ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ಎಷ್ಟೋ ದಶಕಗಳಿಂದ ನಡೆಯುತ್ತಿರುವ ಮಾದಕ ಪದಾರ್ಥಗಳ ಕಳ್ಳ ಸಾಗಣಿಕೆಯನ್ನು ತಡೆಗಟ್ಟಲಾಗದ ಇಲ್ಲಿಯವರೆಗಿನ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿ!

ನವ ದೆಹಲಿ – ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ. ಮಾದಕದ್ರವ್ಯಗಳನ್ನು ‘ಕಂಟೆನರ್ಸ್’ಗಳಲ್ಲಿ ಅಡಗಿಸಿಟ್ಟು ಸಮುದ್ರ ಮಾರ್ಗದಿಂದ ಮುಂಬಯಿಗೆ ತರಲಾಗುತ್ತದೆ ಮತ್ತು ಅಲ್ಲಿಂದ ದೆಹಲಿಗೆ ಕಳುಹಿಸಲಾಗುತ್ತದೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಈಮಾದಕದ್ರವ್ಯಗಳ ಮೇಲೆ ಪ್ರಕ್ರಿಯೆ ಮಾಡಿ ಅದರ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಅಲ್ಲಿಂದ ಅದನ್ನು ಪಂಜಾಬಗೆ ಕಳುಹಿಸಲಾಗುತ್ತದೆ.