಶವು ಜನಸಂಖ್ಯಾಸ್ಫೋಟದ ತುತ್ತತುದಿಯಲ್ಲಿ ನಿಂತಿದೆ. ಈಗ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಸ್ವಲ್ಪವಾದರೂ ಪರಿಣಾಮವಾಗಬಹುದೆಂದು ಅಪೇಕ್ಷಿಸಬಹುದು !

ಕಟ್ಟುನಿಟ್ಟಾದ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ರಚಿಸಿದರೆ ದೇಶದ ಶೇಕಡಾ ೫೦ ರಷ್ಟು ಸಮಸ್ಯೆ ಕಡಿಮೆಯಾಗುತ್ತದೆ ! – ಅಶ್ವಿನಿ ಉಪಾಧ್ಯಾಯ, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಹೇಳಲಾಗುತ್ತದೆ; ಆದರೆ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಈಗಾಗಲೇ ಹತ್ತು ಪಟ್ಟು ಹೆಚ್ಚು ಕಾಲು ಚಾಚಿದೆ. ಭಾರತವು ವಿಶ್ವದ ಶೇಕಡಾ ೨ ರಷ್ಟು ಭೂಮಿಯನ್ನು ಮತ್ತು ಶೇಕಡಾ ೪ ರಷ್ಟು ಕುಡಿಯುವ ನೀರನ್ನು ಹೊಂದಿದೆ; ಆದರೆ ಜನಸಂಖ್ಯೆ ಮಾತ್ರ ಶೇ. ೨೦ ರಷ್ಟಿದೆ.

೫ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕ್ರೈಸ್ತ ಪ್ರಾಧ್ಯಾಪಕನ ಬಂಧನ !

ಬಿಶಪ್ ಹೆಬರ್ ವಿಶ್ವವಿದ್ಯಾಲಯದ ತಮಿಳು ಭಾಷೆಯ ಪ್ರಾಧ್ಯಾಪಕ ಸಿ.ಜೆ. ಪಾಲ ಚಂದ್ರಮೋಹನ ಈತನನ್ನು ಸ್ನಾತಕೋತ್ತರ ವಿಭಾಗದ ೫ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ.

ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ.

ನಮ್ಮ ಪೂರ್ವಜರು ಹಿಂದೂ ರಜಪೂತರಾಗಿದ್ದರು ! – ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್

ಹಿಂದೂ ಸಂಬಂಧಿಕರೊಂದಿಗೆ ಇನ್ನೂ ಅನ್ಯೋನ್ಯವಾಗಿದ್ದೇವೆ. ಯಾರನ್ನೂ ಬಲವಂತವಾಗಿ ಮತಾಂರಿಸಲು ಸಾಧ್ಯವಿಲ್ಲ. ನನಗೆ ಬಂದೂಕಿನಿಂದ ಹೆದರಿಸಿದರೂ ನಾನು ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಯಾರಾದರು ಸ್ವೇಚ್ಛೆಯಿಂದ ಮತಾಂತರಗೊಂಡರೆ ಅದು ಬೇರೆಯೇ ಆಗಿದೆ; ಆದರೆ ಯಾರನ್ನೂ ಬಲವಂತದಿಂದ ಮತಾಂತರವಾಗಲು ರಾಜ್ಯಾಡಳಿತವು ಬಿಡುವುದಿಲ್ಲ ಎಂದು ಹೇಳಿದರು.

ಸಂಭಲ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವಿನ ಅಮಾನುಷ ಹತ್ಯೆ !

ಜಾರಖಂಡಿ ದೇವಾಲಯದ ಓರ್ವ ಮಹಂತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಭರತ ಎಂದು ಅವರ ಹೆಸರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋನು ವಾಲ್ಮಿಕಿ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದು ಆತನಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸದ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ ! – ವಾಟ್ಸ್ ಆಪ್‍ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ ಕಾರಸೇವಕರ ಮನೆಯ ತನಕ ರಸ್ತೆಯನ್ನು ನಿರ್ಮಿಸಿ ಅದಕ್ಕೆ ಅವರ ಹೆಸರಿಡಲಾಗುವುದು !

ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ ರಾಜ್ಯದ ಕಾರಸೇವಕರ ಮನೆಯ ತನಕ ರಸ್ತೆಯನ್ನು ನಿರ್ಮಿಸಲಾಗುವುದು ಮತ್ತು ಅದಕ್ಕೆ ಈ ಕಾರಸೇವಕರ ಹೆಸರನ್ನೂ ಇಡಲಾಗುವುದು, ಜೊತೆಗೆ ಅವರ ಛಾಯಾಚಿತ್ರವನ್ನೂ ಹಾಕಲಾಗುವುದು, ಎಂದು ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇವರು ಘೋಷಣೆ ಮಾಡಿದ್ದಾರೆ.

ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ `ಝಿಕಾ’ ರೋಗಾಣುವಿರುವ ರೋಗಿ !

ಝೀಕಾ ಸೋಂಕಿನ ರೋಗಿ ೮ ದಿನಗಳ ಕಾಲ ಸೋಂಕಿನ ಪ್ರಭಾವದಲ್ಲಿರುತ್ತಾನೆ. ಗರ್ಭಿಣಿಯರಿಗೆ ಝೀಕಾ ರೋಗಾಣುವಿನ ಸೋಂಕಿನ ಅಪಾಯ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಹುಟ್ಟುವ ಮಗು ವಿಕಸಿತಗೊಳ್ಳದ ಮೆದುಳಿನೊಂದಿಗೆ ಹುಟ್ಟುವ ಅಪಾಯ ಹೆಚ್ಚಿರುತ್ತದೆ.