೫ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕ್ರೈಸ್ತ ಪ್ರಾಧ್ಯಾಪಕನ ಬಂಧನ !

ಇಂತಹ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಎಂತಹ ಆದರ್ಶವನ್ನಿಡಬಲ್ಲರು ? ಆರೋಪಿ ಕ್ರೈಸ್ತನಾಗಿದ್ದರಿಂದ ಇಂತಹ ವಾರ್ತೆಗಳನ್ನು ರಾಷ್ಟ್ರೀಯ ಪ್ರಸಾರ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಅದುಮಿಡುತ್ತಾರೆ, ಎಂಬದನ್ನು ಗಮನದಲ್ಲಿಟ್ಟುಕೊಳ್ಳಿ !

ಪ್ರಾಧ್ಯಾಪಕ ಸಿ.ಜೆ. ಪಾಲ್ ಚಂದ್ರಮೋಹನ್

ತಿರುಚಿರಾಪಳ್ಳಿ (ತಮಿಳುನಾಡು) – ಇಲ್ಲಿಯ ಬಿಶಪ್ ಹೆಬರ್ ವಿಶ್ವವಿದ್ಯಾಲಯದ ತಮಿಳು ಭಾಷೆಯ ಪ್ರಾಧ್ಯಾಪಕ ಸಿ.ಜೆ. ಪಾಲ್ ಚಂದ್ರಮೋಹನ್ ಈತನನ್ನು ಸ್ನಾತಕೋತ್ತರ ವಿಭಾಗದ ೫ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆತನ ಮೇಲೆ ಇತರ ಕೆಲವು ಮಹಿಳೆಯರನ್ನೂ ಲೈಂಗಿಕವಾಗಿ ಶೋಷಣೆ ಮಾಡಿರುವ ಆರೋಪವೂ ಇದೆ.